ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡಿದ್ದು, ಕಣದಲ್ಲಿ ಉಳಿದಿರುವ ಬಂಡಾಯಗಾರರು ಹಾಗೂ ಅಸಮಾಧಾನಿತರ ಮನವೊಲಿಕೆ ಕಸರತ್ತನ್ನು ರಾಜಕೀಯ ಪಕ್ಷಗಳು ಆರಂಭಿಸಿವೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಅಮಾವಾಸ್ಯೆ ಹಾಗೂ ಗ್ರಹಣ ಇದ್ದರು ಸಹ ಕಡೆಗಳಿಗೆಯಲ್ಲಿ ಟಿಕೆಟ್​ ದೊರೆತವರು ಬೃಹತ್​ ರೋಡ್​ ಶೋ ನಡೆಸಿ ಉಮೇದುವಾರಿಕೆ ಸಲ್ಲಿಸಿದರು.
ಇಂದು, ಶುಕ್ರವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಏ. 24 ಉಮೇದುವಾರಿಕೆ ವಾಪಸ್​ ಪಡೆಯಲು ಕೊನೆಯ ದಿನವಾಗಿದ್ದು, ಅಂದು ಬಹುತೇಕ ಕಣದ ಅಂತಿಮ ಚಿತ್ರಣ ಸಿಗಲಿದೆ.
ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಬಂಡಾಯ ಕಡಿಮೆ ಇದೆ. ಆದರೂ ಅಲ್ಲಲ್ಲಿ ಕಣದಲ್ಲಿ ಉಳಿದಿರುವ ಬೆರಳೆಣಿಕೆಯಷ್ಟು ಜನರನ್ನು ಹಿಂದಕ್ಕೆ ಸರಿಸುವ ಪ್ರಯತ್ನ ನಡೆದಿದೆ. ಬಹುತೇಕರು ಬೇರೆ ಪಕ್ಷಕ್ಕೆ ಜಿಗಿದು ಅಭ್ಯರ್ಥಿಗಳಾಗಿದ್ದಾರೆ. ಇದರ ಜತೆಗೆ ಟಿಕೆಟ್​ ಸಿಗದೇ ಮುನಿಸಿಕೊಂಡಿರುವವರನ್ನು ಅಧಿಕಾರದ ಆಮಿಷದೊಂದಿಗೆ ಪ್ರಚಾರದಲ್ಲಿ ಸಕ್ರಿಯವಾಗಿರುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ಮುಖಂಡರು ಆರಂಭಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್​ಗಳಲ್ಲಿ ಟಿಕೆಟ್​ ವಂಚಿತರಾದವರು ಅನೇಕ ಕಡೆ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಪದ ಅಧಿಕೃತ ಅಭ್ಯರ್ಥಿ ಗೆಲುವಿಗೆ ಮುಳ್ಳಾಗಬಹುದೆಂದು ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ರಾಜೀ ಸಂಧಾನ ನಡೆಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯ ಸತೀಶ ಜಾರಕಿಹೊಳಿ ರಾಹುಕಾಲದಲ್ಲೆ ನಾಮಪತ್ರ ಸಲ್ಲಿಸಿದರು.
ಹಾಸನದಲ್ಲಿ ಜೆಡಿಎಸ್​ನ ಸ್ವರೂಪ್​ ನಾಮಪತ್ರ ಸಲ್ಲಿಸಿದರು. ಜೆಡಿಎಸ್​ ವರಿಷ್ಠ ಎಚ್​.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್​.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್​, ಸೂರಜ್​ ನೇತೃತ್ವದಲ್ಲಿ ಹಾಸನ ನಗರದಲ್ಲಿ ಬೃಹತ್​ ರೋಡ್​ ಶೋ ನಡೆಯಿತು.
ಕನಕಪುರದಲ್ಲಿ ಸಂಸದ ಡಿ.ಕೆ.ಸುರೇಶ್​ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇಲ್ಲಿ ನಾಮಪತ್ರ ಸಲ್ಲಿಸಿದ್ದು, ಒಂದೊಮ್ಮೆ ತಮ್ಮ ನಾಮಪತ್ರ ತಿರಸತವಾದರೆ ಇರಲಿ ಎಂದು ಹೆಚ್ಚುವರಿಯಾಗಿ ಸಹೋದರ ಡಿ.ಕೆ.ಸುರೇಶ್​ ಅವರಿಂದಲೂ ನಾಮಪತ್ರ ಹಾಕಿಸಿದ್ದಾರೆ ಎನ್ನಲಾಗಿದೆ. ಆದರೆ, ವಿವಿಧ ಕಾರಣಗಳು ಹಾಗೂ ಕಾನೂನಿನ ತೊಡಕುಗಳು ಇರುವುದರಿಂದ ಕೊನೇ ಕ್ಷಣದಲ್ಲಿ ತಮ್ಮ ಹೆಸರು ಅನರ್ಹಗೊಳಿಸಬಹುದೆಂಬ ಸುಳಿವು ಅರಿತು ಡಿಕೆಶಿ ತಮ್ಮನಿಂದ ನಾಮಪತ್ರ ಸಲ್ಲಿಸಿರಬಹುದು. ನಾಮಪತ್ರ ಸಲ್ಲಿಸಿ 24 ಗಂಟೆಯೊಳಗೆ ಆಯೋಗವು ಇವರ ಆಸ್ತಿಯ ಅಫಿಡವಿಟ್​ ಪರಿಶೀಲನೆ ನಡೆಸಿದ್ದನ್ನು ಡಿಕೆಶಿಗೆ ತಿಳಿಸಿದ್ದು ಯಾರು? ಆಯೋಗದ ಗೌಪ್ಯತೆಯನ್ನು ಮೀರಿ ಅದರ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಶಿವಮೊಗ್ಗ ನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಆಯನೂರು ಮಂಜುನಾಥ್​ ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದರೆ, ಚಿಕ್ಕಪೇಟೆ ಕ್ಷೇತ್ರದ ಆಕಾಂಯಾಗಿದ್ದ ಕೆಜಿಎ್​ ಬಾಬು, ಮಂಗಳೂರು ಉತ್ತರ ಕ್ಷೇತ್ರದ ಆಕಾಂ ಮೊಹಿದ್ದೀನ್​ ಬಾವ ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟಿದ್ದಾರೆ. ಬೆಳಗಾವಿ, ಧಾರವಾಡ, ಬಳ್ಳಾರಿ, ವಿಜಯನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಬಂಡಾಯವಿದೆ. ಕಾಂಗ್ರೆಸ್​ ಮತ್ತು ಬಿಜೆಪಿಯಿಂದ ಬಂದವರಿಗೆ ಮಣೆ ಹಾಕಿರುವುದರಿಂದ ಜೆಡಿಎಸ್​ನಲ್ಲಿ ಭಿನ್ನಮತ ಅಷ್ಟೊಂದು ಕಾಣಿಸಿಕೊಂಡಿಲ್ಲ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​ ವಂಚಿತರಾದ ಮಾಜಿ ಶಾಸಕ ಮೊಹಿದ್ದೀನ್​ ಬಾವ ಜೆಡಿಎಸ್​ನಿಂದ ಸ್ಪರ್ಧೆಗಿಳಿದಿದ್ದಾರೆ.
ಗುರುಮಿಠಕಲ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಬಾಬುರಾವ್​ ಚಿಂಚನಸೂರ್​ ಪರವಾಗಿ ಅವರ ಪತ್ನಿ ಅಮರೇಶ್ವರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಪಘಾತದಲ್ಲಿ ಚಿಂಚನಸೂರ್​ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ದೇವರು ಜೀವದಾನ ನೀಡಿದ್ದಾನೆ. ಪತಿ ಪರವಾಗಿ ಮತ ನೀಡಿ’ ಎಂದು ಅಮರೇಶ್ವರಿ ಸೆರಗೊಡ್ಡಿ ಮತಭಿಕ್ಷೆ ಕೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
