ಬೆಂಗಳೂರು:ಬಡ್ತಿ ಸಮಸ್ಯೆ ಬಗೆಹರಿಸುವುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಸಹಕಾರ ಚಳವಳಿ ನಡೆಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
2010ನೇ ಸಾಲಿನಲ್ಲಿ ಕರ್ತವ್ಯಕ್ಕೆ ಹಾಜರಾದ ಪಿಡಿಒಗಳಿಗೆ ಬಡ್ತಿ ನೀಡುವಾಗ ವ್ಯತ್ಯಾಸವಾಗಿತ್ತು. ಸರ್ಕಾರದ ನೇಮಕಾತಿ ಆದೇಶದ ಪ್ರಕಾರ 2010ರ ಏಪ್ರಿಲ್ 5ರಂದು ಕರ್ತವ್ಯಕ್ಕೆ ಹಾಜರಾದವರಿಗೆ ಬಡ್ತಿ ನೀಡಿದ್ದರೆ, ಏಪ್ರಿಲ್ 27ರಂದು ನೇಮಕಗೊಂಡವರಿಗೆ ಅವಕಾಶ ನೀಡಲಿಲ್ಲ. ಮೊದಲು ಕರ್ತವ್ಯಕ್ಕೆ ಹಾಜರಾದವರಿಗೆ ಡಬಲ್ ಬಡ್ತಿಯೂ ಸಿಕ್ಕಿತ್ತು. ಈ ಜೇಷ್ಠತಾ ಲೋಪವನ್ನು ಹಿಂದಿನ ಬೊಮ್ಮಾಯಿ ಸರ್ಕಾರ ವಿಧಾನ ಮಂಡಲ ಕಲಾಪದ ವೇಳೆಯೂ ಒಪ್ಪಿಕೊಂಡಿತ್ತು. ಇದನ್ನು ಸರಿಪಡಿಸಿಕೊಳ್ಳುವುದಾಗಿ ಎಂದು ಕೋರ್ಟ್​ಗೆ ತಿಳಿಸಿತ್ತು. ಆದರೂ ಕಾಣದ ಕೈಗಳು ಬಡ್ತಿ ನೀಡುವ ವಿಷಯದಲ್ಲಿ ಅಡ್ಡಿಯಾಗುತ್ತಿರುವುದು ಪಿಡಿಒಗಳ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ಪಿಡಿಒಗಳ ಜೇಷ್ಠತೆಗೆ ಸಂಬಂಧಿಸಿದಂತೆ ಅಡ್ವೋಕೇಟ್ ಜನರಲ್ ನೇತೃತ್ವದ ಸಮಿತಿ ವರದಿ ಕೊಟ್ಟಿತ್ತು. ಆದರೆ ವರದಿಯನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಲು ಹಿಂದೇಟು ಹಾಕುತ್ತಿದೆ. ಹೀಗಾಗಿ 347 ಪಿಡಿಒಗಳಿಗೆ ನ್ಯಾಯ ಒದಗಿಸಬೇಕು ಎಂದು ಪಿಡಿಒಗಳು ದನಿ ಎತ್ತಿದ್ದಾರೆ.
ಕೋರ್ಟ್ 347 ಪಿಡಿಒಗಳಿಂದಲೂ ಅಭಿಪ್ರಾಯ ಸಂಗ್ರಹಿಸಿತ್ತು. ಎಲ್ಲರೂ ತಮಗಾದ ಅನ್ಯಾಯದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈಗಾಗಲೇ ಬಡ್ತಿ ಪಡೆದವರಿಗೆ ಹಿಂಬಡ್ತಿ ನೀಡಿ ಎಂದು ಕೇಳುವುದಿಲ್ಲ, ಆದರೆ ನಮ್ಮನ್ನು ಕಡೆಗಣಿಸಬೇಡಿ ಎಂದಿದ್ದರು. ಈ ನಡುವೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪಿಡಿಒಗಳು ಧರಣಿ ನಡೆಸಿದಾಗ ಕಾಂಗ್ರೆಸ್ ನಾಯಕರು ಅವರ ಪರ ದನಿ ಎತ್ತಿದ್ದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಹ ಪ್ರತಿಭಟನಾ ಸ್ಥಳಕ್ಕೆ ಭೇಟಿಕೊಟ್ಟು ಬೆಂಬಲಿಸಿ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಇದೀಗ ಅವರದೇ ಸರ್ಕಾರ ಬಂದರೂ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ ಎಂಬುದು ಪಿಡಿಒಗಳ ಬೇಸರವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಈ ವಿಚಾರದ ಅರಿವಿದೆ. ಆದರೂ ಅಧಿಕಾರಿಗಳು ಅವರ ಕೈಕಟ್ಟಿದ್ದಾರೆ. ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಐಎಎಸ್ ಲಾಬಿಯೂ ಕೆಲಸ ಮಾಡುತ್ತಿದೆ ಎಂಬ ಗುರುತರ ಆರೋಪ ಕೇಳಿಬಂದಿದೆ.
ಸೇವೆ ಕಡಿತ:ಬಡ್ತಿ ನೀಸಲು ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೆ.8 ರಿಂದ ಅಸಹಕಾರ ಚಳಚಳಿ ನಡೆಸಲಿದೆ. ಜನರಿಗೆ ಅಗತ್ಯ ಸೇವೆ ಮಾತ್ರ ನೀಡುತ್ತೇವೆ. ಎಲ್ಲ ಆನ್​ಲೈನ್ ಸೇವೆ ಬಂದ್ ಮಾಡುತ್ತೇವೆ ಎಂದು ಸಂಘ ಹೇಳಿದೆ. ಜೇಷ್ಠತಾ ಪಟ್ಟಿ ವಿಚಾರದಲ್ಲಿ ಹೈಕೋರ್ಟ್ ಕೊಟ್ಟಿರುವ ಕಾಲಮಿತಿ ಆದೇಶವನ್ನು ಸರ್ಕಾರ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ವರ್ಗಾವಣೆ ಪ್ರಕ್ರಿಯೆ ಸರಿಯಾಗಿ ನಿಭಾಯಿಸದೇ ಗೊಂದಲ ಉಂಟುಮಾಡಲಾಗಿದೆ. ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ಬಿ ದರ್ಜೆಗೆ ಮೇಲ್ದರ್ಜೆಗೇರಿಸದೆ ಇರುವುದು, ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ಸೇರಿಸದೆ ಇರುವುದು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ನೇಮಕ ಮಾಡದೇ ಕೆಲಸದ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಈ ಅಸಹಕಾರ ಚಳವಳಿ ನಡೆಸಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷ ರಾಜು ವಾರದ ತಿಳಿಸಿದ್ದಾರೆ.
ಆನ್​ಲೈನ್ ಸೇವೆ ಬಂದ್:ಸೆ.8ರ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಪಿಡಿಒಗಳು ರಾಜ್ಯ, ಜಿಲ್ಲೆ ಹಾಗೂ ತಾಲೂಕು ವಾಟ್ಸ್ ಆಪ್/ಟೆಲಿಗ್ರಾಂ ಗುಂಪುಗಳಿಂದ ಹೊರ ಬರುವುದರೊಂದಿಗೆ ಆನ್​ಲೈನ್ ಸೇವೆಗಳನ್ನು ಸ್ಥಗಿತಗೊಳಿಸಿ ಮೇಲಧಿಕಾರಿಗಳು ಕರೆಯುವ ಸಭೆಗೂ ಗೈರು ಹಾಜರಾಗುತ್ತೇವೆ. ಸೆ.14 ರಂದು ಬೆಂಗಳೂರಿನ ಪಂಚಾಯತ್ ರಾಜ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘ ಎಚ್ಚರಿಸಿದೆ.
ಉದ್ಯಮಿ ಮನೆ ಮೇಲೆ ಗುಂಡಿನ ದಾಳಿ, ಪುತ್ರ ಕೂದಲೆಳೆಯ ಅಂತರದಲ್ಲಿ ಪಾರು; ನಾಯಿಗಳಿಗೆ ಗುಂಡು ತಾಗಿ 1 ಶ್ವಾನ ಸಾವು

ಪತ್ತೆ ಆಯ್ತು ಅನುಮಾನಾಸ್ಪದ ಬುತ್ತಿ; ಟಿಫನ್​ ಬಾಕ್ಸ್​ನಲ್ಲಿ ಸ್ಫೋಟಕ ವಸ್ತು ಇರುವ ಶಂಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 1 =
Remember me
