ಬೆಂಗಳೂರು:ಚುನಾವಣಾ ರಾಜಕಾರಣದಲ್ಲಿ ಬಗೆಬಗೆಯ ತಂತ್ರಗಾರಿಕೆ ನಡೆಯುತ್ತವೆ. ತೀವ್ರ ಪೈಪೋಟಿ ಎದುರಾದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಎದುರಾಳಿ ಅಭ್ಯರ್ಥಿ ಹೆಸರಿನವರನ್ನೇ ಹುಡುಕಿ ಪಕ್ಷೇತರರಾಗಿ ಕಣಕ್ಕಿಳಿಸಿ ಮತದಾರರಲ್ಲಿ ಗಲಿಬಿಲಿ ಮೂಡಿಸುವ ಚತುರತೆ ನಡೆಸುತ್ತವೆ. ಈ ಹಿಂದಿನ ಚುನಾವಣೆಗಳಲ್ಲಿ ಇಂತಹ ಬೆಳವಣಿಗೆ ಸಾಕಷ್ಟು ಕಂಡು ಬಂದಿದೆ. ಅನೇಕ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ಪಕ್ಷೇತರರು ಯಾರ ಕೈಗೂ ಸಿಗದೆ ಕ್ಷೇತ್ರದಿಂದ ನಾಪತ್ತೆಯಾಗಿಬಿಡುತ್ತಾರೆ. ಬಹುತೇಕ ಎಲ್ಲ ಸಂದರ್ಭದಲ್ಲೂ ಈ ತಂತ್ರಗಾರಿಕೆ ಕೆಲಸ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಒಂದೋ ಎರಡೋ ಸಂದರ್ಭದಲ್ಲಿ ಗೆಲುವಿನ ಅಂತರ ಮತ್ತು ಇಂತಹ ಡಮ್ಮಿ ಅಭ್ಯರ್ಥಿಗಳು ಪಡೆದ ಮತ ಬಹಳ ಹತ್ತಿರ ಹತ್ತಿರ ಇರುವ ಉದಾಹರಣೆ ಇದೆ.
2019ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಎದುರು ಎಸ್.ಅಣ್ಣಾಸಾಹೇಬ್ ಎಂಬ ಪಕ್ಷೇತರರ ಕಣಕ್ಕಿಳಿದು 4906 ಮತ ಪಡೆದಿದ್ದರು. ಚಿತ್ರದುರ್ಗದಲ್ಲಿ ಬಿಜೆಪಿಯ ಎ.ನಾರಾಯಣಸ್ವಾಮಿ ಎದುರು ಸ್ಪರ್ಧಿಸಿದ್ದ ಪಕ್ಷೇತರ ಸಿ.ಎಚ್.ನಾರಾಯಣಸ್ವಾಮಿ 3802 ಮತ ಪಡೆದರು. ಆ ಚುನಾವಣೆಯ ರಣರೋಚಕ ಎನಿಸಿಕೊಂಡ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಎಂಬುವರು ನಾಲ್ಕು ಮಂದಿ ಇದ್ದರು. ಸುಮಲತಾ ಅಂಬರೀಶ್ ಅವರನ್ನು ಕಂಗಾಲು ಮಾಡಲು ಮತ್ತೆ ಮೂವರು ಕಣದಲ್ಲಿದ್ದರು. ಒಬ್ಬಾಕೆ ಸುಮಲತಾ 8902 ಮತ ಪಡೆದಿದ್ದರೆ, ಎಂ.ಸುಮಲತಾ 8542 ಹಾಗೂ ಮಗದೊಬ್ಬರು ಸುಮಲತಾ 3119 ಮತ ಪಡೆದರು.
2014ರಲ್ಲಿ ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಜತೆ ಶಿವಕುಮಾರ್ ಎಂಬುವರೂ ಕಣದಲ್ಲಿದ್ದರು. ಅವರು 3780 ಮತ ಪಡೆದಿದ್ದರು. ಹಾಗೆಯೇ ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ಜತೆಗೆ ಜಿ.ಎಂ.ಸಿದ್ದೇಶಿ ಕಣದಲ್ಲಿದ್ದು 2732 ಮತ ಗಳಿಸಿದ್ದರು.
ಅದೇ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್​ನ ಪುಟ್ಟರಾಜು ಹೆಸರಿನ ಎನ್.ಸಿ.ಪುಟ್ಟರಾಜು ಕಣದಲ್ಲಿದ್ದು 4021 ಮತ ಪಡೆದುಕೊಂಡರು. ವಿಶೇಷವೆಂದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವಿನ ಗೆಲುವಿನ ಅಂತರ 5518 ಮತಗಳಾಗಿತ್ತು. ಕೋಲಾರದಲ್ಲಿ ಇಎಂ ನಾರಾಯಣಸ್ವಾಮಿಗೆ ಎದುರಾಗಿ ಇಬ್ಬರು ನಾರಾಯಣಸ್ವಾಮಿ ಕಣದಲ್ಲಿದ್ದರು, ಅವರು ಕ್ರಮವಾಗಿ 1517 ಹಾಗೂ 1291 ಮತ ಪಡೆದುಕೊಂಡಿದ್ದರು.
2009ರ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಯ ಜಿ.ಎಂ.ಸಿದ್ದೇಶ್ವರ ಜತೆ ಜಿ.ಎಂ.ಸಿದ್ದೇಶಿ ಕಣದಲ್ಲಿದ್ದು 1292 ಮತ ಪಡೆಯುವಲ್ಲಿ ಸಫಲರಾಗಿದ್ದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್​ನ ಎಚ್.ಡಿ.ಕುಮಾರಸ್ವಾಮಿ ಹೆಸರಿನ ಕುಮಾರಸ್ವಾಮಿ 2054 ಮತ ಗಳಿಸಿಬಿಟ್ಟಿದ್ದರು. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಜತೆ ಸಿ.ಕೆ.ಮುನಿಯಪ್ಪ ಕೂಡ ಕಣದಲ್ಲಿದ್ದರು. 2004ರಲ್ಲಿ ದಾವಣಗೆರೆಯಲ್ಲಿ ಕಾಂಗ್ರೆಸ್​ನ ಎಸ್.ಎಸ್.ಮಲ್ಲಿಕಾರ್ಜುನ್ ಎದುರಾಗಿ ಮಲ್ಲಿಕಾರ್ಜುನ ಸ್ವಾಮಿ ಕಣದಲ್ಲಿದ್ದರು. ಅವರು ಗಳಿಸಿದ್ದು ಬರೋಬ್ಬರಿ 12338 ಮತ. ಆ ಕ್ಷೇತ್ರದಲ್ಲಿ ಗೆಲುವಿನ ಅಂತರ 32 ಸಾವಿರ ಮತಗಳಾಗಿತ್ತು. 1998ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೆವಿಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಎಸ್.ಬಂಗಾರಪ್ಪ ಎದುರಾಗಿ ಎಚ್.ಬಂಗಾರಪ್ಪ ಕಣದಲ್ಲಿದ್ದರು.
ಆಯೋಗದಲ್ಲಿ ಸುಧಾರಣೆ:ಇಂತಹ ಬೆಳವಣಿಗೆಗಳಿಗೆ ಅವಕಾಶ ಕೊಡಬಾರದರು, ನ್ಯಾಯಸಮ್ಮತ ಚುನಾವಣೆ ನಡೆಯಬೇಕೆಂದು ಆಯೋಗ ಸಾಕಷ್ಟು ಸುಧಾರಣೆ ಕ್ರಮಗಳನ್ನು ಮಾಡಿಕೊಂಡೇ ಬಂದಿದೆ. ಬ್ಯಾಲೆಟ್ ಪೇಪರ್ ಬಳಕೆ ಸಂದರ್ಭದಲ್ಲಿ ಒಂದಷ್ಟು ಮತದಾರರಿಗೆ ಗೊಂದಲ ಆಗುತ್ತಿದ್ದಿರಬಹುದು. ಇವಿಎಂ ಬಂದ ಬಳಿಕ ಅಭ್ಯರ್ಥಿ ಹೆಸರು ಚಿನ್ಹೆ ಇದ್ದಾಗಲೂ ಸಣ್ಣ ಪ್ರಮಾಣದ ಗೊಂದಲ ಉಂಟಾಗುತ್ತಿತ್ತು. ಇವಿಎಂನಲ್ಲಿ ಅಭ್ಯರ್ಥಿಯ ಫೋಟೋ ಬಳಕೆ ಮಾಡಿದ ಬಳಿಕ ಪಕ್ಷಗಳ ಅಭ್ಯರ್ಥಿಗಳು ಕೊಂಚ ನಿರಾಳರಾಗಿದ್ದಾರೆ. ಪಕ್ಷಗಳ ಚಿನ್ಹೆಯಡಿ ಸ್ಪರ್ಧಿಸಿದ ಅಭ್ಯರ್ಥಿಗಳ ಹೆಸರಿನ ಪಕ್ಷೇತರರು ಸ್ಪರ್ಧಿಸಬಾರದೇ ಎಂಬ ವಾದವೂ ಕೇಳಿಬಂದಿತ್ತು. ಹೀಗಾಗಿಯೇ ಆಯೋಗ ಅಭ್ಯರ್ಥಿ ಫೋಟೋ, ಪಕ್ಷದ ಚಿನ್ಹೆ, ಅಭ್ಯರ್ಥಿ ಹೆಸರನ್ನು ಇವಿಎಂನಲ್ಲಿ ನಮೂದಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಜತೆಗೆ ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷಕ್ಕೆ ಇವಿಎಂನಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ. ಪಕ್ಷೇತರರ ಹೆಸರು ಕೊನೆಯಲ್ಲಿ ಪ್ರಕಟಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 8 =
Remember me
