ಬಾಗಲಕೋಟೆ:ಆ ಪೊಲೀಸ್ ಪೇದೆ ಕರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿಯೇ ಇಲ್ಲ. ಆದರೂ ಅವರ ಮೊಬೈಲ್​ಗೆ ಬಂದ ಕರೆಯೊಂದು, ‘ನಿಮ್ಮ ವರದಿ ಪಾಸಿಟಿವ್​ ಬಂದಿದೆ, ಕೋವಿಡ್​ ಆಸ್ಪತ್ರೆಗೆ ದಾಖಲಾಗಲು ಬೇಗ ತಯಾರಿ ಮಾಡಿಕೊಳ್ಳಿ’ ಅಂದ್ರೆ ಹೇಗಾಗಬೇಡ?
ಕೋವಿಡ್​ ಹೆಸರು ಕೇಳಿದ್ರೇನೇ ಜನರು ಮಾರುದ್ದ ಓಡಿಹೋಗ್ತಾರೆ. ಅಂತಹದ್ದರಲ್ಲಿ ಕರೊನಾ ಪರೀಕ್ಷೆಗೆ ಮಾಡಿಸಿಕೊಳ್ಳದ ಪೊಲೀಸ್​ ಪೇದೆಯೊಬ್ಬರಿಗೆ, ‘ನಿಮ್ಮಿಂದ ಸಂಗ್ರಹಿಸಿದ್ದ ಗಂಟಲು ದ್ರವ ಮಾದರಿಯ ವರದಿ ಪಾಸಿಟಿವ್​ ಬಂದಿದೆ’ ಎಂದು ಸ್ವತಃ ಆರೋಗ್ಯ ಸಿಬ್ಬಂದಿಯೇ ಹೇಳಿದ್ದಾರೆ. ವಿಷಯ ಕೇಳಿದ ಪೇದೆ ಬೆಚ್ಚಿದ್ದಾರೆ. ಅಂದಹಾಗೆ ಈ ಕಾಲ್​ ಬಂದದ್ದು ಬಾಗಲಕೋಟೆ ಗ್ರಾಮೀಣ ಠಾಣೆಯ 54 ವರ್ಷದ ಪೇದೆಗೆ.
ಇದನ್ನೂ ಓದಿರಿಮದುವೆ ತಂದ ಆಪತ್ತು; ಕೋವಿಡ್​ಗೆ ವರನ ತಂದೆ, ವಧುವಿನ ತಾಯಿ ಬಲಿ; ಒಂದೇ ಕುಟುಂಬದ 32 ಜನರಿಗೆ ಸೋಂಕು
ಕರೊನಾ ಪರೀಕ್ಷೆಗೆ ಮಾಡಿಸಿಕೊಳ್ಳಲೆಂದು ಗ್ರಾಮೀಣ ಠಾಣೆಯ ಮೂವರು ಪೊಲೀಸ್​ ಸಿಬ್ಬಂದಿ ಬಾಗಲಕೋಟೆಯ ಆಸ್ಪತ್ರೆಯಲ್ಲಿ ಒಪಿಡಿ ಚೀಟಿ ಬರೆಸಿದ್ದರು. ವಿಳಂಬ ಆಗಿದ್ದಕ್ಕೆ ಸ್ವ್ಯಾಬ್ ಕೊಡದೇ ವಾಪಸ್​ ಬಂದಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದು, ಬೇರೆ ಯಾರದ್ದೋ ಸ್ವ್ಯಾಬ್​ ಸಂಗ್ರಹಿಸಿ ಅದನ್ನು ಆ ಮೂವರು ಪೊಲೀಸ್​ ಸಿಬ್ಬಂದಿ ಪೈಕಿ ಒಬ್ಬ ಪೇದೆ ಹೆಸರನ್ನು ಹಾಕಿಬಿಟ್ಟಿದ್ದಾರೆ. ವಾಸ್ತವದಲ್ಲಿ ಆ ಸಿಬ್ಬಂದಿ ಗಂಟಲ ದ್ರವ ಮಾದರಿಯನ್ನು ಕೊಟ್ಟಿಯೇ ಇಲ್ಲ.
ಈಗ ದಿಢೀರನೇ ಒಬ್ಬ ಪೊಲೀಸ್​ಗೆ ಫೋನ್ ಮಾಡಿ, ನಿಮಗೆ ಪಾಸಿಟಿವ್ ಇದೆ. ಬೇಗ ಆಸ್ಪತ್ರೆಗೆ ದಾಖಲಾಗಿ ಎಂದಿದ್ದಾರೆ. ಸ್ವ್ಯಾಬ್ ಕೊಡದಿದ್ರೂ ಪಾಸಿಟಿವ್ ರಿಪೋರ್ಟ್ ಬಂದಿರುವುದನ್ನ ಕೇಳಿ ಪೇದೆಗೆ ಬಿಗ್ ಶಾಕ್ ಆಗಿದೆ.
video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
