ಚಿಕ್ಕಮಗಳೂರು:ಇಡೀ ದೇಶ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಸಂಭ್ರಮದಲ್ಲಿರುವಾಗಲೇ ಹಿರೇಮಗಳೂರಿನಲ್ಲಿ 4 ದಶಕಗಳಿಂದ ಶ್ರೀ ಕೋದಂಡರಾಮ ದೇವರ ಪೂಜೆ ಮಾಡುತ್ತಿರುವ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್​ಗೆ ಸರ್ಕಾರ ಶಾಕ್ ನೀಡಿದೆ. ನಿಗದಿಗಿಂತ ಹೆಚ್ಚುವರಿಯಾಗಿ ಪಾವತಿಯಾಗಿರುವ ಗೌರವಧನ ವಾಪಸ್ ಕೊಡುವಂತೆ ಕಣ್ಣನ್​ಗೆ ತಹಸೀಲ್ದಾರ್ ನೋಟಿಸ್ ನೀಡಿದ್ದಾರೆ. ಜತೆಗೆ ಅವರ ಮಾಸಿಕ ಗೌರವಧನವನ್ನೂ ತಡೆಹಿಡಿಯಲಾಗಿದೆ.
ಕಳೆದ 10 ವರ್ಷಗಳಿಂದ ಕಣ್ಣನ್​ಗೆ ನಿಗದಿಗಿಂತ ಹೆಚ್ಚುವರಿಯಾಗಿ ಗೌರವಧನ ಪಾವತಿಯಾಗಿದೆ. ಆಡಿಟಿಂಗ್ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ 4.74 ಲಕ್ಷ ರೂ.ಗಳನ್ನು ದೇವಾಲಯದ ಖಾತೆಗೆ ಮರುಪಾವತಿಸುವಂತೆ ಸೂಚಿಸಲಾಗಿದೆ ಎನ್ನುವುದು ತಹಸೀಲ್ದಾರ್ ಸಮಜಾಯಿಷಿ.
2017ಕ್ಕಿಂತ ಮೊದಲು ಮಾಸಿಕ 2 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿತ್ತು. 2017ರಿಂದ ಗೌರವ ಧನವನ್ನು 4 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಆದರೆ ಕಣ್ಣನ್​ಗೆ 2013ರಿಂದಲೂ ಮಾಸಿಕ 7,500 ರೂ. ನೀಡಲಾಗುತ್ತಿದೆ. ಹೀಗಾಗಿ 2013ರಿಂದ 2017ರವರೆಗೆ ಪ್ರತಿವರ್ಷ 66 ಸಾವಿರ ರೂ. ಹೆಚ್ಚುವರಿ ಗೌರವಧನ ನೀಡಲಾಗಿದೆ. ಹೀಗಾಗಿ ಹೆಚ್ಚುವರಿ ಬಾಬ್ತು 4.74 ಲಕ್ಷ ರೂ.ಗಳನ್ನು ಕೂಡಲೇ ತುಂಬುವಂತೆ ಸೂಚನೆ ನೀಡಲಾಗಿದೆ.
ಹಿರೇಮಗಳೂರು ಕಣ್ಣನ್ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ನಿತ್ಯವೂ ಸೀತಾ, ರಾಮ, ಲಕ್ಷ್ಮಣರಿಗೆ ಕನ್ನಡದಲ್ಲೇ ಮಂತ್ರಘೊಷಗಳಿಂದ ಪೂಜೆ ಸಲ್ಲಿಸುವುದು ವಿಶೇಷ. ರಾಜ್ಯ, ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ.
ಆದಾಯಕ್ಕಿಂತ ಖರ್ಚು ಹೆಚ್ಚು:ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಆದಾಯಕ್ಕಿಂತ ಖರ್ಚೇ ಹೆಚ್ಚಿದೆ ಎಂದು ಕಣ್ಣನ್​ಗೆ ನೀಡಿರುವ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದಿಂದ ದೇವಾಲಯಕ್ಕೆ ಬರುವ ತಸ್ತೀಕ್ 60 ಸಾವಿರ ರೂ., ಹುಂಡಿ ಹಣ 40 ಸಾವಿರ ರೂ. ಸೇರಿ ಒಟ್ಟು ವಾರ್ಷಿಕ ಒಂದು ಲಕ್ಷ ರೂ. ಆದಾಯವಿದೆ. ಆದರೆ ವಿದ್ಯುತ್ ಬಿಲ್ 26,400 ರೂ., ವಾರ್ಷಿಕ ರಥೋತ್ಸವದ ಬಾಬ್ತು 30 ಸಾವಿರ, ಅರ್ಚಕರ ವೇತನ 90 ಸಾವಿರ ರೂ. ಸೇರಿ ವಾರ್ಷಿಕ ಒಟ್ಟು 1.46 ಲಕ್ಷ ರೂ. ಖರ್ಚಾಗುತ್ತಿದೆ ಎಂಬುದು ಇಲಾಖೆಯ ಸ್ಪಷ್ಟನೆ.
ಕಳೆದ ನಾಲ್ಕು ದಶಕಗಳಿಂದ ಹಿರೇಮಗಳೂರು ದೇಗುಲದ ಪ್ರಧಾನ ಅರ್ಚಕನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಬರುವ ಅಲ್ಪ ವೇತನದಲ್ಲೇ ದೇವಾಲಯದ ಎಣ್ಣೆ, ಬತ್ತಿ, ಕರ್ಪರ, ಗಣ್ಯರು, ಗುರುಗಳ ಆಗಮನದಂತಹ ಖರ್ಚು-ವೆಚ್ಚ ನಿಭಾಯಿಸುತ್ತಿದ್ದೇವೆ. ಹೀಗಿರುವಾಗ ಅರ್ಚಕರಿಗೆ ಕೊಟ್ಟಿರುವ ಹೆಚ್ಚುವರಿ ವೇತನವನ್ನು ವಾಪಸ್ ಕಟ್ಟಿ ಎಂದರೆ ಹೇಗೆ ಸಾಧ್ಯ? ಯಾವ ಅರ್ಚಕರಿಗೂ ಈ ರೀತಿ ಆಗಬಾರದು.
| ಹಿರೇಮಗಳೂರು ಕಣ್ಣನ್ ಪ್ರಧಾನ ಅರ್ಚಕ
ಹಿರೇಮಗಳೂರು ಕಣ್ಣನ್​ಗೆ ಉದ್ದೇಶಪೂರ್ವಕವಾಗಿ ನೋಟಿಸ್ ನೀಡಿಲ್ಲ. ಇದೊಂದು ಕಾನೂನು ಪ್ರಕ್ರಿಯೆ. ಕಳೆದ 10 ವರ್ಷಗಳಿಂದ ಕಣ್ಣನ್​ಗೆ ಹೆಚ್ಚುವರಿಯಾಗಿ ಗೌರವಧನ ಪಾವತಿ ಮಾಡಲಾಗಿದೆ. ಆಡಿಟಿಂಗ್​ನಲ್ಲಿ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ನೋಟಿಸ್ ನೀಡಲಾಗಿದೆಯೇ ಹೊರತು ಬೇರೆ ಉದ್ದೇಶವಿಲ್ಲ.
| ಸುಮಂತ್ ಚಿಕ್ಕಮಗಳೂರು ತಹಸೀಲ್ದಾರ್
ರಾಜ್ಯ ಸರ್ಕಾರ ಮುಜರಾಯಿ ದೇವಾಲಯ ಗಳ ಅರ್ಚಕರ ಗೌರವಧನಕ್ಕೂ ಕತ್ತರಿ ಹಾಕಿದೆ. ಚಿಕ್ಕಮಗಳೂರು ಜಿಲ್ಲೆ ಹಿರೇಮಗಳೂರು ಕೋದಂಡರಾಮ ದೇವಸ್ಥಾನದ ಪ್ರಧಾನ ಅರ್ಚಕ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ವೇತನಕ್ಕೆ ಕತ್ತರಿ ಹಾಕಿ ನೋಡಿಸ್ ನೀಡಿರುವುದು ಅಕ್ಷಮ್ಯ.
| ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ
ಸಂಬಳಕ್ಕೂ ಕೊಕ್ಕೆದೇವಾಲಯದ ಆದಾಯ ಕಡಿಮೆ ಇರುವುದರಿಂದ ಸಂಬಳ ವಾಪಸ್ ನೀಡುವಂತೆ ಸರ್ಕಾರ ತಿಳಿಸಿದೆ. ಕಣ್ಣನ್ ಖಾತೆಗೆ ಪ್ರತಿ ತಿಂಗಳು 7,500 ರೂ. ಜಮೆಯಾಗುತ್ತಿತ್ತು. ಇದೀಗ 7,500 ರೂ. ಸಂಬಳದಲ್ಲಿ 4,500 ವಾಪಸ್ ನೀಡಲು ಸೂಚಿಸಲಾಗಿದೆ.
ಅಧಿಕಾರಿಗಳಿಂದ ಹಣ ಪಡೆಯಿರಿಹಿರೇಮಗಳೂರು ಕಣ್ಣನ್​ಗೆ ನೀಡಿದ್ದ ಹೆಚ್ಚುವರಿ ಗೌರವಧನ ಮರುಪಾವತಿಯ ನೋಟಿಸನ್ನು ವಾಪಸ್ ಪಡೆಯುವಂತೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಕಣ್ಣನ್​ಗೆ ನೋಟಿಸ್ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಮುಜರಾಯಿ ಇಲಾಖೆಯಿಂದಲೇ ಪ್ರಕಟಣೆ ಹೊರಡಿಸಿ ಕೂಡಲೇ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದಾರೆ. ಕಣ್ಣನ್​ಗೆ ತಪ್ಪಾಗಿ ಹೆಚ್ಚು ಗೌರವಧನ ಪಾವತಿ ಮಾಡಿರುವ ಅವಧಿಯಲ್ಲಿದ್ದ ತಹಸೀಲ್ದಾರ್ ಹಾಗೂ ಸಿಬ್ಬಂದಿಯಿಂದಲೇ ಆ ಹಣವನ್ನು ವಸೂಲಿ ಮಾಡಬೇಕು. ಜತೆಗೆ ವಿಚಾರಣೆಗೆ ಒಳಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಸಿದ್ದರಾಮಯ್ಯ ಅವರೇ ಸರಿಯಾಗಿ ವಿಡಿಯೋ ನೋಡಿ: ಸಿಎಂ ಸಿದ್ದು ಆರೋಪಕ್ಕೆ ಅಸ್ಸಾಂ ಸಿಎಂ ತಿರುಗೇಟು

ಇಂದಿರಾ ಕ್ಯಾಂಟೀನ್ ಹೊಸ ಮೆನು ತುಸು ವಿಳಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
