ಬೀದರ್:ಹಿಂದಿನ ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ತಮ್ಮ ಆಡಳಿತಾವಧಿಯ ಕೊನೇ ದಿನಗಳಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಸಕರಿಗೆ ಹೊರಡಿಸಿರುವ ನೋಟಿಸ್​ಗಳು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ವಿವಾದದ ಸುಳಿಗೆ ಸಿಲುಕುವ ಸಾಧ್ಯತೆಗಳಿವೆ.
ಡಾ.ಮಹಾದೇವ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಜೂ.3ರಂದು ಆದೇಶ ಹೊರಡಿಸಿತ್ತು. ಅಂದೇ ಅವರು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ, ಔರಾದ್ ಶಾಸಕ ಪ್ರಭು ಚವ್ಹಾಣ್​ರಿಗೆ ಜಾತಿ ಮೂಲಕ್ಕೆ ಸಂಬಂಧಿಸಿದ ದೂರಿನನ್ವಯ ನೋಟಿಸ್ ಜಾರಿಗೊಳಿಸಿ ಸ್ಪಷ್ಟನೆ ಕೇಳಿರುವುದು ಸಾಕಷ್ಟು ಗುಲ್ಲೆಬ್ಬಿಸಿದೆ. ಭಾಲ್ಕಿ ತಾಲೂಕಿನ ವಸತಿ ಯೋಜನೆ ಅಕ್ರಮಕ್ಕೆ ಸಂಬಂಧ ಶಾಸಕ ಈಶ್ವರ ಖಂಡ್ರೆಗೆ ಡಾ.ಮಹಾದೇವ ಮೇ 18ರಂದು ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಿರುವುದೂ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ದೂರಿನ ಮೇರೆಗೆ ಈ ನೋಟಿಸ್ ನೀಡಲಾಗಿದೆ.
ಸಚಿವರ ಹೆಸರಿನಲ್ಲಿ ಕೊಟ್ಟಿರುವ ನೋಟಿಸ್​ವೊಂದರಲ್ಲಿ ದಿನಾಂಕ (03.06.2020) ನಮೂದಾಗಿದ್ದರೆ, ಇನ್ನೊಂದರಲ್ಲಿ ದಿನಾಂಕವೇ (/ / 2020) ಉಲ್ಲೇಖವಾಗಿಲ್ಲ! ಒಂದೇ ನೋಟಿಸ್ ಹೀಗೇಕೆ ಭಿನ್ನವಾಗಿ ಹೊರಬಂದಿತು ಎಂಬ ಪ್ರಶ್ನೆ ಉದ್ಭವಿಸಿದೆ. ದಿನಾಂಕ ನಮೂದಿಸದ ಮುನ್ನವೇ ಹೇಗೆ ಹೊರಬಂತು? ನೋಟಿಸ್ ಸತ್ಯಾಸತ್ಯತೆ ಬಗ್ಗೆ ಅನುಮಾನದ ಹುತ್ತ ಬೆಳೆದಿದೆ.
ಚವ್ಹಾಣ್ ವಿರುದ್ಧ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತಗೊಂಡ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡಾಳ್ ಮೇ 26ರಂದು ಜಾತಿ ಮೂಲ ಪ್ರಶ್ನಿಸಿ ಡಿಸಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಇದರ ಮೇಲೆ ಜೂ.3ಕ್ಕೆ ಸಚಿವರಿಗೆ ನೋಟಿಸ್ ಜಾರಿಗೊಳಿಸಿ 15 ದಿನದಲ್ಲಿ ಸ್ಪಷ್ಟನೆ ಕೊಡಲು ಕೇಳಲಾಗಿದೆ. 2017ರ ನವೆಂಬರ್​ನಲ್ಲಿ ಡಿಸಿ ಡಾ.ಮಹಾದೇವ ಅಧ್ಯಕ್ಷತೆಯ ತ್ರಿಸದಸ್ಯರ ಜಾತಿ ಪರಿಶೀಲನಾ ಸಮಿತಿ ಚವ್ಹಾಣ್ ಪರ ತೀರ್ಪು ನೀಡಿತ್ತು. ಚವ್ಹಾಣ್ ಹುಟ್ಟಿದ್ದು ಬೋಂತಿ ತಾಂಡಾದಲ್ಲಿ, ಅವರು ಲಂಬಾಣಿ ಸಮಾಜಕ್ಕೆ ಸೇರಿದ್ದಾರೆಂದು ಆದೇಶಿಸಿ ಸಮಿತಿಯು ಪ್ರಕರಣ ಇತ್ಯರ್ಥಪಡಿಸಿತ್ತು. ಮೂರು ತಿಂಗಳ ಹಿಂದೆ (ಮಾರ್ಚ್ 6) ಈ ತೀರ್ಪಿನ ವಿರುದ್ಧ ನಗರಸಭೆ ಸದಸ್ಯ ರವಿ ಸ್ವಾಮಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಡಾ.ಮಹಾದೇವ ತಿರಸ್ಕರಿಸಿದ್ದರು. ಆದರೆ ಕೌಡಾಳ್ ದೂರಿನ ಮೇರೆಗೆ ವರ್ಗಾವಣೆ ದಿನದಂದೇ ಸಚಿವರಿಗೆ ನೋಟಿಸ್ ಜಾರಿಗೊಳಿಸಿದ ವಿಷಯ ಗೊಂದಲ ಸೃಷ್ಟಿ ಜತೆಗೆ ನಾನಾ ತರಹದ ಚರ್ಚೆಗೆ ಗ್ರಾಸವಾಗಿದೆ.
| ಸ.ದಾ. ಜೋಶಿ
ಬಡವರ ಹಣದಲ್ಲಿ ಕುಬೇರನಾದ ಕೆಐಎಡಿಬಿ ಅಧಿಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 3 =
Remember me
