ರುದ್ರಣ್ಣ ಹರ್ತಿಕೋಟೆ, ಬೆಂಗಳೂರು
ಗ್ರಾಮೀಣ ಪ್ರದೇಶದ ಬಡ ಹಾಗೂ ದುರ್ಬಲ ಕುಟುಂಬಗಳ ಮಹಿಳೆಯರ ಸಾಂಸ್ಥಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಬಡತನದ ತೀವ್ರತೆಯನ್ನು ತಗ್ಗಿಸುವ ಉದ್ದೇಶದಿಂದ ಕೃಷಿ ಪೌಷ್ಟಿಕ ತೋಟ ಎಂಬ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ಧತೆ ನಡೆಸುವ ಮೂಲಕ ದೀಪಾವಳಿ ಉಡುಗೊರೆ ನೀಡಲು ಮುಂದಾಗಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರು ಮತ್ತು ಮಕ್ಕಳಲ್ಲಿ ಇರುವ ಅಪೌಷ್ಟಿಕತೆಯ ಪ್ರಮಾಣ ದೂರ ಮಾಡುವುದು, ಅದರೊಂದಿಗೆ ಆರ್ಥಿಕ ಚಟುವಟಿಕೆ ಹೆಚ್ಚುವಂತೆ ನೋಡಿಕೊಳ್ಳುವುದು ಒಟ್ಟಾರೆ ಯೋಜನೆಯ ಉದ್ದೇಶವಾಗಿದೆ. ಹಿಂದೆ ಗ್ರಾಮೀಣ ಭಾಗದ ಜನರು ಸಾವಯವ ಮಾದರಿಯಲ್ಲಿ ಔಷಧೀಯ ಗುಣವುಳ್ಳ ಹಣ್ಣು, ಸೊಪು್ಪ ಮತ್ತು ತರಕಾರಿ ಬೆಳೆದು ಸೇವಿಸುತ್ತಿದ್ದರು. ಹಾಗಾಗಿ ಆರೋಗ್ಯ ಮತ್ತು ಆಯಸ್ಸಿನ ವೃದ್ಧಿಯಾಗುತ್ತಿತ್ತು. ಆದರೆ, ಇತ್ತೀಚೆಗೆ ರಾಸಾಯನಿಕಗಳ ಬಳಕೆಯಿಂದಾಗಿ ವಿಷಯುಕ್ತ ಕೃಷಿ ಉತ್ಪನ್ನಗಳನ್ನು ಸೇವಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕತೆ ಹೆಚ್ಚುತ್ತಿದ್ದರೆ, ಆರೋಗ್ಯದ ಮೇಲೂ ಪರಿಣಾಮವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ಸಮಾಜಕ್ಕೆ ದೀರ್ಘಕಾಲದ ಹಾನಿಯನ್ನುಂಟು ಮಾಡುತ್ತಿದೆ. ಕಬ್ಬಿಣಾಂಶ, ವಿಟಮಿನ್, ಪಾಲಿಕ್ ಆಸಿಡ್ ಹಾಗೂ ಇತರ ಪೋಷಕಾಂಶಗಳ ಕೊರತೆಯಿಂದ ರಕ್ತಹೀನತೆ ಕಾಡುತ್ತಿದೆ. ಕೃಷಿ ಪೌಷ್ಟಿಕ ತೋಟಗಳು ಇಂಥ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಿವೆ ಎಂಬ ಆಶಯ ಹೊಂದಲಾಗಿದೆ.
ರಾಜ್ಯ ಸರ್ಕಾರ ಈ ವರ್ಷವನ್ನು ಜೀವನೋಪಾಯ ವರ್ಷವೆಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ಜೀವನೋಪಾಯ ಮಿಷನ್ ಅಡಿ 2.39 ಲಕ್ಷ ಸ್ವಸಹಾಯ ಸಂಘಗಳಿವೆ. ಅದರಲ್ಲಿ 6 ಲಕ್ಷ ಸದಸ್ಯರಿದ್ದಾರೆ. ಈ ಸದಸ್ಯರ ಮೂಲಕ 6.02 ಲಕ್ಷ ಕೃಷಿ ಪೌಷ್ಟಿಕ ತೋಟವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಯೋಜನೆ. ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ 101 ಕೃಷಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅದರ 2.39 ಲಕ್ಷ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.
ಕೃಷಿ ಪೌಷ್ಟಿಕ ತೋಟಗಳನ್ನು ಅಭಿವೃದ್ಧಿಪಡಿಸಬೇಕೆಂದರೆ ಸಸಿಗಳನ್ನು ಬೆಳೆಸಬೇಕಾಗುತ್ತದೆ. ಈ ಕಾರಣಕ್ಕಾಗಿ 452 ನರ್ಸರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ನರೇಗಾದಿಂದಲೇ 11.11 ಕೋಟಿ ರೂ. ಬಳಕೆ ಮಾಡಿಕೊಳ್ಳಲಾಗುತ್ತಿದೆ. ನರೇಗಾಕ್ಕೆ ಬಿಡುಗಡೆಯಾಗುವ ಮೊತ್ತದಲ್ಲಿ ಇಷ್ಟು ಪ್ರಮಾಣದ ಹಣ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಿಗಲಿದೆ. ಈ ಯೋಜನೆಗೆ ಒಟ್ಟಾರೆ 84,30,268 ವಿವಿಧ ರೀತಿಯ ಸಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಸ್ವಸಹಾಯ ಸಂಘಗಳು ನರ್ಸರಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ದೀನದಯಾಳ್ ಅಂತ್ಯೋದಯ ಯೋಜನೆಯು ರಾಜ್ಯದ ಜೀವನೋಪಾಯ ಮಿಷನ್​ನ ಸಂಜೀವಿನಿ ಮೂಲಕ ಜಾರಿಗೆ ಬರುತ್ತಿದೆ. ನರೇಗಾದ ಹಣ ಸೇರಿ ಒಟ್ಟಾರೆ 288.27 ಕೋಟಿ ರೂ.ಗಳನ್ನು ಈ ಯೋಜನೆಗೆ ವೆಚ್ಚ ಮಾಡಲಾಗುತ್ತಿದೆ.
ಪ್ರತಿಯೊಂದು ತೋಟದಲ್ಲಿಯೂ 7 ಜಾತಿಯ ಬಹುವಾರ್ಷಿಕ ಬೆಳೆಗಳಾದ ಪಪ್ಪಾಯ, ಸೀಬೆ, ನೆಲ್ಲಿ, ನುಗ್ಗೆ, ಕರಿಬೇವು, ತೆಂಗು/ಹಲಸು, 6 ರೀತಿಯ ತರಕಾರಿಗಳಾದ ಟೊಮ್ಯಾಟೊ, ಬದನೆ, ಬೆಂಡೆ, ಚವಳಿ, ಹೀರೇಕಾಯಿ, ಈರುಳ್ಳಿ, ಮೆಣಸಿನಕಾಯಿ ಹಾಗೂ ಆರು ರೀತಿಯ ಸೊಪು್ಪಗಳಾದ ಪಾಲಕ್, ಮೆಂತ್ಯೆ, ದಂಟು, ಸಬ್ಬಸಿಗೆ, ರಾಜಗಿರಿ, ಕೊತ್ತಂಬರಿ ಬೀಜದ ಕಿಟ್​ಗಳ ನೀಡಲಾಗುತ್ತದೆ. ಇದಕ್ಕಾಗಿ 6.02 ಕೋಟಿ ರೂ. ಮೀಸಲಿಡಲಾಗಿದೆ.
ಜಮೀನಿನಲ್ಲಿ ಬೇಕಾದರೂ ತೋಟ ಮಾಡಬಹುದು ಅಥವಾ ಮನೆಯಲ್ಲಿ ಗಾರ್ಡನ್ ಮಾಡಿಕೊಂಡು ಹಣ್ಣು, ತರಕಾರಿ, ಸೊಪು್ಪ ಬೆಳೆಯುವುದಕ್ಕೂ ಅವಕಾಶ ನೀಡಲಾಗಿದೆ.
ಕೃಷಿ ಪೌಷ್ಟಿಕ ತೋಟಗಳನ್ನು ಮಾಡಲು ದೀನದಯಾಳ್ ಅಂತ್ಯೋದಯ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ಸ್ಥಾಪಿಸುತ್ತಿರುವಷ್ಟು ತೋಟ ಗಳನ್ನು ಬೇರೆ ಯಾವುದೇ ರಾಜ್ಯದಲ್ಲಿ ಮಾಡುತ್ತಿಲ್ಲ. ಆದ್ದರಿಂದ ಕರ್ನಾಟಕ ಈ ವಿಚಾರದಲ್ಲಿ ಎಲ್ಲ ರಾಜ್ಯಗಳಿಗಿಂದ ಮುಂದಿದೆ.
ಮಹಿಳೆಯರು ತೋಟ ಮಾಡಿಕೊಂಡು ಕೇವಲ ತಮಗೆ ಮಾತ್ರ ಹಣ್ಣು, ಸೊಪು್ಪ, ತರಕಾರಿ ಬಳಕೆ ಮಾಡಿಕೊಳ್ಳುವುದಲ್ಲ. ಬದಲಾಗಿ ಮಾರಾಟ ಮಾಡುವ ಮೂಲಕ ಆರ್ಥಿಕ ಸಬಲತೆ ಪಡೆಯಬಹುದಾಗಿದೆ. ಸರ್ಕಾರ ಸಹ ಬೇರೆ ಬೇರೆ ಸಂಸ್ಥೆಗಳ ಮೂಲಕ ಮಾರುಕಟ್ಟೆ ಒದಗಿಸುವ ಪ್ರಯತ್ನ ಸಹ ಮಾಡಲಿದೆ. ಸ್ಥಳೀಯವಾಗಿ ಸ್ವಸಹಾಯ ಸಂಘಗಳು ಸಹ ಮಾರುಕಟ್ಟೆ ಕಂಡುಕೊಳ್ಳಬಹುದಾಗಿದೆ.
ಕೃಷಿ ಪೌಷ್ಟಿಕ ತೋಟಗಳನ್ನು ಮಾಡುವಲ್ಲಿ ಜಿಲ್ಲಾ ಪಂಚಾಯಿತಿಗಳ ಪಾತ್ರ ಮಹತ್ವದ್ದಾಗಿದ್ದು, ತೋಟಗಾರಿಕೆ ಇಲಾಖೆಯ ನೆರವಿನಲ್ಲಿ ಜಾರಿ ಮಾಡಲು ಜಿಪಂ ಸಿಇಒಗಳಿಗೆ ಕ್ರಿಯಾ ಯೋಜನೆ ರೂಪಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅಲ್ಲಿಂದ ಬರುವ ಕ್ರಿಯಾ ಯೋಜನೆಗಳನ್ನು ಒಪ್ಪಿಗೆ ನೀಡಿ ಹಣ ಬಿಡುಗಡೆ ಮಾಡಲಿದೆ.
ನರೇಗಾ ಯೋಜನೆಯಲ್ಲಿ 60,21,620 ಮಾನವ ದಿನಗಳ ಸೃಜನೆಯಿಂದ 192.08 ಕೋಟಿ ರೂ.ಗಳು ಕೂಲಿಯ ರೂಪದಲ್ಲಿ ಹಾಗೂ 76.06 ಕೋಟಿ ರೂ.ಗಳು ಸಾಮಗ್ರಿ ವೆಚ್ಚವಾಗಿ ಲಭ್ಯವಾಗಲಿದೆ. ಬಡ ಕುಟುಂಬಗಳಿಗೆ ಆದಾಯದ ರೂಪದಲ್ಲಿ ಈ ಅನುದಾನ ಲಭ್ಯವಾಗಲಿದೆ.
ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಜೀವನೋಪಾಯ ಅಭಿಯಾನ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಅದರಲ್ಲಿ ಕೃಷಿ ಪೌಷ್ಟಿಕ ತೋಟ ಯೋಜನೆ ಮಹತ್ವದ್ದಾಗಿದೆ. ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿಯೇ ಹೆಚ್ಚಿನ ತೋಟಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
| ಡಾ. ಸಿ.ಎನ್. ಅಶ್ವತ್ಥನಾರಾಯಣ, ಜೀವನೋಪಾಯ ಅಭಿಯಾನ ಸಚಿವ
ಗ್ರಾಮೀಣ ಭಾಗದ ಮಹಿಳೆಯರು, ಮಕ್ಕಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆ ದೂರ ಮಾಡುವುದು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವುದು ಈ ಕೃಷಿ ಪೌಷ್ಟಿಕ ತೋಟಗಳ ಉದ್ದೇಶವಾಗಿದೆ. ಜಿಲ್ಲಾ ಪಂಚಾಯಿತಿಗಳು ಈ ಯೋಜನೆ ಜಾರಿಗೆ ಮುತುವರ್ಜಿ ವಹಿಸಲಿವೆ.
| ಡಾ. ಆರ್. ರಾಗಪ್ರಿಯ, ಗ್ರಾಮೀಣ ಜೀವನೋಪಾಯ ಅಭಿಯಾನ ಅಭಿಯಾನ ನಿರ್ದೇಶಕಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
