ದಾವಣಗೆರೆ:ಲೇಖಕಿಯೂ ಆಗಿದ್ದ ವೈದ್ಯೆ, ಕಾದಂಬರಿಕಾರ್ತಿ ಡಾ.ಎಚ್. ಗಿರಿಜಮ್ಮ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೂಲತಃ ಹರಿಹರದವರಾದ ಇವರು ವೈದ್ಯಕೀಯ ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದ್ದರು. ತಾಯಿಯ ಆಸೆಯಂತೆ ವೈದ್ಯಕೀಯ ಶಿಕ್ಷಣ ಪೂರೈಸಿ ವೈದ್ಯೆಯಾಗಿದ್ದರೂ ಇವರು ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಬಾಲ್ಯದಲ್ಲೇ ಕಾದಂಬರಿಕಾರ್ತಿ ತ್ರಿವೇಣಿ ಅವರಿಂದ ಪ್ರೇರೇಪಣೆಗೊಂಡಿದ್ದ ಇವರು, ಕಾದಂಬರಿ ಮಾತ್ರವಲ್ಲದೆ ಕಥೆಗಳನ್ನೂ ಬರೆದಿದ್ದರು. ಅಂಬರತಾರೆ, ಚಂದಮಾಮ, ತಮಸೋಮಾ ಜ್ಯೋತಿರ್ಗಮಯ ಮುಂತಾದ 27 ಕಾದಂಬರಿಗಳಲ್ಲದೆ, ಅನಾವರಣ, ಅರ್ಧಾಂಗಿ, ಸಂಜೆಮಲ್ಲಿಗೆ ಮುಂತಾದ ಕಥೆಗಳನ್ನೂ ರಚಿಸಿದ್ದರು. ಇವರು ಪತಿ ಭಾಸ್ಕರ ಹೆಗಡೆ ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮದ್ವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿಲ್ಲ ಎಂದು ವಿಷ ಕುಡಿದ ಮಹಿಳೆ; 2 ದಿನ ಆಸ್ಪತ್ರೆಯಲ್ಲಿ ಒದ್ದಾಡಿ ಸಾವು…

ಕಾರು ಸಿಡಿದು ಛಿದ್ರ, ಹೊತ್ತಿ ಉರಿದ ವಾಹನ; ಸುಟ್ಟು ಕರಕಲಾದ ದೇಹ: ಜಿಲೆಟಿನ್​ ಸ್ಫೋಟ ಶಂಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
