ಬೆಂಗಳೂರು:ಸೆಕ್ಸ್​ ಸಿಡಿ ಸಂಬಂಧ ದೂರು ದಾಖಲಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇಡೀ ಪ್ರಕರಣ ತಮ್ಮ ವಿರುದ್ಧದ ಒಂದು ಷಡ್ಯಂತ್ರ ಎಂದು ಪುನರುಚ್ಚರಿಸಿದ್ದಾರೆ. ಸದ್ಯ ನಾನು ಯಾರ ಹೆಸರನ್ನೂ ಹೇಳುವುದಿಲ್ಲ, ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಈಗ ನಟ-ನಟಿಯರು ಹೊರಗೆ ಬಂದಿದ್ದಾರೆ. ಇದರ ಹಿಂದೆ ನಿರ್ಮಾಪಕ-ನಿರ್ದೇಶಕರೂ ಇದ್ದಾರೆ. ಮುಂದೆ ಅವರು ಕೂಡ ಹೊರ ಬರಲಿದ್ದಾರೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ತಮ್ಮ ಕಡೆಯಿಂದ ದೂರು ದಾಖಲಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿರುವ ಅವರು, ನನ್ನ ಪರವಾಗಿ ಯಾರು ಬೇಕಾದರೂ ಹೋಗಿ ದೂರು ಕೊಡಬಹುದು. ಆ ಕೆಲಸವನ್ನು ಮಾಜಿ ಶಾಸಕ ನಾಗರಾಜ್ ಮಾಡಿದ್ದಾರೆ. ಪೊಲೀಸರು ವಿಚಾರಣೆಗೆ ಕರೆದಾಗ ಹೋಗಿ ಮಾಹಿತಿ ನೀಡುತ್ತೇನೆ ಎಂಬುದಾಗಿ ಜಾರಕಿಹೊಳಿ ಹೇಳಿದ್ದಾರೆ.
ನಾವು ರಾಜಕೀಯವಾಗಿ ಜಾಣರಿದ್ದೇವೆ. ಆದರೆ ಕಾನೂನು ವಿಚಾರದಲ್ಲಿ ವಕೀಲರನ್ನು ಕೇಳಲೇಬೇಕು. ಕಾನೂನು ಹೋರಾಟ ಶುರುವಾಗಿದೆ, ಕೇಸ್ ದಾರಿ ತಪ್ಪುವುದು ಬೇಡ, ವಕೀಲರು ಹೇಳಿದಂತೆ ನಡೆದುಕೊಂಡಿದ್ದೇವೆ, ಇದು ಮಹಾನಾಯಕನ ವರೆಗೂ ಹೋಗುತ್ತದೆ ಎಂದಿದ್ದಾರೆ. ಇದು ಬೋಗಸ್ ಸಿಡಿ, ಇದರಿಂದ ಇವತ್ತು ಜಾರಕಿಹೊಳಿಗೆ ತೊಂದರೆ ಆಗಿರಬಹುದು. ಮುಂದಿನ ದಿನಗಳಲ್ಲಿ ಬೇರೆಯವರಿಗೆ ಆಗಬಾರದು. ಹೀಗಾಗಿ ಕೊನೆಯವರೆಗೂ ಬಿಡುವುದಿಲ್ಲ ಎನ್ನುವ ಮೂಲಕ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕೊಡುವ ಸೂಚನೆಯನ್ನೂ ನೀಡಿದ್ದಾರೆ.
ಜಾರಕಿಹೊಳಿಯಿಂದ ಮೋಸವಾಗಿದೆ, ನನಗೆ ರಕ್ಷಣೆ ಕೊಡಿ: ಹೊಸ ವಿಡಿಯೋದಲ್ಲಿ ‘ಸಂತ್ರಸ್ತ’ ಯುವತಿ ಮೊರೆ!

ಜಾರಕಿಹೊಳಿಯ ಸಿಡಿ ಮಾಡಿದ ಕಿಂಗ್​ಪಿನ್​ 44 ಲಕ್ಷ ರೂ. ಹಿಡಿದು ಕಾರು ಖರೀದಿಗೆ ಹೋದ!

ಅಶ್ಲೀಲ ಸಿಡಿ ಪ್ರಕರಣ: ಕೊನೆಗೂ ದೂರು ನೀಡಿದ ರಮೇಶ್ ಜಾರಕಿಹೊಳಿ, ದೂರಿನಲ್ಲಿ ಏನಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
