|ಅರವಿಂದ ಅಕ್ಲಾಪುರಶಿವಮೊಗ್ಗ
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್​ನ ಮಹತ್ವಾಕಾಂಕ್ಷಿ ಯೋಜನೆಯಾದ ಪೋಷಣ್ ಅಭಿಯಾನದ ಮೂಲಕ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದ್ದ ಸ್ಮಾರ್ಟ್ ಫೋನ್​ಗಳು ಕಳೆದೊಂದು ವಾರದಿಂದ ಕಾರ್ಯಾರಂಭ ಮಾಡಿವೆ. ಈ ವರ್ಷದ ಆರಂಭದಿಂದಲೇ ಜಾರಿಯಾಗಬೇಕಿದ್ದ ಯೋಜನೆ ವರ್ಷಾಂತ್ಯದಲ್ಲಿ ಅನುಷ್ಠಾನಗೊಂಡಿದೆ. ಜಿಲ್ಲೆಯ ಎಲ್ಲ 2,439 ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ 86 ಮೇಲ್ವಿಚಾರಕರು ಸೇರಿ ಒಟ್ಟು 2,525 ಮಂದಿಗೆ ಸ್ಮಾರ್ಟ್​ಫೋನ್ ನೀಡಲಾಗಿದೆ.
ಫೋನ್​ನಲ್ಲಿ ‘ಸ್ನೇಹ’ ಹಾಗೂ ಸಿಎಎಸ್ (ಕಾಮನ್ ಅಪ್ಲಿಕೇಷನ್ ಸಿಸ್ಟಂ) ಡೌನ್​ಲೋಡ್ ಮಾಡಲಾಗಿದೆ. ಪ್ರಸ್ತುತ ತಮ್ಮ ಅಂಗನವಾಡಿ ವ್ಯಾಪ್ತಿಗೆ ಸಂಬಂಧಿಸಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ವಿವರಗಳನ್ನು ಲಿಖಿತವಾಗಿ ದಾಖಲಿಸುವ ಅಂಗನವಾಡಿ ಕಾರ್ಯಕರ್ತೆಯರು ಆಪ್​ನಲ್ಲೇ ಅಪ್​ಲೋಡ್ ಮಾಡುತ್ತಿದ್ದಾರೆ.
ವಿವಿಧ ಹಂತಗಳಲ್ಲಿ ತರಬೇತಿ:ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ಸ್ಮಾರ್ಟ್​ಫೋನ್ ಬಳಕೆ ಹಾಗೂ ಸ್ನೇಹ ಆಪ್​ನಲ್ಲಿ ಮಾಹಿತಿ ದಾಖಲಿಸುವ ಬಗ್ಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗಿತ್ತು. ತಾಲೂಕು ಹಂತದಲ್ಲಿ ಸಂಪನ್ಮೂಲ ವ್ಯಕ್ತಿಗಳು ಅಗತ್ಯ ಮಾಹಿತಿ ನೀಡಿದ್ದರು. ಮೊದಲ ಹಂತದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ವಿಭಾಗವಾರು ಮಟ್ಟದಲ್ಲಿ ತರಬೇತಿ ಕೊಡಲಾಗಿತ್ತು. ಆಪ್​ನಲ್ಲಿ ಯಾವ ಅಂಕಿ ಅಂಶಗಳನ್ನು ಯಾವ ರೂಪದಲ್ಲಿ ದಾಖಲಿಸಬೇಕು. ಅಂಗನವಾಡಿ ಪ್ರತಿ ಚಟುವಟಿಕೆಯನ್ನು ಆಪ್ ಮೂಲಕ ಹೇಗೆ ಗಮನಿಸಲಾಗುತ್ತದೆ ಎಂಬ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಲಾಗಿತ್ತು. ಇಷ್ಟೆಲ್ಲ ಸರ್ಕಸ್ ಬಳಿಕ ಹೊಸ ಆಪ್ ಕಾರ್ಯಾರಂಭ ಮಾಡಿದೆ.
ಮಕ್ಕಳು, ಗರ್ಭಿಣಿ, ಬಾಣಂತಿಯರ ಸಂಪೂರ್ಣ ಡೇಟಾದೊಂದಿಗೆ ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಆಹಾರ, ನೀಡಬೇಕಿರುವ ಲಸಿಕೆಯ ಮಾಹಿತಿಗಳು ಆ್ಯಪ್​ನಲ್ಲಿ ಲಭ್ಯವಾಗಲಿವೆ. ಇದರಿಂದ ಆಹಾರ ದುರುಪಯೋಗ ತಪ್ಪುತ್ತದೆ. ಪ್ರತಿ ದಿನ ಅಂಗನವಾಡಿ ಮಕ್ಕಳ ಹಾಜರಾತಿಯೂ ಅಪ್​ಲೋಡ್ ಮಾಡಬೇಕಿರುವುದರಿಂದ ದುರ್ಬಳಕೆಗೆ ಅವಕಾಶವಿರುವುದಿಲ್ಲ. 6 ವರ್ಷದವರೆಗಿನ ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಆಹಾರ ನೀಡಬೇಕು. ಅದು ಎಷ್ಟು ಪೌಷ್ಟಿಕವಾಗಿರಬೇಕು. ಯಾವ ತಿಂಗಳಲ್ಲಿ ಯಾವ ಲಸಿಕೆ ನೀಡಬೇಕು. ಮಕ್ಕಳ ತೂಕ, ಎತ್ತರ ಎಲ್ಲವೂ ಆಪ್ ಮೂಲಕ ತಿಳಿಯಲಿದೆ. ಗರ್ಭಿಣಿಯರಿಗೆ ಕಬ್ಬಿಣಾಂಶದ ಮಾತ್ರೆಗಳು ಯಾವಾಗ? ಎಷ್ಟು ನೀಡಬೇಕು. ಬಾಣಂತಿಯರಿಗೆ ನೀಡುವ ಆಹಾರದ ರೀತಿ, ಆಯಾ ಜಿಲ್ಲೆ, ತಾಲೂಕಿನಲ್ಲಿ ಎಷ್ಟು ಮಂದಿ ಗರ್ಭಿಣಿ, ಬಾಣಂತಿಯರು ಹಾಗೂ ಅಂಗನವಾಡಿಗೆ ಬರುವ ಮಕ್ಕಳಿದ್ದಾರೆ ಎಂಬ ಎಲ್ಲ ಮಾಹಿತಿಯೂ ಮೊಬೈಲ್ ಆಪ್​ನಲ್ಲಿ ಸಂಗ್ರಹಗೊಳ್ಳಲಿದೆ.
ಶಿವಮೊಗ್ಗ ಜಿಲ್ಲೆಯ ಒಂದೊಂದು ಭಾಗದಲ್ಲಿ ಒಂದೊಂದು ಮೊಬೈಲ್​ಫೋನ್​ ನೆಟ್​ವರ್ಕ್​ಗಳಿವೆ. ಹೀಗಾಗಿ ಜಿಲ್ಲಾದ್ಯಂತ ಏಕರೂಪದ ನೆಟ್​ವರ್ಕ್ ಒದಗಿಸುವುದು ಕಷ್ಟಸಾಧ್ಯ. ಹೀಗಾಗಿ ಅಂಗನವಾಡಿ ಇರುವ ಪ್ರದೇಶದಲ್ಲಿ ಯಾವ ನೆಟ್​ವರ್ಕ್ ಸಿಗುತ್ತದೋ ಅದೇ ಕಂಪನಿಯ ಪೋಸ್ಟ್​ಪೇಯ್್ಡ ಸಿಮ್​ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಜಾರಿಗೆ ತಂದಿರುವ ಹೊಸ ತಂತ್ರಜ್ಞಾನ ಬಳಕೆ ಬಗ್ಗೆ ಕೆಲ ಅಂಗನವಾಡಿ ಕಾರ್ಯಕರ್ತೆಯರು ರೋಮಾಂಚನಗೊಂಡರೆ ಇನ್ನು ಕೆಲವರು ಹೊಸ ಜವಾಬ್ದಾರಿಗೆ ಬೇಸತ್ತಿದ್ದಾರೆ. ಸ್ಮಾರ್ಟ್ ಫೋನ್​ಗೆ ಹೊಂದಿಕೆಯಾಗಲು ಹಲವರಿಗೆ ಇನ್ನೂ ಕಾಲಾವಕಾಶ ಬೇಕು ಎನ್ನುತ್ತಾರೆ ಅಧಿಕಾರಿಗಳು.
ಸ್ನೇಹ ಆಪ್ ಮೂಲಕ ಅಂಗನವಾಡಿ ಕೇಂದ್ರಗಳ ಎಲ್ಲ ಮಾಹಿತಿಗಳನ್ನು ಡಿಜಿಟಲೀಟಕರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. ಆದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಯಾವ ಮೊಬೈಲ್ ನೆಟ್​ವರ್ಕ್ ಸಂಪರ್ಕವೂ ಇಲ್ಲ. ಮಕ್ಕಳ ಹಾಜರಾತಿ ಮುಂತಾದ ವಿಷಯಗಳು ಸಕಾಲದಲ್ಲಿ ದಾಖಲೆಯಾಗದಿದ್ದರೆ ಮೂಲ ಉದ್ದೇಶವೇ ಈಡೇರದಂತಾಗುತ್ತದೆ. ಇನ್ನು ನೆಟ್​ವರ್ಕ್ ಇರುವ ಜಾಗವನ್ನು ಹುಡುಕಿಕೊಂಡು ಅಂಗನವಾಡಿ ಕಾರ್ಯಕರ್ತೆಯರೇ ತೆರಳಬೇಕಾಗುತ್ತದೆ. ಮಳೆಗಾಲದಲ್ಲಿ ವಾರವಿಡೀ ವಿದ್ಯುತ್ ಸಂಪರ್ಕ ಕಳೆದುಕೊಳ್ಳುವ ಗ್ರಾಮಗಳೂ ಇವೆ. ಆ ಸಂದರ್ಭದಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದೂ ಕಷ್ಟ. ಹೀಗಾಗಿ ಹೊಸ ಯೋಜನೆಯ ಸಾಧಕ-ಬಾಧಕ ತಿಳಿಯಲು ಇನ್ನಷ್ಟು ಸಮಯ ಬೇಕು.
ಡಿಸೆಂಬರ್ ಆರಂಭದಿಂದ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್ ಫೋನ್​ನಲ್ಲೇ ಎಲ್ಲ ಮಾಹಿತಿ ರವಾನಿಸುತ್ತಿದ್ದಾರೆ. ಈ ಫೋನ್​ಗಳು ಜಿಪಿಎಸ್ ಸಂಪರ್ಕದಲ್ಲಿರುತ್ತವೆ. ನೆಟ್​ವರ್ಕ್ ಸಮಸ್ಯೆ ತೀವ್ರವಾಗಿದ್ದರೆ ಮಾಹಿತಿ ಅಪ್​ಲೋಡ್ ಮಾಡಲು ಮೂರು ದಿನಗಳ ಅವಕಾಶ ನೀಡಲಾಗುತ್ತದೆ. ಇದುವರೆಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
|ಸಿ.ಸುರೇಶ್ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರ ಉಪನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 14 =
Remember me
