ಬೆಂಗಳೂರು:ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಮನೆಗೆ ಇನ್ನುಮುಂದೆ ಸಾರ್ವಜನಿಕರ ಪ್ರವೇಶಕ್ಕೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಹಾಕಿರುವುದಷ್ಟೇ ಅಲ್ಲದೆ ಹೆಚ್ಚುವರಿಯಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಈ ಮೊದಲು ಶಾಸಕರ ಮನೆ ಬಳಿ ಆರು ಸಿಸಿಟಿವಿ ಕ್ಯಾಮರಾಗಳಷ್ಟೇ ಇದ್ದು, ಇದೀಗ ಹೊಸದಾಗಿ ಹತ್ತು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶಾಸಕರ ಮನೆ ಎದುರು ಹಾಗೂ ಹಿಂದಿನ ರಸ್ತೆ ಸೇರಿದಂತೆ ಸುತ್ತಮುತ್ತ ಹತ್ತು ಕ್ಯಾಮರಾ ಅಳವಡಿಸಲಾಗಿದೆ.
ಇನ್ನು ಶಾಸಕರ ಮನೆ ಬಳಿ ಯಾರೇ ಸುಳಿದಾಡಿದರೂ ತಕ್ಷಣ ಗೊತ್ತಾಗಲಿದೆ. ಮಾತ್ರವಲ್ಲ, ಸಾರ್ವಜನಿಕರು ಈ ಹಿಂದೆ ಅವರ ಮನೆಗೆ ನೇರವಾಗಿ ಪ್ರವೇಶಿಸುವಂತಿತ್ತು. ಆದರೆ ಇನ್ನುಮುಂದೆ ಸಾರ್ವಜನಿಕರ ಪ್ರವೇಶಕ್ಕೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಭದ್ರತೆಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಯಾರೇ ಬಂದರೂ ಪೊಲೀಸರ ತಪಾಸಣೆ ಎದುರಿಸಿ ಅಥವಾ ಅನುಮತಿ ಪಡೆದೇ ಒಳಪ್ರವೇಶಿಸಬೇಕಾಗಿದೆ.
ಇದನ್ನೂ ಓದಿ:ಶಾಸಕ ಸತೀಶ್​ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಮೂವರ ಬಂಧನ, ಸ್ಮಶಾನದಲ್ಲಿ ಸಿಕ್ಕಿಬಿದ್ದ ಆರೋಪಿ
ಅಷ್ಟಕ್ಕೂ ಶಾಸಕರ ಮನೆಗೆ ಈ ಎಲ್ಲ ಭದ್ರತೆ ಕಲ್ಪಿಸಲು ಪ್ರಮುಖ ಕಾರಣ ಇತ್ತೀಚೆಗೆ ಅಂದರೆ ಆ. 12ರ ಬೆಳಗಿನ ಜಾವ ಶಾಸಕರ ಮನೆಯಲ್ಲಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟು ಸುಟ್ಟು ಹಾಕಿದ್ದು. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ:ಬೆಂಕಿ ಹಚ್ಚಲು ಪೆಟ್ರೋಲನ್ನೂ ಕದ್ದಿದ್ದರು, ಬಳಿಕ ಪರಾರಿಯಾಗಲು ಬೈಕನ್ನೂ ಕದ್ದರು; ಶಾಸಕರ ಕಾರುಗಳಿಗೆ ಬೆಂಕಿ ಹಿಂದಿನ ರೋಚ’ಕತೆ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 4 =
Remember me
