ಬೆಂಗಳೂರು:ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅದೇ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿದ್ದ ನಟಿ ಸುಮಲತಾ ಅಂಬರೀಷ್ ಅವರನ್ನು ಸೋಲಿಸಲಿಕ್ಕೆ ‘ಸುಮಲತಾ’ ಎಂಬ ಹೆಸರಿನ ಏಳು ಮಂದಿಯನ್ನು ಜೆಡಿಎಸ್​ ಕಣಕ್ಕೆ ಇಳಿಸಿತ್ತು. ಹೀಗೆ ಅಂದಿನ ‘ಸಪ್ತ ಸುಮಲತಾ’ರ ಜೆಡಿಎಸ್​ ಈಗ ‘ಕುಮಾರತ್ರಯ’ರ ಪಕ್ಷ ಎಂದು ಹೇಳಲು ಅಡ್ಡಿ ಇಲ್ಲ.
‘ಜೆಡಿಎಸ್​ಗೊಬ್ಬರೇ ಕುಮಾರಣ್ಣ’ ಎಂದು ಅಭಿಮಾನಿಗಳು ಹೆಮ್ಮೆಯಿಂದ ಹೇಳಬಹುದು. ಆದಾಗ್ಯೂ ಜೆಡಿಎಸ್​ನಲ್ಲಿ ಈಗ ಮೂವರು ಕುಮಾರಸ್ವಾಮಿಗಳಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಕಲೇಶಪುರ ಕ್ಷೇತ್ರದ ಎಚ್​​.ಕೆ. ಕುಮಾರಸ್ವಾಮಿ, ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ… ಇವರೇ ಆ ಮೂವರು ಕುಮಾರಸ್ವಾಮಿಗಳು.
ಇದನ್ನೂ ಓದಿ:ಕರ್ನಾಟಕ ಚುನಾವಣೆ-2023: ಜೆಡಿಎಸ್​ ಎರಡನೇ ಪಟ್ಟಿ ಬಿಡುಗಡೆ: ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಹೆಸರು ಅಂತಿಮ
ಜೆಡಿಎಸ್​​ನ ಈ ಕುಮಾರತ್ರಯರ ಬಗ್ಗೆ ಮಾತನಾಡುವಾಗ ‘ಕುಮಾರಸ್ವಾಮಿ’ ಎಂಬುದರ ಜತೆಗೆ ಅವರ ಇನಿಷಿಯಲ್ ಇಲ್ಲವೇ ಪದನಾಮ ಬಳಸಿ ಉಲ್ಲೇಖಿಸದೇ ಹೋದರೆ ಅದು ಯಾವ ಕುಮಾರಸ್ವಾಮಿಯ ವಿಚಾರವೇ ಆಗಿದ್ದರೂ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿಯೇ ಎಂದು ಅಪಾರ್ಥಕ್ಕೆ ಈಡಾಗುವ ಸಾಧ್ಯತೆ ಇದೆ. ಏನೇ ಇರಲಿ.. ಒಂದೇ ಪಕ್ಷದಲ್ಲಿ ಹೀಗೆ ಒಂದೇ ಹೆಸರಿನ ಮೂವರು ಇರುವುದು ವಿಶೇಷ ಹಾಗೂ ಅತ್ಯಪರೂಪವೇ ಸರಿ.
ಸಿಎಂ ಇಬ್ರಾಹಿಂ ಅವರಿಗಿಂತ ಮುಂಚೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಚ್.ಕೆ. ಕುಮಾರಸ್ವಾಮಿ ಒಟ್ಟು 6 ಬಾರಿ ವಿಧಾನಸಭೆ ಸದಸ್ಯರಾಗಿದ್ದವರು. ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಇಬ್ರಾಹಿಂ ಅವರನ್ನು ಪಕ್ಷದ ರಾಜ್ಯ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಯಿತು. ಈಗಲೂ ಅದೇ ಹುದ್ದೆಯಲ್ಲಿ ಅವರು ಮುಂದುವರಿದಿದ್ದಾರೆ.
ಇದನ್ನೂ ಓದಿ:ಭೀಕರ ಅಪಘಾತ: ಸತ್ತವರ ಸಂಖ್ಯೆ ಐದಕ್ಕೇರಿಕೆ; ಇಬ್ಬರು ಗಂಡ-ಹೆಂಡಿರ ಜತೆಗೆ ಒಂದು ಮಗು ಕೂಡ ಸಾವು
ಇನ್ನು, ಮೊನ್ನೆಮೊನ್ನೆಯವರೆಗೂ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಎಂ.ಪಿ. ಕುಮಾರಸ್ವಾಮಿ ಅವರು ತಮಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಅಂತ ಮುನಿಸಿಕೊಂಡು ಇಂದು ಜೆಡಿಎಸ್ ಸೇರಿದವರು. ಅವರನ್ನು ಎಚ್.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇಂದು ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಎಂ.ಪಿ. ಕುಮಾರಸ್ವಾಮಿ ಅವರೂ ವೇದಿಕೆ ಮೇಲೆ ಕುಳಿತಿದ್ದರು.
ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
