ಬೆಂಗಳೂರು:ಹೌದು! ಇನ್ನು ವಾಟ್ಸ್ಯಾಪ್​ನಲ್ಲಿ ನಮಗೆ ನಾವೇ ಸಂದೇಶಗಳನ್ನು ಕಳಿಸಿಕೊಳ್ಳಬಹುದು. ಮೆಟಾ (ಫೇಸ್​ಬುಕ್​) ಮಾಲೀಕತ್ವದ ವಾಟ್ಸ್ಯಾಪ್​ನಲ್ಲಿ ಈ ಹೊಸ ಫೀಚರ್​ ಅನ್ನು ಪರಿಚಯಿಸಲಾಗಿದ್ದು ಇದು ಈಗ ಎಲ್ಲಾ ಬಳಕೆದಾರರಿಗೂ ಲಭ್ಯವಾಗಿದೆ.
ಈ ಹಿಂದೆ ಈ ಫೀಚರ್​, ವಾಟ್ಸ್ಯಾಪ್​ನ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಇದೀಗ ಸಾರ್ವಜನಿಕರಿಗೂ ಲಭ್ಯವಾಗಿದ್ದು ಇದು ಅನೇಕ ಜನರ ಕೆಲಸ ಸುಭ ಮಾಡಲಿದೆ ಎನ್ನಲಾಗುತ್ತಿದೆ.
ಅನೇಕರು, ಅಗತ್ಯ ಮಾಹಿತಿಯನ್ನು ಸೇವ್​ ಮಾಡಿಕೊಳ್ಳಲು ತಾವೊಬ್ಬರೇ ಇರುವ ಗ್ರೂಪ್​ಗಳನ್ನು ಸೃಷ್ಟಿಸಿಕೊಂಡು ಅಲ್ಲಿಗೆ ಅಗತ್ಯ ಮೆಸೇಜ್​ಗಳನ್ನು ಕಳಿಸುತ್ತಿದ್ದರು. ಇದನ್ನು ತಪ್ಪಿಸಲು ಇದೀಗ ವಾಟ್ಸ್ಯಾಪ್​ ಈ ಫೀಚರ್​ಅನ್ನು ಪರಿಚಯಿಸಿದೆ ಎನ್ನಲಾಗುತ್ತಿದೆ.
ಹೊಸ ಫೀಚರ್​ ಬಳಸುವುದು ಹೇಗೆ?ಈ ಫೀಚರ್​ ಅನ್ನು ಬಳಸಲು ಶುರು ಮಾಡುವುದು ತೀರಾ ಸರಳ. ವಾಟ್ಸ್ಯಾಪ್​ ಅಪ್ಲಿಕೇಶನ್​ ತೆರೆದ ಕೂಡಲೆ ಸಾಧಾರಣವಾಗಿ ಎಲ್ಲಾ ಚಾಟ್​ಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅಲ್ಲೇ ಕೆಳಗಡೆ ಬಲ ಬದಿಗೆ ಪರದೆ ಮೇಲೆ ಮೆಸೇಜ್​ನ ಐಕಾನ್​ಅನ್ನು ಕಾಣಬಹುದು. ಇಲ್ಲಿ ಹೋಗಿಯೇ ಈ ಹಿಂದೆ ಹೊಸ ಗ್ರೂಪ್​ಗಳನ್ನು ಸೃಷ್ಟಿಸುವುದು ಇತ್ಯಾದಿ ಮಾಡುತ್ತೇವೆ.
ಈ ಐಕಾನ್​ ಮೇಲೆ ಒತ್ತಿದರೆ ‘ನ್ಯೂ ಗ್ರೂಪ್​’ ‘ನ್ಯೂ ಕಾಂಟ್ಯಾಕ್ಟ್​’ ‘ನ್ಯೂ ಕಮ್ಯುನಿಟಿ’ ಎಂದು ಮೊದಲ ಮೂರು ಆಯ್ಕೆಗಳು ಕಾಣಸಿಗುತ್ತವೆ. ಅವುಗಳ ಕೆಳಗೆ ನಾಲ್ಕನೇ ಆಯ್ಕೆಯಾಗಿ ನಿಮ್ಮ ಹೆಸರನ್ನು ಬರೆದು ಅದರ ಎದುರು ಆವರಣ ಚಿಹ್ನೆ ಅಥವಾ ಬ್ರಾಕೆಟ್​ನಲ್ಲಿ ಯೂ ಎಂದು ಬರೆದಿರುತ್ತದೆ. ಅದನ್ನು ಒತ್ತಿ ಏನಾದರೂ ಒಂದು ಸಂದೇಶ ಕಳಿಸಿ. ಅದರಿಂದಾಗಿ ಈ ಚಾಟ್​, ಚಾಟ್​ಲಿಸ್ಟ್​ನಲ್ಲಿ ಕಾಣಸಿಗುತ್ತದೆ. ನಂತರ ಇದನ್ನು ಬಳಸುತ್ತಾ ಇರಬಹುದು. ಇದರಿಂದಾಗಿ ಪ್ರಯಾಣ ಮಾಡುವಾಗ ಅಗತ್ಯ ದಾಖಲೆಗಳ ಫೋಟೊ, ಅಗತ್ಯ ಮಾಹಿತಿ, ಇತ್ಯಾದಿಗಳನ್ನು ಮೆಸೇಜ್​ ರೂಪದಲ್ಲಿ ಸೇವ್​ ಮಾಡಿಕೊಳ್ಳಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 4 =
Remember me
