ಮುಖ್ಯಾಂಶ
12019-20ನೇ ಸಾಲಿನಲ್ಲಿ 22.52 ಲಕ್ಷ ರೈತರಿಗೆ 13.577 ಕೋಟಿ ರೂ. ಬೆಳೆ ಸಾಲ ವಿತರಣೆ.
22020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರೂ. ಬೆಳೆ ಸಾಲ ವಿತರಣೆ ಗುರಿ.
3
ಆಗಸ್ಟ್ 24ರವರೆಗೆ 10,57,825 ರೈತರಿಗೆ 7038.91 ಕೋಟಿ ಸಾಲ ವಿತರಣೆ.
4ಸಹಕಾರ ಬ್ಯಾಂಕ್​ಗಳನ್ನು ಜನಸ್ನೇಹಿಯಾಗಿಸಲು ಸಿಎಂ ಸೂಚಿಸಿದ್ದು, ಈ ಪ್ರಕಾರ ಶೀಘ್ರ ಸಾಲಮೇಳ ಆಯೋಜನೆ.
5
ಹೈನು ಮತ್ತು ಮೀನುಗಾರಿಕೆಯ 13266 ರೈತರಿಗೆ 22 ಕೋಟಿ ರೂ. ಸಾಲ ವಿತರಣೆ.
6ಕರೊನಾ ನಿರ್ವಹಣೆಯಲ್ಲಿ ತೊಡಗಿರುವ 41836 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ನೀಡಿಕೆ.
721 ಡಿಸಿಸಿ ಬ್ಯಾಂಕ್​ಗಳಿದ್ದು, 1 ಅಪೆಕ್ಸ್ ಬ್ಯಾಂಕ್ ಮತ್ತು 5489 ಪ್ಯಾಕ್ಸ್​ಗಳಿದ್ದು, ಒಂದೇ ಸಾಫ್ಟ್​ವೇರ್ ಅಡಿ ಗಣಕೀಕರಣಕ್ಕೆ ಕ್ರಮ.
ಬೆಂಗಳೂರು:ರಾಜ್ಯದ 119 ಸಕ್ಕರೆ ಕಾರ್ಖಾನೆಗಳಿಗೆ 16 ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್​ಗಳಿಂದ 5229 ಕೋಟಿ ರೂ. ಸಾಲ ನೀಡಲಾಗಿದ್ದು, 4864 ಕೋಟಿ ರೂ. ಸಾಲ ಚಾಲ್ತಿಯಲ್ಲಿದೆ. ಆದರೆ, 365 ಕೋಟಿ ರೂ. ಅನುತ್ಪಾದಕ ಆಸ್ತಿ (ಎನ್​ಪಿಎ) ಆಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಇದನ್ನೂ ಓದಿ:‘ದಿಲ್​ ಬೇಚಾರ’ಗಾಗಿ ಆರ್ಧಕ್ಕರ್ಧ ಸಂಭಾವನೆ ಇಳಿಸಿದ್ದರಂತೆ ಸುಶಾಂತ್​ … ಯಾಕೆ?
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ಗಳ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಮಾಹಿತಿ ಕೇಳಿದ್ದು, ಕಾರ್ಖಾನೆ ಆಸ್ತಿ, ಸಾಮರ್ಥ್ಯ ಸಹಿತ ಎಲ್ಲ ವಿವರಗಳನ್ನು ವಾರದೊಳಗೆ ಸಲ್ಲಿಸುವಂತೆ ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ:ಕರೊನಾ ಭೀತಿಯಿಂದ ಪಾರಾದ ಗೇಲ್, ನೆಗೆಟಿವ್ ವರದಿಯಿಂದ ಕಿಂಗ್ಸ್ ಇಲೆವೆನ್ ತಂಡ ನಿರಾಳ
ಯಾವ ಕಾರ್ಖಾನೆಯಿಂದ ಎಷ್ಟು ಸಾಲ ಬಾಕಿ ಇದೆ? ಕಾರ್ಖಾನೆ ಮಾಲೀಕರ್ಯಾರು? ಯಾವ ಸಮಯದಲ್ಲಿ ಸಾಲ ಕೊಡಲಾಗಿದೆ? ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ. ವರದಿ ಬಂದ ಬಳಿಕ ಮಾಧ್ಯಮಗಳಿಗೆ ಖುದ್ದು ನಾನೇ ಸಂಪೂರ್ಣ ವಿವರ ನೀಡುತ್ತೇನೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಶಾಲಾ- ಕಾಲೇಜು ಮತ್ತೆ ಬಂದ್​; ಫ್ಯಾನ್​ ಬಳಕೆಗೂ ನಿರ್ಬಂಧ ವಿಧಿಸಿದೆ ಈ ದೇಶ…!
ಇನ್ನು ಮುಂದೆ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಬೇಕೆಂದರೆ ಮಾನದಂಡ ನಿಗದಿಯಾಗಬೇಕು. ಅವುಗಳ ಸಾಮರ್ಥ್ಯ ಅರಿಯುವ ಕೆಲಸವಾಗಬೇಕಿದ್ದು, ಆ ನಿಟ್ಟಿನಲ್ಲಿ ರೂಪುರೇಷೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಇದನ್ನೂ ಓದಿ:ಶುಕ್ರವಾರದಿಂದ ನಾವಿಕೋತ್ಸವ-2020: ಆನ್​ಲೈನ್​ನಲ್ಲಿ ಮೂರು ದಿನ ಕನ್ನಡ ಹಬ್ಬ
ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಸಹಕಾರ ನಿಬಂಧಕರಾದ ಜಿಯಾವುಲ್ಲಾ, 21 ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಸಭೆಯಲ್ಲಿದ್ದರು.
ಗ್ರೇಟ್​ ಎಸ್ಕೇಪ್​: ಭೀಕರ ಅಪಘಾತದ ದೃಶ್ಯ ವೈರಲ್ ಆಯಿತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + two =
Remember me
