ಬೆಂಗಳೂರು:ಸರ್ಕಾರಿ ನೌಕರರು ಮೃತಪಟ್ಟರೆ ಅವರ ನಾಮನಿರ್ದೇಶಿತರಿಗೆ ಪಿಂಚಣಿ ಸೌಲಭ್ಯ ಇತ್ಯರ್ಥಪಡಿಸಲು ಪಾಲಿಸಬೇಕಾದ ನಿಯಮಗಳ ಕುರಿತು ಆರ್ಥಿಕ ಇಲಾಖೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ನಿರ್ದಿಷ್ಟ ಖಾತೆಯಲ್ಲಿರುವ (ಪ್ರಾನ್ ಖಾತೆ) ನೌಕರರ ವಂತಿಕೆ ಹಾಗೂ ಅದರ ಮೇಲಿನ ಆದಾಯವನ್ನು ಹಿಂಪಡೆಯಲು ಆಯ್ಕೆ ಮಾಡಿಕೊಂಡರೆ ಪೂರ್ಣ ಮೊತ್ತ ಕೊಡಲು ಸೂಚನೆ ನೀಡಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು 2018ರ ಏ.1ರಂದು ಮತ್ತು ತದನಂತರ ಸೇವೆಯಲ್ಲಿ ಇರುವಾಗಲೇ ಮೃತರಾದ ಸಂದರ್ಭದಲ್ಲಿ ನೌಕರರು ನಾಮನಿರ್ದೇಶಿತ ಕುಟುಂಬ ಪಿಂಚಣಿ ಆಯ್ಕೆ ಮಾಡಿಕೊಂಡಲ್ಲಿ ಪ್ರಾನ್ ಖಾತೆಯಲ್ಲಿ ಶೇಖರಣೆಗೊಂಡ ಮೊತ್ತದಲ್ಲಿ ಮೃತ ನೌಕರರ ವಂತಿಕೆ ಮತ್ತು ಅದರ ಮೇಲಿನ ಆದಾಯವನ್ನು ಖಜಾನೆ-2 ಚಲನ್ ಮೂಲಕ ಜಮೆ ಮಾಡುವಂತೆ ಆರ್ಥಿಕ ಇಲಾಖೆ ಆದೇಶಿಸಿದೆ.
ಕೇಂದ್ರ ಸರ್ಕಾರದ ಆದೇಶದ ಅನ್ವಯ ಮೃತ ನೌಕರರ ವಂತಿಕೆ ಮತ್ತು ಅದರ ಮೇಲಿನ ಆದಾಯವನ್ನು ಮೃತರ ನಾಮನಿರ್ದೇಶಿತರಿಗೆ ಇತ್ಯರ್ಥಪಡಿಸುವಂತೆ ಕೋರಿ ಖಜಾನೆ ಆಯುಕ್ತರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿ ಇಲಾಖೆ ಈ ಆದೇಶ ಹೊರಡಿಸಿದೆ. ಎನ್​ಪಿಎಸ್ ಘಟಕವು ಕೆಲ ನಿಯಮಗಳ ಬಗ್ಗೆ ಕ್ರಮ ವಹಿಸುವಂತೆ ನಿರ್ದೇಶಿಸಿದೆ.
ಕ್ಲೇಮ್ ಹೇಗೆ?:2021ರ ಆ.19ರ ಸರ್ಕಾರದ ಆದೇಶದನ್ವಯ ಖಜಾನೆಗಳಿಂದ ಮೃತ ನೌಕರರ ಪ್ರಾನ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಮೃತರ ನಾಮನಿರ್ದೇಶಿತರ ಕೋರಿಕೆ ಮೇರೆಗೆ ಎನ್​ಎಸ್​ಡಿಎಲ್-ಸಿಆರ್​ಎಗೆ ಕ್ಲೇಮ್ ಮಾಡಬೇಕು. ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಖಜಾನೆ ಆಯುಕ್ತರ ಪದನಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಶಿವಾಜಿನಗರ ಶಾಖೆಯಲ್ಲಿ ಜಮೆ ಮಾಡಬೇಕು. ಮೊತ್ತದ ವಿವರವನ್ನು ಸಿಆರ್​ಎ ಅವರು ಎನ್​ಪಿಎಸ್ ಘಟಕಕ್ಕೆ ಇ-ಮೇಲ್ ಮುಖೇನ ಮಾಹಿತಿ ನೀಡಬೇಕು.
ಪ್ರಾಕ್ಸಿ ಪೂಲ್ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತವನ್ನು ಖಜಾನೆ-2 ಚಲನ್ ಮುಖೇನ ಜಮೆ ಮಾಡಬೇಕು. ಮೃತ ನೌಕರರ ನಾಮನಿರ್ದೇಶಿತರು ದೃಢೀಕೃತ ಐಡಿ ವಿವರವನ್ನು ಕುಟುಂಬ ಪಿಂಚಣಿ ಪ್ರಸ್ತಾವನೆಯೊಂದಿಗೆ ಖಜಾನೆಗೆ ನೀಡಬೇಕು. ನಗರ ಜಿಲ್ಲಾ ಖಜಾನೆಯಿಂದ ಸರ್ಕಾರದ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಟಿಟಿಆರ್ ಮೂಲಕ ಹೊಂದಾಣಿಕೆ ಮಾಡಿರುವ ಚಲನ್ ಪ್ರತಿ, ಕೆಟಿಸಿ-25 ವಿವರ ಹಾಗೂ ಪಾವತಿ ಮಾಡಿರುವ ಯುಟಿಆರ್ ಸಂಖ್ಯೆ ವಿವರವನ್ನು ಎನ್​ಪಿಎಸ್ ಘಟಕಕ್ಕೆ ನೀಡಬೇಕು.
ಎನ್​ಪಿಎಸ್ ಘಟಕದಿಂದ ಡಿಡಿಓ ಅವರಿಗೆ ನೀಡಬೇಕು. ಸದರಿ ಮಾಹಿತಿಯೊಂದಿಗೆ ಅವರು ಮೃತ ನೌಕರರ ನಾಮನಿರ್ದೇಶಿತರಿಗೆ ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನಕ್ಕೆ ಪ್ರಸ್ತಾವನೆಯೊಂದಿಗೆ ಮಹಾಲೇಖಪಾಲರಿಗೆ ಸಲ್ಲಿಸಬೇಕೆಂದು ಇಲಾಖೆ ಸೂಚಿಸಿದೆ.
ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
