| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಸಂಪನ್ಮೂಲ ಕ್ರೋಡೀಕರಣಕ್ಕೆ ಹಲವು ಮೂಲಗಳನ್ನು ಹುಡುಕುತ್ತಿರುವ ರಾಜ್ಯ ಸರ್ಕಾರ ಎರಡು ಉದ್ದೇಶಗಳನ್ನಿಟ್ಟುಕೊಂಡು ನೌಕರರ ಬಹುದಿನಗಳ ಬೇಡಿಕೆಯಾದ ಎನ್​ಪಿಎಸ್ ರದ್ದು ಮಾಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರದಲ್ಲಿರುವ 2.65 ಲಕ್ಷ ಎನ್​ಪಿಎಸ್ ನೌಕರರು ಹಾಗೂ ಅಷ್ಟೇ ಪ್ರಮಾಣದಲ್ಲಿ ನಿಗಮಗಳಲ್ಲಿರುವ ನೌಕರರು ವಿವಿಧ ಹಂತದ ಹೋರಾಟಗಳ ಮೂಲಕ ಎನ್​ಪಿಎಸ್ ರದ್ದತಿಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೇ ಎನ್​ಪಿಎಸ್ ರದ್ದತಿ ಭರವಸೆ ನೀಡಿತ್ತು. ಇದುವರೆಗೂ ಎನ್​ಪಿಎಸ್ ರದ್ದಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಆರ್ಥಿಕ ಇಲಾಖೆ ಇದೀಗ ರಾಜಕೀಯ ನಿರ್ಧಾರವೆಂಬ ಅನಿಸಿಕೆ ಹೇಳುತ್ತಿರುವುದು ನೌಕರರಲ್ಲಿ ಆಶಾಭಾವನೆಯನ್ನುಂಟು ಮಾಡಿದೆ.
ಇತ್ತೀಚೆಗೆ ಐಎಎಸ್ ಅಧಿಕಾರಿಗಳಿಗೆ ಎನ್​ಪಿಎಸ್ ಬದಲು ಒಪಿಎಸ್ ಜಾರಿ ಮಾಡಲಾಗಿದೆ. ಎನ್​ಪಿಎಸ್ ನೌಕರರ ಪೈಕಿ ಮರಣ ಹೊಂದಿದ 1169 ನೌಕರರ ಕುಟುಂಬಕ್ಕೆ ಒಪಿಎಸ್ ನೀಡಲಾಗಿದೆ. 1463 ನೌಕರರು ನಿವೃತ್ತರಾಗಿದ್ದು ಅವರಿಗೆ ಮರಣ ಮತ್ತು ನಿವೃತ್ತಿ ಉಪಧನ ಸಿಕ್ಕಿದೆ. 6ನೇ ವೇತನ ಆಯೋಗ ನಿವೃತ್ತರಾಗುವ ಎನ್​ಪಿಎಸ್ ನೌಕರರಿಗೆ 20 ಲಕ್ಷ ರೂ.ಗಳ ತನಕ ನಿವೃತ್ತಿ ಸೌಲಭ್ಯ ನೀಡಬೇಕೆಂದು ಹೇಳಿದೆ.
ನೌಕರರ ಆತಂಕ ಏನು?ಎನ್​ಪಿಎಸ್ ನೌಕರರಿಗೆ ಒಂದಷ್ಟು ಆತಂಕಗಳಿವೆ. ನೌಕರರಿಂದ ಕಡಿತವಾದ ಮೊತ್ತ ಹಾಗೂ ಸರ್ಕಾರದ ವಂತಿಗೆ ಈಗ ಷೇರುಪೇಟೆಯಲ್ಲಿ ಹೂಡಿಕೆಯಾಗುತ್ತಿದೆ. ಅಲ್ಲಿನ ಏರಿಳಿತದಿಂದಾಗಿ ನಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಆ ಬಗ್ಗೆ ನಿಖರವಾದ ಮಾಹಿತಿ ನೌಕರರಿಗೆ ಲಭ್ಯವಿಲ್ಲ. ಪ್ರತಿ ನೌಕರರಿಗೆ ಕನಿಷ್ಠ 20 ಸಾವಿರ ರೂ. ನಷ್ಟವಾಗಿದೆ ಎಂದೇ ಹೇಳಲಾಗುತ್ತಿದೆ. ಎಸ್​ಬಿಐ ವಿಮೆಯಲ್ಲಿ ಶೇ.33, ಯುಟಿಐನಲ್ಲಿ ಶೇ.33 ಹಾಗೂ ಎಲ್​ಐಸಿಯಲ್ಲಿ ಶೇ.34 ರಷ್ಟು ಹೂಡಿಕೆಯಾಗಿದೆ. ಇದನ್ನು ಟಯರ್ ಒಂದು ಎಂದೇ ಹೇಳಲಾಗುತ್ತಿದೆ. ಇಲ್ಲಿ ಹಣಕ್ಕೆ ಸದ್ಯಕ್ಕೆ ಗ್ಯಾರಂಟಿ ಇದೆ. ಆದರೆ ಕೇಂದ್ರ ಸರ್ಕಾರ ಷೇರು ಮಾರುಕಟ್ಟೆಯ ಯಾವುದೇ ಕಂಪನಿಗೆ ವರ್ಗಾವಣೆ ಮಾಡಬಹುದೆಂಬ ಆದೇಶ ಮಾಡಿದೆ. ಖಾಸಗಿ ಕಂಪನಿಗಳ ಕೈಗೆ ಹೋದರೆ ಹಣಕ್ಕೆ ಖಾತರಿ ಏನು ಎಂಬ ಪ್ರಶ್ನೆ ನೌಕರರಲ್ಲಿ ಇದೆ. ಆದ್ದರಿಂದಲೇ ಎನ್​ಪಿಎಸ್ ಬೇಡವೆಂಬ ಒತ್ತಡ ನೌಕರರಲ್ಲಿದೆ.
ಎನ್​ಪಿಎಸ್ ರದ್ದು ಮಾಡುವುದರಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ. ಬದಲಾಗಿ ನೌಕರರಿಂದ ಕಡಿತವಾಗಿರುವ ಹಾಗೂ ಸರ್ಕಾರ ಪಾವತಿಸಿರುವ ಮೊತ್ತ ತಕ್ಷಣಕ್ಕೆ ಅಭಿವೃದ್ಧಿ ಕಾರ್ಯಗಳಿಗೆ ಸಿಗುತ್ತದೆ. ಸರ್ಕಾರ ಎನ್​ಪಿಎಸ್ ವಾಪಾಸು ಪಡೆಯಲಿದೆ ಎಂಬ ವಿಶ್ವಾಸವಿದೆ. ಸುಮಾರು 5 ಲಕ್ಷ ನೌಕರರು ಕಾಯುತ್ತಿದ್ದಾರೆ. ಡಿಸೆಂಬರ್​ಗೆ ಎನ್​ಪಿಎಸ್ ನೌಕರರ ಸಮಾವೇಶ ನಡೆಸಲಿದ್ದೇವೆ.
| ಶಾಂತಾರಾಮ ತೇಜ ಅಧ್ಯಕ್ಷ, ಎನ್​ಪಿಎಸ್ ನೌಕರರ ಸಂಘ
ಯಾವ ರಾಜ್ಯಗಳಲ್ಲಿ ರದ್ದು?ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್​ಘಡ, ಜಾರ್ಖಂಡ್​ಗಳಲ್ಲಿ ಎನ್​ಪಿಎಸ್ ರದ್ದಾಗಿದೆ. ಅಲ್ಲಿ ಹಣ ಕಡಿತ ನಿಲ್ಲಿಸಿದ್ದಾರೆ. ಆದರೆ ಇದುವರೆಗೂ ಕಡಿತವಾಗಿರುವ ಮೊತ್ತ ವಾಪಸ್ ಬಂದಿಲ್ಲ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತವೆ.
ಎರಡು ಉದ್ದೇಶಎನ್​ಪಿಎಸ್ ರದ್ದು ಮಾಡಿದರೆ ತಕ್ಷಣಕ್ಕೆ ಸರ್ಕಾರದ ಮೇಲೆ ಹಣಕಾಸಿನ ಒತ್ತಡ ಬರುವುದಿಲ್ಲ. 2036ರ ನಂತರವೇ ಹೆಚ್ಚಿನ ಸಂಖ್ಯೆಯಲ್ಲಿ ನೌಕರರ ನಿವೃತ್ತಿ ಆರಂಭವಾಗುತ್ತದೆ. ಸರ್ಕಾರಕ್ಕೆ ಆಗುವ ಎರಡು ಲಾಭಗಳೆಂದರೆ ಪ್ರತಿ ತಿಂಗಳು ಸರ್ಕಾರ ಪಾವತಿಸುವ 157 ಕೋಟಿ ರೂ. ಉಳಿತಾಯವಾದರೆ, ಈಗಾಗಲೇ ಸರ್ಕಾರದ ವತಿಯಿಂದ 2006 ರಿಂದ ಪಾವತಿ ಮಾಡಿರುವ 10,347 ಕೋಟಿ ರೂ. ಹಣ ಬೊಕ್ಕಸಕ್ಕೆ ಮರಳಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಲಭ್ಯವಾಗಲಿದೆ. ನೌಕರರ ವಂತಿಗೆ 8300 ಕೋಟಿ ರೂ.ಗಳಿದ್ದು ಅದನ್ನು ಜಿಪಿಎಫ್​ಗೆ ಪರಿವರ್ತನೆ ಮಾಡಬಹುದು. ಮೂರು ವರ್ಷಗಳ ಕಾಲ ವಾಪಸು ಪಡೆಯುವುದಿಲ್ಲವೆಂದು ಲಿಖಿತವಾಗಿ ನೀಡಲು ಸಹ ನೌಕರರು ಸಿದ್ಧರಿದ್ದಾರೆ. ಆದ್ದರಿಂದಲೇ ಸರ್ಕಾರ ಎನ್​ಪಿಎಸ್ ರದ್ದುಪಡಿಸುವ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದೆ ಎಂದು ಮೂಲಗಳು ಹೇಳುತ್ತವೆ.
* ಒಟ್ಟು ಸರ್ಕಾರಿ ನೌಕರರಲ್ಲಿ ಎನ್​ಪಿಎಸ್ ನೌಕರರು 2,65,715
* ಎನ್​ಪಿಎಸ್​ಗೆ ಸರ್ಕಾರ ಪಾವತಿಸಿರುವ ಮೊತ್ತ 10346,90,22,079 ರೂ. (ಜುಲೈ ಅಂತ್ಯಕ್ಕೆ)
* ನೌಕರರ ವೇತನದಿಂದ ಕಡಿತ ಮೊತ್ತ 8308,61,57,211 ರೂ. (ಜುಲೈ ಅಂತ್ಯಕ್ಕೆ)
* ಎನ್​ಎಸ್​ಡಿಎಲ್​ಗೆ ಪಾವತಿಸಿರುವ ಸೇವಾ ಶುಲ್ಕ 3,74,52,718 ರೂ.
* ಒಂದು ತಿಂಗಳಿಗೆ ಸರ್ಕಾರ ಪಾವತಿಸುವ ಮೊತ್ತ 1,56,27,12,818 ರೂ.
* ಎನ್​ಪಿಎಸ್ ಯೋಜನೆಯಡಿ ಮರಣ ಹೊಂದಿರುವ ನೌಕರರು 1169
* ಎನ್​ಪಿಎಸ್​ನಲ್ಲಿ ನಿವೃತ್ತಿ ಹೊಂದಿರುವ ನೌಕರರು 1463
ಸಮಾವೇಶದಲ್ಲಿ ಘೋಷಿಸುವ ಸಾಧ್ಯತೆಎನ್​ಪಿಎಸ್ ನೌಕರರ ಸಮಾವೇಶ ಡಿಸೆಂಬರ್​ನಲ್ಲಿ ವಿಧಾನ ಮಂಡಲ ಅಧಿವೇಶನಕ್ಕೆ ಮುನ್ನ ಅಥವಾ ನಂತರ ನಡೆಯಲಿದೆ. ಆ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ನೌಕರರು ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಸಮಾವೇಶದಲ್ಲಿ ಪ್ರಮುಖ ಘೋಷಣೆ ಹೊರಬೀಳಲಿದೆ ಎಂದೇ ಸರ್ಕಾರದ ಮೂಲಗಳು ಹೇಳುತ್ತವೆ. ದೀಪಾವಳಿ ಹಬ್ಬ ಮುಗಿದ ಕೂಡಲೇ ಮುಖ್ಯಮಂತ್ರಿ ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆಯಲ್ಲಿ ಎನ್​ಪಿಎಸ್ ನೌಕರರ ಸಮಸ್ಯೆ ಬಗೆ ಹರಿಸುವ ಕುರಿತು ಸಭೆ ನಡೆಸಲಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ಗೆ ನೋಟಿಸ್: ಮಹಿಳೆಗೆ ನಟ ದರ್ಶನ್ ಸಾಕಿದ ನಾಯಿ ಕಚ್ಚಿದ್ದ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
