ಬೆಂಗಳೂರು:ಸಿಎಂ ಬಿ.ಎಸ್​. ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿ ಎನ್​. ಆರ್​. ಸಂತೋಷ್​ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಜಾಹ್ನವಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಬೆಳಗ್ಗೆಯಿಂದ ಸ್ವಲ್ಪ ಬೇಜಾರಲ್ಲಿದ್ದರು. ಸಂಜೆ ಹೊರಗಡೆ ಹೋಗಿ 7 ಘಂಟೆಗೆ ಮನೆಗೆ ಬಂದರು. ಊಟಕ್ಕೆ ಏನ್ಮಾಡಲಿ ಅಂತ ಕೇಳಲಿಕ್ಕೆ ಹೋದಾಗ ಅವರು ಪ್ರಜ್ಞೆ ತಪ್ಪಿದರು. ಕೂಡಲೇ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ವಿ ಎಂದಿದ್ದಾರೆ.
ಇದನ್ನೂ ಓದಿ:ಹನುಮ ದೇವರು ಇನ್ನಿಲ್ಲ; ಬಿಂದು ಮಾಧವ ಶರ್ಮ ಶ್ರೀ ದೈವಾಧೀನ
ಸ್ವಲ್ಪ ರಾಜಕೀಯದಲ್ಲಿ ಅಸಮತೋಲನ ಆಗಿತ್ತು. ಅದನ್ನು ಮನಸ್ಸಿಗೆ ತೆಗೆದುಕೊಂಡಿದ್ದಾರಷ್ಟೆ, ನಾವು ಕೌಟುಂಬಿಕವಾಗಿ ತುಂಬಾ ಚೆನಾಗಿದ್ದೇವೆ. ಡಾಕ್ಟರ್ ಜತೆ ಮಾತಾಡಿದ್ದೀವಿ ಬೆಳಗ್ಗೆ ಅಷ್ಟೊತ್ತಿಗೆ ಹುಷಾರಾಗ್ತಾರೆ ಎಂದು ವೈದ್ಯರು ತಿಳಿಸಿದ್ದಾರೆಂದರು.
ಇನ್ನು ವೈದ್ಯರ ಮೂಲಗಳ ಪ್ರಕಾರ ಸಂತೋಷ್​ ಇಂದು ಸಂಜೆಯಷ್ಟರಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.(ದಿಗ್ವಿಜಯ ನ್ಯೂಸ್​)
ಸಿಎಂ ಬಿಎಸ್​ವೈ ರಾಜಕೀಯ ಕಾರ್ಯದರ್ಶಿ ಎನ್​.ಆರ್​. ಸಂತೋಷ್​ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
