ಬೆಂಗಳೂರು:ನರೇಗಾ 2023-24ನೇ ಸಾಲಿನ ಆಯವ್ಯಯ ಘೋಷಣೆಗಳ ಕಾಲಮಿತಿ ಅನುಷ್ಠಾನ ಆರಂಭಿಸಲಾಗಿದೆ.ಗೋಮಾಳ, ಬಹುವಾರ್ಷಿಕ ಹುಲ್ಲು ಅಭಿವೃದ್ಧಿ, ವಿಪತ್ತು ನಿರ್ವಹಣೆ, ಬೋರ್ ವೆಲ್ ರೀಚಾರ್ಜ್, ಶಾಲಾ ಶೌಚಾಲಯ, ಶಾಂತಿಧಾಮ, ಕೂಸಿನ ಮನೆ, ವಿದ್ಯಾಧಾಮ, ಗ್ರಾಮೀಣ ಸಂತೆ ಮತ್ತಿತರ ಕಾರ್ಯಕ್ರಮ ಜಾರಿಗೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಸೂಚನೆ ನೀಡಲಾಗಿದೆ.
ಈಗಾಗಲೇ ಅನುಮೋದನೆಗೊಂಡಿರುವ 2023-24ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳದೇ ಇದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳು ಹೆಚ್ಚುವರಿಯಾಗಿ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲು ಕಾಲಮಿತಿ ನಿಗದಿಪಡಿಸಿ ನಿರ್ದೇಶನ ನೀಡಲಾಗಿದೆ.
ಘೋಷಿತ ಕಾಮಗಾರಿಗಳನ್ನು ನಿಗದಿ ವರ್ಷದಲ್ಲಿಯೇ ಪೂರ್ಣಗೊಳಿಸಬೇಕು. ಸ್ಮಶಾನ ಅಭಿವೃದ್ಧಿ ಕಾಮಗಾರಿಯಲ್ಲಿ ಯೋಜನೆಯಡಿ ಅನುಮೋದಿತ ಕಾಮಗಾರಿಗಳನ್ನು ಮಾತ್ರವೇ ಕೈಗೊಳ್ಳತಕ್ಕದ್ದು. ಸ್ಮಶಾನ ಭೂಮಿಗೆ ಕಾಂಪೌಂಡ್ ನಿರ್ಮಿಸಲು ಯೋಜನೆಯಡಿ ಅವಕಾಶವಿಲ್ಲ. ಆದ್ದರಿಂದ ಸ್ಮಶಾನ ಭೂಮಿ ಒತ್ತುವರಿ ತಡೆಯಲು ಸುತ್ತಮುತ್ತ ಸಸಿಗಳನ್ನು ನೆಡುವಂತೆ ತಿಳಿಸಲಾಗಿದೆ.
ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಶೌಚಾಲಯ ನಿರ್ಮಿಸಲು ೋಷಿಸಲಾಗಿದೆ. ಪ್ರಸ್ತುತ ಆಯವ್ಯಯದಲ್ಲಿ ಪದವಿ ಕಾಲೇಜುಗಳಿಗೆ ಶೌಚಾಲಯ ನಿರ್ಮಿಸಲು ಘೋಷಿಸಲಾಗಿದ್ದು, ಯೋಜನೆಯಡಿ ಅನುಮತಿ ಇರುವ ಸಮುದಾಯ ಶೌಚಾಲಯ ಸಂಕೀರ್ಣವನ್ನು ಪದವಿ ಕಾಲೇಜು ಆವರಣದಲ್ಲಿ ನಿರ್ಮಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
