ಬೆಂಗಳೂರು: ನೃತ್ಯನಾದ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಇತ್ತೀಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನೃತ್ಯೋತ್ಸವ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ನೃತ್ಯನಾದದಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಆನಂದರಾಮ ನೃತ್ಯ ರೂಪಕ ಹಾಗೂ ಭರತನಾಟ್ಯ ಹಾಗೂ ಮತ್ತಿತರ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು.
ಶ್ರೀವೆಂಕಟೇಶ ನಾಟ್ಯ ಮಂದಿರದ ವಿದ್ಯಾರ್ಥಿಗಳು ಸಮೂಹ ಭರತನಾಟ್ಯ ಪ್ರದರ್ಶಿಸಿದರು. ಮಹತಿ ಕಣ್ಣನ್‌ರವರ ಭರತ ನೃತ್ಯ ಹಾಗೂ ಚಂದನ ಮಹೇಂದ್ರಪ್ಪರವರು ಒಡಿಸ್ಸಿ ನೃತ್ಯ ಪ್ರದರ್ಶನ ನೀಡಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಗುರು ರಾಧಾ ಶ್ರೀಧರ್, ಪದ್ಮವಿಭೂಷಣ ಪದ್ಮಸುಬ್ರಮಣ್ಯಂ, ನಂಜುಂಡ ರಾವ್, ಪ್ರದ್ಯುಮ್ನ, ಕನ್ನಡ ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ಚಂದ್ರಶೇಖರ್, ಡಾ. ಗಾಯತ್ರಿ ಕಣ್ಣನ್ ಪ್ರಸಿದ್ಧ ಕೊಳಲು ವಾದಕ ಎಚ್.ಎಸ್. ವೇಣುಗೋಪಾಲ್, ನೃತ್ಯನಾದ ಸಂಸ್ಥೆ ಸಂಸ್ಥಾಪಕಿ ರಶ್ಮಿ ಹರಿಪ್ರಸಾದ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
