ಹಾವೇರಿ:ಇಂದು ಹಾವೇರಿಯ ಗಾಂಧಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೊಸ ಬಾಂಬ್ ಸಿಡಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು, ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿರುವುದು 100ಕ್ಕೆ 100ರಷ್ಟು ಸತ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕ್ಯಾರವಾನ್​​ನಲ್ಲಿ ಬಟ್ಟೆ ಮಾತ್ರ ಬದಲಿಸಲ್ಲ ಅದು ಕೂಡ ನಡೆಯುತ್ತೆ! ಸ್ಫೋಟಕ ಸಂಗತಿ ಬಿಚ್ಚಿಟ್ಟ ಶಕೀಲಾ
“ನಮ್ಮಲ್ಲಿನ 9 ಜನರನ್ನು ಅವರು ಸಂಪರ್ಕಿಸಿರುವುದಾಗಿ ಸಿಎಂ ಹಾಗೂ ಡಿಸಿಎಂಗೆ ಶಾಸಕರು ಹೇಳಿದ್ದಾರೆ. ಟಚ್ ಮಾಡಿದ್ದಾರೆ, ಕೇಳಿದ್ದಾರೆ ಎಂದು ನಮ್ಮ ಒಂಭತ್ತು ಶಾಸಕರೇ ಖುದ್ದಾಗಿ ಹೇಳಿದ್ದಾರೆ. ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿರುವುದು 100% ಸತ್ಯ. ಇದರಲ್ಲಿ ಯಾವ ಅನುಮಾನವೇ ಇಲ್ಲ” ಎಂದರು. ಪ್ರತಿ ಮಾತಿನಲ್ಲೂ ಬಿಜೆಪಿ, ಜೆಡಿಎಸ್ ನಾಯಕರಿಗೆ ಟಕ್ಕರ್​ ಕೊಟ್ಟ ಸಚಿವರು, ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ ವೇಳೆ ಈ ರೀತಿ ಹೇಳಿದ್ದಾರೆ.
ಸಿಎಂ ಕುರ್ಚಿ ವಿಚಾರ:“ಸಿಎಂ ಕುರ್ಚಿ ಬಗ್ಗೆ ಮಾತಾಡೋರು ನಮ್ಮ ಪಾರ್ಟಿಯಲ್ಲಿ ಇಲ್ಲ. ನಮ್ಮ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಇದೆ. ಹೈಕಮಾಂಡ್ ಹಾಗೂ ಸಚಿವರು ಕೂಡ ಸಿದ್ದರಾಮಯ್ಯ ಹಾಗೂ ಡಿಕೆಶಿ ಪರವೇ ಇದೆ” ಎಂದರು.
ನಮ್ಮವರೇ ನಮಗೆ ಹಾಕಿಕೊಡ್ತಾರೆ ಎಂಬ ಸಿಎಂ ಹೇಳಿಕೆ:
“ಈ ಹೇಳಿಕೆಯನ್ನು ಸಿಎಂ ಯಾವ ಸಂದರ್ಭದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಮಗೆ ಮತ್ತು ನಮ್ಮ ಹೈಕಮಾಂಡ್​ಗೆ ಹಾಗೂ ಜನರಿಗೆ ಸಿದ್ದರಾಮಯ್ಯ ನಾಯಕತ್ವ ಮುಂದುವರೆಯಬೇಕು ಎಂಬ ಸ್ಪಷ್ಟತೆ ಇದೆ. ಐದು ವರ್ಷವು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ಯಾರು ಕಾಂಗ್ರೆಸ್ ಸರ್ಕಾರ ಅಲ್ಲಾಡಿಸೋಕೆ ಸಾಧ್ಯವೇ ಇಲ್ಲ. ಲೋಕಸಬಾ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕೆ ಪ್ರಧಾನಿಗೆ, ಅಮಿತ್ ಷಾ ಅವರಿಗೆ ಆತಂಕ ಶುರುವಾಗಿದೆ” ಎಂದರು.
ಇದನ್ನೂ ಓದಿ:2 ವರ್ಷದೊಳಗಿನ ಮಕ್ಕಳು ಮೊಬೈಲ್, ಟಿವಿ ನೋಡುವುದನ್ನು ನಿಷೇಧಿಸಿದ ಸರ್ಕಾರ! ಉತ್ತಮ ಆರೋಗ್ಯವನ್ನು ಉತ್ತೇಜಿಸಲು ಹೊಸ ಮಾರ್ಗಸೂಚಿ
“ಚುನಾವಣೆ ಬಳಿಕ ಮೋದಿಯವರ 8% ಪ್ರಭಾವ ಕಡಿಮೆಯಾಗಿದೆ. ರಾಹುಲ್ ಗಾಂಧಿಯ ಪ್ರಭಾವ 22% ಹೆಚ್ಚಾಗಿದೆ. ಬಿಜೆಪಿಯವರಿಗಿಂತ ಜೆಡಿಎಸ್​ನವರಿಗೆ ಹೆಚ್ಚಿನ ರೀತಿಯಲ್ಲಿ ಆತಂಕ ಶುರುವಾಗಿದೆ. ಜನರು ಕಾಂಗ್ರೆಸ್ ಪರವಾಗಿ ಇದ್ದಾರೆ. ಇದನ್ನು ಹಾಳು ಮಾಡಬೇಕು ಎನ್ನುವುದೇ ಇವರ ಉದ್ದೇಶ” ಎಂದು ಜೆಡಿಎಸ್​ ನಾಯಕರನ್ನು ಗುರಿಯಾಗಿಸಿ ಟೀಕಿಸಿದರು.
ಮುಂಬೈ ಇಂಡಿಯನ್ಸ್​ಗೆ​ ಹಾರ್ದಿಕ್​ ಅತ್ಯುತ್ತಮ​​! ಕ್ಯಾಪ್ಟನ್ ಆಗಿ ಉಳಿಯಲು ಈ 3 ಕಾರಣಗಳೇ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − ten =
Remember me
