ಬೆಂಗಳೂರು:ಕದ್ದುಮುಚ್ಚಿ ಹೆಣ್ಣು ಮಕ್ಕಳ ಸ್ನಾನ ಮಾಡುವ ದೃಶ್ಯಾವಳಿಯನ್ನು ಮೊಬೈಲ್ ಅಥವಾ ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿಯುವ ವಿಕೃತ ಮನಸ್ಸಿನ ಯುವಕರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ನರ್ಸ್, ತನ್ನ ಜತೆ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದ ಸಹೋದ್ಯೋಗಿಗಳ ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ವೈಟ್​ಫೀಲ್ಡ್​ನಲ್ಲಿರುವ ಖಾಸಗಿ ಆಸ್ಪತ್ರೆಯ ಹಾಸ್ಟೆಲ್​ನಲ್ಲಿ ಈ ಪ್ರಕರಣ ನಡೆದಿದೆ. ಹಾಸ್ಟೆಲ್ ಮೇಲ್ವಿಚಾರಕಿ ನೀಡಿದ ದೂರಿನ ಮೇರೆಗೆ ಆರೋಪಿತೆ ನರ್ಸ್ ಅಶ್ವಿನಿ ಎಂಬಾಕೆಯನ್ನು ವೈಟ್​ಫೀಲ್ಡ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈಕೆ ಕೊಟ್ಟ ಹೇಳಿಕೆ ಮೇರೆಗೆ ಅಶ್ವಿನಿಯ ಪ್ರಿಯಕರನನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ:ಫ್ರೆಂಡ್​ ಪತ್ನಿಗೆ ಮತ್ತು ಬರೋ ಔಷಧಿ ಕೊಟ್ಟು ಲೈಂಗಿಕ ಸಂಪರ್ಕ: ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್..!
ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಸ್ಪತ್ರೆ ಆಡಳಿತ ಮಂಡಳಿ, ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುವ ನರ್ಸ್​ಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಿದೆ. ಅದರಲ್ಲಿ ಅಶ್ವಿನಿ ಸೇರಿದಂತೆ ಹಲವಾರು ನರ್ಸ್​ಗಳು ನೆಲೆಸಿದ್ದರು. ಡಿ.5ರ ಸಂಜೆ 6.45ರಲ್ಲಿ ನರ್ಸ್ ಸ್ನಾನ ಮಾಡಲು ಶೌಚಗೃಹಕ್ಕೆ ಹೋದಾಗ ಮೊಬೈಲ್​ಅನ್ನು ಇಟ್ಟಿರುವುದು ಕಣ್ಣಿಗೆ ಬಿದ್ದಿದೆ. ಗಾಬರಿಗೊಂಡ ನರ್ಸ್, ಮೊಬೈಲ್ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ವಿಡಿಯೋ ರೆಕಾರ್ಡ್ ಆನ್ ಆಗಿರುವುದು ಕಂಡುಬಂದಿದೆ. ಬಳಿಕ ಫೋಟೋ ಗ್ಯಾಲರಿ ಪರಿಶೀಲನೆ ನಡೆಸಿದಾಗ ಹಲವು ಆಸ್ಪತ್ರೆ ಮಹಿಳಾ ಸಿಬ್ಬಂದಿಯ ಸ್ನಾನದ ದೃಶ್ಯಾವಳಿಗಳನ್ನು ಸೆರೆ ಹಿಡಿದಿರುವುದು ಪತ್ತೆಯಾಗಿದೆ. ನೊಂದ ಸಂತ್ರಸ್ತೆ, ಮೊಬೈಲ್​ಅನ್ನು ಹಾಸ್ಟೆಲ್ ಮೇಲ್ವಿಚಾರಕಿಗೆ ಒಪ್ಪಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ:ಪತ್ನಿಯ ಬೆತ್ತಲೆ ದೇಹದ ವಿಡಿಯೋ ಮಾಡಿ ಈತ ಮಾಡುತ್ತಿದ್ದ ಮಹಾನೀಚತನದ ಕೆಲಸ!
ಮೊಬೈಲ್ ಮಾಲಕಿ ಅಶ್ವಿನಿಯನ್ನು ಮೇಲ್ವಿಚಾರಕಿ ಕರೆಸಿ ಆಂತರಿಕ ತನಿಖೆ ನಡೆಸಿದಾಗ ಸತ್ಯಾಂಶ ಹೊರ ಬಂದಿದೆ. ಅಶ್ವಿನಿ ಜತೆಗೆ ಇನ್ನು ಕೆಲವರು ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ. ಅಶ್ವಿನಿಯನ್ನು ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಡಿಯೋಗಳನ್ನು ಪ್ರಿಯಕರನಿಗೆ ಕಳುಹಿಸುತ್ತಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆತನನ್ನು ವಿಚಾರಣೆ ನಡೆಸಲಾಗುವುದು. ಈ ಕೃತ್ಯದಲ್ಲಿ ತೊಡಗಿರುವ ಎಲ್ಲ ಅರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರಲ್ಲಿ ಯುವಕರ ಪಾತ್ರ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಲವ್​, ಸೆಕ್ಸ್​, ದೋಖಾ: ಕೇಸು ದಾಖಲಿಸಿ ಎಸ್​ಐ ಕರಾಳ ಮುಖ ಬಯಲು ಮಾಡಿದ ಮಹಿಳಾ ಪಿಎಸ್​ಐ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
