ಮಂಗಳೂರು:ಇತ್ತಿಚಿನ ದಿನಗಳಲ್ಲಿ ಜನರು ಮಾನವೀಯತೆ ಎಂಬ ಪದವನ್ನೇ ಮರೆಯುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಅದರಲ್ಲೂ ವಿಶೇಷವಾಗಿ ಮಂಗಳೂರಿನಲ್ಲಿ ನಡೆದ ಈ ಘಟನೆಯನ್ನು ಕಂಡ ಬಳಿಕವಂತೂ ಈ ಅನುಮಾನ ಮತ್ತಷ್ಟು ಹೆಚ್ಚಾಗುತ್ತದೆ.
ಆಗಿದ್ದೇನೆಂದರೆ, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿರುವ ಸರಸ್ವತಿ ಮಂಗಳೂರು ನಗರ ಹೊರವಲಯದ ಕೊಣಾಜೆಯಲ್ಲಿ ವಾಸವಾಗಿದ್ದಾರೆ. ಇವರು ಕರೊನಾ ವೈರಸ್​ ಸೋಂಕಿನಿಂದ ಬಳಲುತ್ತಿದ್ದ ಬಂಟ್ವಾಳದ ಸಜಿಪನಡು ಗ್ರಾಮದ ಹತ್ತು ತಿಂಗಳ ಮಗುವಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು.
ಆದರೆ, ಈ ವಿಷಯ ತಿಳಿದ ಕೊಣಾಜೆಯ ಗ್ರಾಮಸ್ಥರು ಸರಸ್ವತಿ ಅವರ ಮನೆಗೆ ಬಂದು ಕರೊನಾ ವೈರಸ್​ ಸೋಂಕಿರುವ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದೀರಿ. ನಮಗೂ ಸೋಂಕು ಹರಡುವ ಭೀತಿ ಇದೆ. ಆದ್ದರಿಂದ, ನೀವು ಯಾವುದೇ ಕಾರಣಕ್ಕೂ ನಿಮ್ಮ ಮನೆಯಿಂದ ಹೊರಬರಬಾರದು ಎಂದು ಪಟ್ಟುಹಿಡಿದಿದ್ದಲ್ಲದೆ, ಅವರಿಗೆ ಬಹಿಷ್ಕಾರವನ್ನೂ ಹಾಕಿದರು.
ವಿಷಯ ತಿಳಿದ ಉಳ್ಳಾಲ ಶಾಸಕ ಯು.ಟಿ. ಖಾದರ್​ ಕೊಣಾಜೆಗೆ ಭೇಟಿ ನೀಡಿ, ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಲ್ಲದೆ, ಕರೊನಾ ಸೋಂಕು ಇರುವ ಮಗುವಿಗೆ ಚಿಕಿತ್ಸೆ ನೀಡಿದ ಮಾತ್ರಕ್ಕೆ ಸೋಂಕು ತಗಲುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.


ಸರಿದಾರಿಯಲ್ಲಿ ಸಾಗುತ್ತಿದೆ ಭಾರತದ ಕೋವಿಡ್​ 19 ಸಮರ, ವಿಶ್ವಬ್ಯಾಂಕ್​ ಹರ್ಷ
ಎಷ್ಟೇ ಬೇಡಿಕೊಂಡರು ಮಗುವಿನ ತಂದೆಗೆ ಅಮಾನವೀಯವಾಗಿ ಥಳಿಸಿದ್ದ ಪೊಲೀಸ್‌ ಅಧಿಕಾರಿ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
