ಎನ್.ಎಲ್. ಶಿವಮಾದು ಬೆಂಗಳೂರುರಾಜ್ಯದಲ್ಲಿ ಲಂಗುಲಗಾಮಿಲ್ಲದೆ ಹುಟ್ಟಿಕೊಳ್ಳುತ್ತಿರುವ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ. ಅದರಲ್ಲೂ, ಬೆಂಗಳೂರಿನಂತಹ ಮಹಾನಗರದಲ್ಲಿ ಇವಕ್ಕೆ ಕಡಿವಾಣವೇ ಇಲ್ಲವಾಗಿದೆ.
ಕಿಂಡರ್ ಗಾರ್ಟನ್, ಮಾಂಟೆಸರಿ. ಪ್ಲೇಸ್ಕೂಲ್, ಪ್ರಿ ನರ್ಸರಿ, ಪ್ಲೇ ಹೋಮ್್ಸ…. ಹೀಗೆ ಹತ್ತಾರು ಹೆಸರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಡೆಸಲಾಗುತ್ತಿದೆ. ಆದರೆ, ನಿಯಮ ಪಾಲನೆಯಾಗುತ್ತಿಲ್ಲ. ಈ ಕಾರಣದಿಂದ ರಾಜ್ಯದಲ್ಲಿ ಬಹಳ ಸುಲಭವಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಬಹುದು ಎನ್ನುವಂತಾಗಿದೆ.
ಕರ್ನಾಟಕ ಶಿಕ್ಷಣ ಅಧಿನಿಯಮ-1983ರ ಸೆಕ್ಷನ್ 30 ಮತ್ತು 31, ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ ಮತ್ತು ನೋಂದಣಿ) ನಿಯಮ 1997ರ ಪ್ರಕಾರ ಪೂರ್ವ ಪ್ರಾಥಮಿಕ ಶಾಲೆಗಳ ನೋಂದಣಿಗೆ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. 2017ರಲ್ಲಿ ಬೆಂಗಳೂರಿನ ಪೂರ್ವ ಪ್ರಾಥಮಿಕ ಶಾಲೆಯೊಂದರಲ್ಲಿ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಕಂಡುಬಂದಿದ್ದರಿಂದ ಎಲ್ಲ ಪೂರ್ವ ಪ್ರಾಥಮಿಕ ಶಾಲೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿ 3 ತಿಂಗಳ ಗಡುವು ನೀಡಿತ್ತು. ಆದಾದ ನಂತರ ಶಿಕ್ಷಣ ಇಲಾಖೆಯೇ ವಿಷಯವನ್ನು ಮರೆತಿದೆ. ಇಲ್ಲಿಯವರೆಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಲ್ಲಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಪಾಲಕರ ಗಂಭೀರ ಆರೋಪವಾಗಿದೆ.
ಇಲಾಖೆ ಬಳಿ ದಾಖಲೆಯೇ ಇಲ್ಲ:ರಾಜ್ಯದಲ್ಲಿ ನಿಖರವಾಗಿ ಎಷ್ಟು ನರ್ಸರಿ ಶಾಲೆಗಳಿಗೆ ಎಂಬ ಮಾಹಿತಿಯೇ ಶಿಕ್ಷಣ ಇಲಾಖೆ ಬಳಿ ಇಲ್ಲವಾಗಿದೆ. ಒಂದನೇ ತರಗತಿಯಿಂದ ಸ್ಯಾಟ್ಸ್​ನಲ್ಲಿ ಅಪ್​ಡೇಟ್ ಮಾಡಲಾಗುತ್ತಿದೆ. ಆದರೆ, ಪೂರ್ವ ಪ್ರಾಥಮಿಕ ಶಾಲೆಗಳ ಬಗ್ಗೆ ಮಾಹಿತಿ ಇಲ್ಲವೆಂದು ಇಲಾಖೆ ಮೂಲಗಳು ತಿಳಿಸಿವೆ.
ಮಾರ್ಗಸೂಚಿಗಳೇನು?:ಪೂರ್ವ ಪ್ರಾಥಮಿಕ ಶಾಲೆ ನಡೆಸಲು ನೋಂದಣಿ ಕಡ್ಡಾಯ. ವರ್ಷದ ಯಾವುದೇ ಸಮಯದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಪ್ರತಿ 30 ಮಕ್ಕಳಿಗೆ ಉತ್ತಮ ಗಾಳಿ, ಬೆಳಕು ಹೊಂದಿರುವ ಕೊಠಡಿ, ಪ್ರತಿ ಮಗುವಿಗೆ ಒಂದು ಚದರ ಮೀ. ಸ್ಥಳಾವಕಾಶ ಇರಬೇಕು. ಸುರಕ್ಷಿತ ಆವರಣ ಮತ್ತು ಬೀಗ ಹಾಕಬಹುದಾದ ಪ್ರವೇಶ ದ್ವಾರವಿರಬೇಕು. ಬಾಡಿಗೆ ಕಟ್ಟಡವಾಗಿದ್ದಲ್ಲಿ ಕನಿಷ್ಠ ಮೂರು ವರ್ಷಗಳಿಗೆ ಗುತ್ತಿಗೆ ಹೊಂದಿರಬೇಕು. ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಹೊಂದಿರಬೇಕು. ಮಕ್ಕಳ ಹಾಜರಾತಿ ದಾಖಲೆ ನಿರ್ವಹಣೆ ಮಾಡಬೇಕು. ಕಡ್ಡಾಯವಾಗಿ ಮಹಿಳಾ ಸಿಬ್ಬಂದಿ ಮತ್ತು ಇಬ್ಬರು ಸಿಬ್ಬಂದಿ ಎಲ್ಲ ಸಮಯದಲ್ಲಿಯೂ ಲಭ್ಯವಿರಬೇಕು. ಶಾಲಾ ಆವರಣದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹೊಂದಿರಬೇಕು. ಇದನ್ನು ಬಳಸಲು ತರಬೇತಿ ಹೊಂದಿರಬೇಕು. ತುರ್ತು ಸಂದರ್ಭದಲ್ಲಿ ಆಸ್ಪತ್ರೆ, ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆಗಳನ್ನು ದಾಖಲಿಸಿರಬೇಕು.
10 ಸಾವಿರಕ್ಕೂ ಹೆಚ್ಚು:ರಾಜ್ಯದಲ್ಲಿ ನೋಂದಣಿ ಮಾಡಿಕೊಳ್ಳದೆ ನಡೆಸುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಪೂರ್ವ ಪ್ರಾಥಮಿಕ ಶಾಲೆಗಳಿವೆ. ಇಲಾಖೆಗೆ ಮುತುವರ್ಜಿ ಇಲ್ಲ, ಶಾಲೆ ಮಾಲೀಕರು ನೋಂದಾಯಿಸುವ ಗೋಜಿಗೂ ಹೋಗಿಲ್ಲ.
ರಾಜ್ಯದಲ್ಲಿರುವ ಸಾವಿರಾರು ಪ್ಲೇ ಸ್ಕೂಲ್​ಗಳು/ನರ್ಸರಿಗಳು ಶಿಕ್ಷಣ ಕಾಯ್ದೆಯಡಿ ನೋಂದಣಿಯಾಗಿಲ್ಲ. ಇಂಥ ಶಾಲೆಗಳಿಗೆ ಇಲಾಖೆ ನೋಟಿಸ್ ನೀಡಿ ನೋಂದಣಿಗೆ ಸೂಚಿಸಬೇಕು. ನೋಂದಣಿ ಮಾಡಿಕೊಳ್ಳದಿದ್ದರೆ ಒಂದು ಲಕ್ಷ ರೂ. ದಂಡ ವಿಧಿಸಬೇಕು.
| ಡಿ. ಶಶಿಕುಮಾರ್, ಕ್ಯಾಮ್್ಸ ಪ್ರಧಾನ ಕಾರ್ಯದರ್ಶಿ
ನೋಂದಣಿಯಾಗದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಮತ್ತು ಬಿಇಒ ಗಳಿಗೆ ಸೂಚನೆ ನೀಡಲಾಗಿದೆ. ಅನಧಿಕೃತ ಶಾಲೆಗಳಿದ್ದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ.
| ಬಿ.ಬಿ. ಕಾವೇರಿ ಶಾಲಾ ಶಿಕ್ಷಣ ಆಯುಕ್ತೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 5 =
Remember me
