ವಿಜಯವಾಣಿ ಸುದ್ದಿಜಾಲ ಬೆಳಗಾವಿ/ಬೀದರ್
ಇಡೀ ವಿಶ್ವಕ್ಕೆ ಕಂಟಕವಾಗಿರುವ ಕರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರಷ್ಟೇ ಶ್ರಮ ವಹಿಸಿ, ರೋಗಿಗಳ ಜೀವ ಉಳಿಸುವಲ್ಲಿ ನರ್ಸ್​ಗಳ ಪಾತ್ರ ಬಹು ದೊಡ್ಡದು. ಕೋವಿಡ್-19 ನಿಯಂತ್ರಣದ ಜತೆಗೆ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಯಲ್ಲೂ ನಿರತರಾಗಿರುವ ನರ್ಸ್​ಗಳ ವಿಚಾರದಲ್ಲಿ ಸರ್ಕಾರ ಮಾತ್ರ ಇಬ್ಬಗೆ ನೀತಿ ಅನುಸರಿಸುತ್ತಿದೆ.
ಇದಕ್ಕೊಂದು ಉದಾಹರಣೆ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್್ಸ). ಇಲ್ಲಿ 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಶುಶ್ರೂಷಾಧಿಕಾರಿಗಳು ಕೇವಲ 10 ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್್ಸ, ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾಸಿಕ 33,350 ರೂ. ವೇತನ ನೀಡಲಾಗುತ್ತಿದೆ. ಆದರೆ, ಇಲ್ಲಿ ಮಾತ್ರ 10 ಸಾವಿರ ರೂ. ವೇತನ ನೀಡಲಾಗುತ್ತಿದೆ.
ಪರಿಷ್ಕರಣೆಯಾಗದ ವೇತನ: ರಾಜ್ಯದ ವಿವಿಧೆಡೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಶುಶ್ರೂಷಾಧಿಕಾರಿಗಳಿಗೆ ಈ ಹಿಂದೆ ಮಾಸಿಕ 10 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ವೇತನ ಹೆಚ್ಚಿಸುವಂತೆ 2019ರಲ್ಲಿ ನೌಕರರು ಹೋರಾಟ ನಡೆಸಿದ್ದರಿಂದ ವೈದ್ಯಕೀಯ ಶಿಕ್ಷಣ ಇಲಾಖೆ ವೇತನ ಪರಿಷ್ಕರಣೆಗೆ ಸಮ್ಮತಿಸಿತು. ಆದರೆ, ಬಿಮ್ಸ್​ನಲ್ಲಿ ಈವರೆಗೂ ವೇತನ ಪರಿಷ್ಕರಣೆ ಆಗಿಲ್ಲ.
ರಿಸ್ಕ್ ಇನ್ಸೆಂಟಿವ್ ವಿಮೆ ಮರೀಚಿಕೆ
ಸರ್ಕಾರ ಆದೇಶ ಹೊರಡಿಸಿ ಎಂಟು ತಿಂಗಳಾದರೂ ನರ್ಸ್​ಗಳಿಗೆ ಮಾಸಿಕ 5 ಸಾವಿರ ರೂ. ಕೋವಿಡ್ ಪ್ರೋತ್ಸಾಹ ಧನ (ಕೋವಿಡ್ ರಿಸ್ಕ್ ಇನ್ಸೆಂಟಿವ್) ಸಿಕ್ಕಿಲ್ಲ. ಕಾಗದದಲ್ಲೇ ಆದೇಶಕ್ಕೆ ಸೀಮಿತಗೊಳಿಸಿದ ಸರ್ಕಾರದ ಧೋರಣೆಗೆ ನರ್ಸ್​ಗಳು ಗರಂ ಆಗಿದ್ದು, ಕರೊನಾ 2ನೇ ಅಲೆ ಅಬ್ಬರದ ಮಧ್ಯೆ ಹೋರಾಟದ ಹಾದಿ ತುಳಿಯುವ ಸಿದ್ಧತೆಯಲ್ಲಿದ್ದಾರೆ. ಮತ್ತೊಂದೆಡೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ನರ್ಸ್​ಗಳು ಪಾಸಿಟಿವ್​ಗೆ ಒಳಗಾಗಿ ಮೃತಪಟ್ಟರೆ ನೀಡುವ 30 ಲಕ್ಷ ರೂ. ವಿಮೆ ಸಹ ಮರೀಚಿಕೆಯಾಗಿದೆ. ಕೋವಿಡ್​ಗೆ ಬಲಿಯಾದ ನರ್ಸ್​ಗಳಿಗೆ 50 ಲಕ್ಷ ರೂ. ಪರಿಹಾರ ನೀಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪುರಸ್ಕರಿಸಿ 30 ಲಕ್ಷ ರೂ. ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈವರೆಗೆ ಒಬ್ಬ ನರ್ಸ್​ಗೂ ಈ ಸೌಲಭ್ಯ ಸಿಕ್ಕಿಲ್ಲ.
ಬಿಮ್ಸ್​ನಲ್ಲಿ ಗುತ್ತಿಗೆ ಆಧಾರದ 35 ನರ್ಸ್​ಗಳ ವೇತನ ಪರಿಷ್ಕರಣೆ ಮಾಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಅವರಿಗೆ ಸೌಲಭ್ಯ ಕಲ್ಪಿಸಲಾಗುವುದು.
| ಡಾ.ವಿನಯ ದಾಸ್ತಿಕೊಪ್ಪ, ಬಿಮ್ಸ್​ ನಿರ್ದೇಶಕ
ಶುಶ್ರೂಷಾಧಿಕಾರಿ ಗಳಿಗೆ ಸರ್ಕಾರ ನಿರಂತರ ಅನ್ಯಾಯ ಮಾಡುತ್ತಿದೆ. ವಿಪತ್ತಿನ ಈ ಪರಿಸ್ಥಿತಿಯಲ್ಲಿ ಹೋರಾಟ ಬೇಡವೆಂದು ಸುಮ್ಮನಾಗಿದ್ದೇವೆ. ಪ್ರೋತ್ಸಾಹ ಧನ ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ವಾರದೊಳಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ ಹೋರಾಟ ಅನಿವಾರ್ಯ.
| ರಾಜಕುಮಾರ ಮಾಳಗೆ, ಸರ್ಕಾರಿ ಶುಶ್ರೂಷಕರ ಸಂಘದ ರಾಜ್ಯಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 9 =
Remember me
