ಬೆಂಗಳೂರು:ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಚಿತ್ರೀಕರಿಸಿ ಪ್ರಿಯಕರನಿಗೆ ರವಾನಿಸುತ್ತಿದ್ದುದು ಯಾಕೆ? ಅಂಥದ್ದೇನಾಗಿತ್ತು ಆ ನರ್ಸ್​ ಅಶ್ವಿನಿಗೆ? ಪೊಲೀಸ್ ವಿಚಾರಣೆಯಲ್ಲಿ ಇನ್ನೂ ಒಂದಿಷ್ಟು ಕುತೂಹಲಕಾರಿ ವಿಷಯಗಳು ಬಹಿರಂಗವಾಗಿವೆ. ಪೊಲೀಸ್ ಕಸ್ಟಡಿಯಲ್ಲಿರುವ ಅಶ್ವಿನಿ ಬಹಿರಂಗಪಡಿಸಿದ ಮಾಹಿತಿ ಇದು.
ಮೊಬೈಲ್ ಮರೆತಿದ್ದೆ !
ನನ್ನ ಸ್ನಾನ ಆದ ನಂತರ ಶೌಚಗೃಹದ ಕಿಟಕಿಯಲ್ಲಿ ಮೊಬೈಲ್​ ವಿಡಿಯೋ ರೆಕಾರ್ಡ್ ಆನ್ ಮಾಡಿಟ್ಟು ಬರುತ್ತಿದ್ದೆ. ನಂತರ ಯಾವ ಸಹೋದ್ಯೋಗಿ ಸ್ನಾನ ಮಾಡಲು ಹೋಗುತ್ತಿದ್ದಳೋ ಅವಳ ಸ್ನಾನದ ನಂತರ ಹೋಗಿ ಮೊಬೈಲ್ ಎತ್ತಿಕೊಂಡು ಬರುತ್ತಿದ್ದೆ. ನಂತರದ ಸರದಿಯವರು ಕೇಳಿದಾಗ ಮೊಬೈಲ್ ಕೊಂಡೊಯ್ಯುವುದು ಮರೆತಿದ್ದಾಗಿ ಹೇಳುತ್ತಿದ್ದೆ ಎಂದು ನರ್ಸ್ ಅಶ್ವಿನಿ ತಿಳಿಸಿದ್ದಾಳೆ.
ಈಗಾಗಲೇ ಎರಡು ಮದುವೆಯಾಗಿದ್ದರೂ ಪತಿಯಿಂದ ದೂರ ಇದ್ದೆ. ವಿಚ್ಛೇದನವನ್ನೂ ಪಡೆದುಕೊಂಡಿದ್ದೆ. 2017ರಲ್ಲಿ ಆಕಸ್ಮಿಕವಾಗಿ ಪ್ರಭು ತನ್ನ ಸ್ನೇಹಿತನಿಗೆ ಕರೆ ಮಾಡಲು ಹೋಗಿ ನನ್ನ ಮೊಬೈಲ್​ಗೆ ಕರೆ ಮಾಡಿದ್ದ. ಹಾಗೆ ಶುರುವಾದ ಪರಿಚಯ ಸ್ನೇಹಕ್ಕೆ ಕಾರಣವಾಯಿತು. ನನಗೆ ಆತನಲ್ಲಿ ಪ್ರೇಮಾಂಕುರವಾಯಿತು. ಪ್ರಭುವೂ ನನಗೆ ಮರುಳಾಗಿದ್ದ. ನನ್ನ ಧ್ವನಿಗೆ ಮಾರುಹೋಗಿದ್ದ. ಇಬ್ಬರೂ ಪರಸ್ಪರ ಭೇಟಿ ಆಗಿ ಮದುವೆಯಾಗಿ ಒಟ್ಟಿಗೆ ಬದುಕು ಸಾಗಿಸಲು ತೀರ್ಮಾನಿಸಿದೆವು. ಪ್ರಭು ಚೆನ್ನೈನಲ್ಲಿ ಪ್ರತಿಷ್ಠಿತ ಹೋಟೆಲ್​ನಲ್ಲಿ ಬಾಣಸಿಗ. ಯಾವಾಗ ಅವನಿಗೆ ನನ್ನ ಬದುಕಿನ ಹಿನ್ನೆಲೆ ತಿಳಿದವೋ ಆಗ ಆತ ದೂರಾಗಲು ಪ್ರಯತ್ನಿಸಿದ.
ಮೂರನೇ ಪತಿಯೂ ದೂರಾಗುತ್ತಿರುವುದನ್ನು ಸಹಿಸಲಾಗದೆ ನಿತ್ಯವೂ ನಾನು ಸ್ನಾನ ಮಾಡುತ್ತಿರುವ ವಿಡಿಯೋವನ್ನು ಅವನ ಮೊಬೈಲ್​ಗೆ ಕಳುಹಿಸುತ್ತಿದ್ದೆ. ಅದನ್ನು ನೋಡಿ ತೀಟೆ ತೀರಿಸಿಕೊಳ್ಳುತ್ತಿದ್ದ ಆತ, ಬೇರೆಯವರ ವಿಡಿಯೋ ಕಳುಹಿಸುವಂತೆ ಒತ್ತಾಯಿಸಿದ. ಏನಾದರೂ ಸರಿ ಈತನನ್ನು ಹಿಡಿತದಲ್ಲಿ ಇರಿಸಬೇಕೆಂದರೆ ಬೇರೆ ದಾರಿ ಇಲ್ಲ ಎಂದು ಸಹೋದ್ಯೋಗಿಗಳು ಸ್ನಾನ ಮಾಡುತ್ತಿರುವ ದೃಶ್ಯ ಚಿತ್ರೀಕರಿಸಿ ಕಳುಹಿಸಲಾರಂಭಿಸಿದೆ.
ಇದನ್ನೂ ಓದಿ:ನಿರಾಶ್ರಿತರು ಮತ್ತು ಕಾಂಗ್ರೆಸ್ಸಿನ ಇತಿಹಾಸದ ಸುತ್ತ; ಕೆ.ಎಸ್.ನಾರಾಯಣಾಚಾರ್ಯರ ಅಂಕಣ
ಕೈಕೊಟ್ಟ ಲಕ್:ಅಂದು ಡಿಸೆಂಬರ್ 5. ಸಂಜೆ 6.45ಕ್ಕೆ ಸಂತ್ರಸ್ತೆ ಸಹೋದ್ಯೋಗಿ ಸ್ನಾನಕ್ಕೆ ಹೋದಾಗ ಮೊಬೈಲ್ ಇರುವುದು ಆಕೆಯ ಗಮನಕ್ಕೆ ಬಂತು. ಅದನ್ನೆತ್ತಿ ನೋಡಿದರೆ ವಿಡಿಯೋ ರೆಕಾರ್ಡರ್ ಆನ್ ಆಗಿರುವುದು ಪತ್ತೆಯಾಗಿದೆ. ಪರಿಶೀಲಿಸಿದಾಗ ಸ್ನಾನದ ದೃಶ್ಯಗಳ ವಿಡಿಯೋಗಳಿರುವುದು ಕಂಡುಬಂದಿದೆ. ದೂರು ದಾಖಲಿಸಿಕೊಂಡ ಪೊಲೀಸರು, ಮೊಬೈಲ್ ವಶಪಡಿಸಿಕೊಂಡು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ 30 ನಿಮಿಷದ ಒಂದು ವಿಡಿಯೋ ಮಾತ್ರ ಪತ್ತೆಯಾಗಿದೆ. ಹಳೆಯ ವಿಡಿಯೋ ರಿಟ್ರೈವ್ ಮಾಡಲು ಅದನ್ನು ಫಾರೆನ್ಸಿಕ್ ಲ್ಯಾಬ್​ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಹೆಂಡತಿಯನ್ನೇ ಪಣಕ್ಕಿಟ್ಟ, ಜೂಜಾಟದಲ್ಲಿ ಸೋತು ಸ್ನೇಹಿತರ ಸುಖಕ್ಕೆ ಕೊಟ್ಟ, ಒಪ್ಪದ್ದಕ್ಕೆ ಪತ್ನಿ ಮೇಲೆ ಆ್ಯಸಿಡ್ ಸುರಿದುಬಿಟ್ಟ..!
ಮೂರನೆ ಪತಿ ಪ್ರಭು ಹೇಳುವುದೇನು?ಪ್ರಭು (35)ವನ್ನೂ ಆರೋಪಿ ಎಂದು ಪರಿಗಣಿಸಿರುವ ಪೊಲೀಸರು ಚೆನ್ನೈನಿಂದ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ, ವಿಡಿಯೋ ನೋಡಿ ಡಿಲೀಟ್ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಆತನ ಮೊಬೈಲನ್ನೂ ವಶಪಡಿಸಿಕೊಂಡು ಫಾರೆನ್ಸಿಕ್ ಲ್ಯಾಬ್​ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ನರ್ಸ್​ಗಳ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಪ್ರಿಯಕರನಿಗೆ ಕಳುಹಿಸುತ್ತಿದ್ದಳಾಕೆ: ಮೊಬೈಲಲ್ಲಿದ್ದವು ನೂರಾರು ವಿಡಿಯೋ!

ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
