ಮೆಲ್ಬೋರ್ನ್:ಟಿ-20 ವಿಶ್ವಕಪ್​ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ರೋಚಕ ಜಯ ಗಳಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯಾ ತೋರಿದ ಅದ್ಭುತ ನಿರ್ವಹಣೆಯ ಮೂಲಕ ಪಾಕಿಸ್ತಾನ ವಿರುದ್ಧ ಜಯ ಗಳಿಸಲು ಸಾಧ್ಯವಾಗಿದೆ.
ಭಾರತ ಆರಂಭದಲ್ಲಿಯೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿತ್ತು. ಈ ವೇಳೆ ಒಂದಾದ ಕೊಹ್ಲಿ ಹಾಗೂ ಪಾಂಡ್ಯಾ 113ರನ್​ಗಳ ಜವಾಬ್ದಾರಿಯುತ ಜೊತೆಯಾಟದ ಮೂಲಕ ಜಯದ ಹಾದಿಯ ಸುಗಮಗೊಳಿಸುತ್ತಾ ಹೋದರು. ಇದೀಗ ವಿರಾಟ್ ಕೊಹ್ಲಿ ಹಾಗೂ ಪಾಂಡ್ಯಾ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕೊಹ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದರೆ, ಪಾಂಡ್ಯಾ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಾರೆ.
ಮಾತನಾಡುತ್ತಾ, 19ನೇ ಓವರ್​ನ ಕೊನೆಯ ಎರಡು ಬಾಲ್​ನಲ್ಲಿ ಸಿಕ್ಸರ್​​ ಸಿಡಿಸಿದ ಕೊಹ್ಲಿಯನ್ನು ಪಾಂಡ್ಯಾ ಅಭಿನಂದಿಸಿದರು. ಕೊಹ್ಲಿ ಆಡಿತ ಆ ಎರಡು ಹೊಡೆತಗಳು ತಂಡದ ಗೆಲುವಿನಲ್ಲಿ ಮುಖ್ಯವಾಗಿದೆ. ನಾನು ಈವರೆಗೆ ಹಲವು ಸಿಕ್ಸರ್​​ ಸಿಡಿಸಿದ್ದೇನೆ. ಆದರೆ ಕೊಹ್ಲಿ ಬ್ಯಾಟಿಂದ ಸಿಡಿದ ಸಿಕ್ಸರ್​ಗಳು ವಿಶೇಷವಾದದ್ದು. ಕೊಹ್ಲಿಯಿಂದ ಮಾತ್ರ ಇಂತಹ ವಾವ್ ಎನಿಸುವಂತಹ ಶಾಟ್​ ಹೊಡೆಯಲು ಸಾಧ್ಯ ಎಂದು ಪಾಂಡ್ಯಾ ಹೇಳಿದ್ದಾರೆ.
ನಾವು ಈ ಗೆಲುವಿಗಾಗಿ ತುಂಬಾ ಕಷ್ಟ ಪಟ್ಟಿದ್ದೇವೆ. ಅಸಾಧಾರಣ ಎನಿಸುವಂತಹ ಶಾಟ್​​ ಹೊಡೆದರೆ ಈ ಪಂದ್ಯ ಇಷ್ಟು ಮುಖ್ಯ ಆಗುತ್ತಿರಲಿಲ್ಲ. ಆದರೆ ನಾವು ಹೋರಾಡಿ ಈ ಪಂದ್ಯ ಗೆದ್ದಿದ್ದೇವೆ. ಹೀಗಾಗಿ ಈ ಪಂದ್ಯದ ಗೆಲುವು ವಿಶೇಷವಾಗಿದೆ ಎಂದು ಪಾಂಡ್ಯ ಹೇಳಿದರು.
Of special knocks, game-changing sixes & thrilling victory at the MCG! 👌 💪𝗦𝗽𝗲𝗰𝗶𝗮𝗹: Men of the moment –@imVkohli&@hardikpandya7– chat after#TeamIndiabeat Pakistan in the#T20WorldCup. 👏 👏 – By@RajalAroraFull interview 🎥 🔽#INDvPAKhttps://t.co/3QKftWa7dkpic.twitter.com/sK7TyLFcSI— BCCI (@BCCI)October 24, 2022
Of special knocks, game-changing sixes & thrilling victory at the MCG! 👌 💪𝗦𝗽𝗲𝗰𝗶𝗮𝗹: Men of the moment –@imVkohli&@hardikpandya7– chat after#TeamIndiabeat Pakistan in the#T20WorldCup. 👏 👏 – By@RajalAroraFull interview 🎥 🔽#INDvPAKhttps://t.co/3QKftWa7dkpic.twitter.com/sK7TyLFcSI

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
