ಬೆಂಗಳೂರು:ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ವೈರಸ್ ಶಂಕಿತರ ಪೈಕಿ ಶೇ.77 ರೋಗಿಗಳು 60 ವರ್ಷಕ್ಕಿಂತ ಒಳಗಿನವರಾಗಿದ್ದಾರೆ. ಅತಿಹೆಚ್ಚು ಅಂದರೆ ಶೇ. 41.9 ಪ್ರಮಾಣದಲ್ಲಿ 20ರಿಂದ 40 ವರ್ಷದ ವಯಸ್ಸಿನವರಿಗೆ ಸೋಂಕು ತಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆೆ.
ಸೋಂಕಿತರ ಪೈಕಿ ಶೇ.8.6 ಮಂದಿ 0-20 ವರ್ಷ, ಶೇ.41.88 ಜನರು 21-40 ವರ್ಷ, ಶೇ.32.82 ಮಂದಿ 41- 60 ವರ್ಷ, ಶೇ.16.69 ಜನ 60 ವರ್ಷ ಮೇಲ್ಪಟ್ಟವರು. ಮಧ್ಯವಯಸ್ಕರಲ್ಲಿ ಬಹುತೇಕರು ವಿವಿಧ ಕಾರಣಕ್ಕೆ ವಿದೇಶಕ್ಕೆ ಹೋಗಿ ಭಾರತಕ್ಕೆ ಮರಳಿದವರಾಗಿದ್ದಾರೆ.
ತಜ್ಞರು ಹೇಳುವ ಪ್ರಕಾರ ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡಕ್ಕೆ ಒಳಗಾಗಿರುವ ವಯೋವೃದ್ಧರಲ್ಲಿ ಕರೊನಾ ವೈರಸ್ ಕಂಡುಬಂದರೆ ಅವರು ಉಳಿಯುವ ಸಾಧ್ಯತೆ ಕಡಿಮೆ. ಆದರೆ, ಈವರೆಗೆ ಕರೊನಾ ವೈರಸ್​ಗೆ ತುತ್ತಾಗಿ ಜೀವ ಕಳೆದುಕೊಂಡ ರೋಗಿಗಳ ವಯಸ್ಸಿನ ಪ್ರಮಾಣವನ್ನು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿಲ್ಲ. 58 ಗಂಭೀರ ಪ್ರಕರಣಗಳು ಸಹ ಇವೆ. ಇವು ಹೆಚ್ಚಾಗಿ ಕೇರಳ, ಮಧ್ಯಪ್ರದೇಶ, ದೆಹಲಿಯಲ್ಲಿ ವರದಿಯಾಗಿವೆ. ಇವರು ಬಹುವಿಧವಾದ ರೋಗಗಳಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಇದೆ. ಭಾರತದಲ್ಲಿ ಸಾಧ್ಯವಾದಷ್ಟು ಕರೊನಾ ವೈರಸ್ ಹರಡದಂತೆ ನೋಡಿಕೊಳ್ಳಲು ಮತ್ತು ಶಂಕಿತರಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಲು ಶ್ರಮಿಸುತ್ತಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಕರೊನಾ ವೈರಸ್​ ಗಾಳಿಯಿಂದ ಹರಡುವುದಕ್ಕೆ ಆಧಾರಗಳಿಲ್ಲ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + nineteen =
Remember me
