ಬೆಂಗಳೂರು:ರಾಜ್ಯದಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದರೂ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಇನ್ನೂ ತಡೆ ಬಿದ್ದಿಲ್ಲ.
ಇತ್ತೀಚಿಗಷ್ಟೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಉಪ ಆಯುಕ್ತರು ಹಾಗೂ ಡೆಪ್ಯೂಟಿ ಸೂಪರಿಡೆಂಟ್ ಸೇರಿ ಇತರ ವೃಂದದ ಒಟ್ಟು 140 ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗಿತ್ತು. ಪ್ರಿ ಮೆಚ್ಯೂರ್ ( ಅವಧಿ ಪೂರ್ವ ಮುನ್ನ) ಕಾರಣ ಕೊಟ್ಟು ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಈಗ ಬೆಂಗಳೂರಿನ 16 ಸೇರಿ ರಾಜ್ಯಾದ್ಯಂತ ಒಟ್ಟು 44 ಅಬಕಾರಿ ನಿರೀಕ್ಷರನ್ನು ಬೇರೆ ಕಡೆಗೆ ಎತ್ತಂಗಡಿ ಮಾಡುವುದಕ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಗ್ರೂಪ್ ‘ಸಿ’ಅಡಿ ಬರುವ ಅಬಕಾರಿ ನಿರೀಕ್ಷರು, ಬೇರೆ ಕಡೆ ವರ್ಗಾವಣೆ ಆದರೆ ಸರ್ಕಾರದ ನಿಯಮದಂತೆ ನಾಲ್ಕು ವರ್ಷ ಕಾಲ ಕಾರ್ಯನಿರ್ವಹಿಸಲು ಅವಕಾಶವಿದೆ. ಹಿಂದೆ ವರ್ಗಾವಣೆಗೊಂಡ ಈಗ 2-3 ವರ್ಷ ಕಳೆಯುತ್ತಿರುವಾಗಲೇ ಏಕಾಏಕಿ ಎಲ್ಲ ಅಬಕಾರಿ ನಿರೀಕ್ಷಕರನ್ನು ವರ್ಗಾವಣೆಗೆ ಇಲಾಖೆ ಸಚಿವರು ಮುಂದಾಗಿದ್ದಾರೆ. ಇದಕ್ಕೆ ರೋಸಿಹೋಗಿರುವ ಕೆಲವರು, ಅವಧಿ ಪೂರ್ವ ಮುನ್ನ ಕಾರಣ ಕೊಟ್ಟು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಇನ್ನೂ ಕೆಲವರು ಕೋರ್ಟ್‌ಗೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಇದರ ನಡುವೆ ಬೇಡಿಕೆ ಇರುವ ಸ್ಥಳಗಳಿಗೆ ಹೆಚ್ಚು ಕಮಿಷನ್ ಪಡೆದು ವರ್ಗಾವಣೆ ಮಾಡಲು ಹುನ್ನಾರ ನಡೆದಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ:ರಾಜಧಾನಿಯಲ್ಲಿ ಮತ್ತೆ ಒಕ್ಕರಿಸಿವೆ ರಸ್ತೆಗುಂಡಿಗಳು!
ಗ್ರೂಪ್ ‘ಎ’ ಅಧಿಕಾರಿಗಳೂ ವರ್ಗಾ:ಗ್ರೂಪ್ ‘ ಎ’ ಅಡಿ ಬರುವ ಅಬಕಾರಿ ಉಪ ಆಯುಕ್ತರು ಒಂದು ಸ್ಥಳಕ್ಕೆ ವರ್ಗಾವಣೆಗೊಂಡರೆ ಅದೇ ಸ್ಥಳದಲ್ಲಿ 2 ವರ್ಷ ಕಾಲ ಕಾರ್ಯನಿರ್ವಹಿಸಬಹುದು. ಹೀಗಿದ್ದರೂ, ಅವಧಿ ಪೂರ್ವ ಮುನ್ನವೇ ಹಲವು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಬಕಾರಿ ಉಪ ಆಯುಕ್ತರನ್ನು ಏಕಾಏಕಿ ಎತ್ತಂಗಡಿ ಮಾಡಲಾಗಿತ್ತು. ಕೆಲವರು ಕೋರ್ಟ್‌ನಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಕೆಲವರಿಂದ ಬೇಡಿಕೆ ಇರುವ ಸ್ಥಳಗಳ ನಿಯುಕ್ತಿಗಾಗಿ ಅಧಿಕಾರಿಗಳಿಂದ ಕೋಟ್ಯಂತರ ರೂ. ಪಡೆಯಲಾಗಿದೆ. ಹಣ ನೀಡದ ಕೆಲವರಿಗೆ ಡಿಸ್ಟಿಲರಿ, ಬ್ರಿವರಿ, ವೈನರಿ, ಮೈಕ್ರೋಬ್ರಿವರಿಯಲ್ಲಿರುವ ಹುದ್ದೆಗಳನ್ನು ತೋರಿಸಲಾಗಿದೆ.ಹೀಗಾಗಿ, ಪೊಲೀಸ್ ಇಲಾಖೆಯಂತೆ ಅಬಕಾರಿ ಇಲಾಖೆಯಲ್ಲಿಯೂ ಅಸಮರ್ಪಕವಾಗಿ ವರ್ಗಾವಣೆ ದಂಧೆ ನಡೆದಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 + 19 =
Remember me
