ಚಾಮರಾಜನಗರ:ಭಾರೀ ಮಳೆ ಹಿನ್ನೆಲೆಯಲ್ಲಿ ಮಳೆ ಹಾನಿ ಪರಿಶೀಲನೆಗೆ ಹೋಗಿ ನೀರಿನ ನಡುವೆ ಅಧಿಕಾರಿಗಳು ಸಿಲುಕಿ ಪರದಾಡಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಕಣ್ಣೇಗಾಲ-ಆಲೂರು ನಡುವೆ ರಭಸವಾಗಿ ಹರಿಯುವ ನೀರಿನ ನಡುವೆ ಅಧಿಕಾರಿಗಳ ಕಾರು ಸಿಲುಕಿದೆ. ಪಿಡಬ್ಲ್ಯುಡಿ ಎಇಇ ಕಾಂತರಾಜು, ಎಇ ರಾಜು, ಚಾಲಕ ಮುರುಗೇಶ್ ಕಾರಿನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
ಹೊಳೆ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಳವಾಗಿದ್ದು, ಕಾರಿನ ಮೇಲೆ ಹತ್ತಿ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ನೀರಿನಲ್ಲಿ ಮುಳುಗಿದ ಕಾರನ್ನು ಹಗ್ಗ ಕಟ್ಟಿ ಎಳೆದು ತರಲಾಗಿದೆ.
ತಿಂಡಿ ವಿಷಯಕ್ಕೆ ಜಗಳ: ಹೆತ್ತ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳ ಹತ್ಯೆಗೈದ ಪಾಪಿ
Sign in to your account
Please enter an answer in digits:4 × 2 =
Remember me
