|ವಿಲಾಸ ಮೇಲಗಿರಿಬೆಂಗಳೂರು
ಸ್ಥಳೀಯ ಸ್ವಯಂ ಸರ್ಕಾರಗಳೆಂದು ಕರೆಯಲಾಗುವ ಗ್ರಾಮ ಪಂಚಾಯಿತಿಗಳು ಅಧಿಕಾರಿಗಳ ದರ್ಬಾರ್​ನಲ್ಲಿ ಸೊರಗಿ ಸುಣ್ಣವಾಗುತ್ತಿವೆ. ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸಲು ಅನೇಕ ತಂತ್ರಗಳನ್ನು ಅಧಿಕಾರಶಾಹಿ ನಡೆಸುತ್ತಲೇ ಇದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಮೆಲೆ ಯಾವುದೇ ದೂರು ಸ್ವೀಕರಿಸುವ ಹಾಗೂ ಕ್ರಮ ಕೈಗೊಳ್ಳುವ ಅಧಿಕಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಥವಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಇಲ್ಲದಿದ್ದರೂ ದೂರು ಸ್ವೀಕರಿಸಿ ತನಿಖೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದು ಚುನಾಯಿತ ಪ್ರತಿನಿಧಿಗಳಲ್ಲಿ ಆತಂಕ ಉಂಟು ಮಾಡಿದೆಯಲ್ಲದೆ, ಇದು ಪ್ರಜಾಪ್ರಭುತ್ವ ವಿರೋಧಿನಡೆ ಯಾಗಿದೆ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ.
ಬುಡ ಅಲುಗಾಡಿಸುತ್ತಿರುವ ಅಧಿಕಾರಶಾಹಿ:ಸಂವಿಧಾನದ 73ನೇ ತಿದ್ದುಪಡಿಯ ನಂತರ ಗ್ರಾಮ ಪಂಚಾಯಿತಿಗಳು ಸಂವಿಧಾನಾತ್ಮಕ ಸರ್ಕಾರಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಾಗೆ ಸಂವಿಧಾನದ ಪ್ರಕರಣ 243ಜಿ ಅನ್ವಯ ಸ್ಥಳೀಯ ಸ್ವಯಂ ಸರ್ಕಾರಗಳು. ಅವುಗಳಲ್ಲೂ ಸಂಸದರು ಹಾಗೂ ಶಾಸಕರ ಹಾಗೆ ಜನರಿಂದ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆ. ಅವುಗಳಿಗೂ ವಿಕೇಂದ್ರಿಕರಣ ತತ್ವದ (ಕ್ಟಜ್ಞಿ್ಚಟ್ಝಛಿ ಟ್ಛ ಠ್ಠಚಿಠಜಿಛಜಿಚ್ಟಜಿಠಿಢ) ಅಡಿಯಲ್ಲಿ ಜವಾಬ್ದಾರಿಗಳ ಹಂಚಿಕೆಯಾಗಿದೆ. ಕರ್ನಾಟಕ ರಾಜ್ಯದ ವಿಧಾನ ಮಂಡಳದ ಉಭಯ ಸದನಗಳು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993 ರಚಿಸಿ, ಸರ್ವಾನುಮತದಿಂದ ಒಪ್ಪಿ ರಾಷ್ಟ್ರಪತಿಗಳಿಂದ ಅನುಮೋದಿಸಲ್ಪಟ್ಟಿದೆ. ಈ ಕಾಯ್ದೆಯು ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳೆಂದು ಸ್ಪಷ್ಟವಾಗಿ ಹೇಳುತ್ತದೆ. ಆದರೆ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳನ್ನು ತಮ್ಮ ಕೈಕೆಳಗೆ ಕಾರ್ಯನಿರ್ವಹಿಸುವ ಶಾಖಾ ಕಚೇರಿಗಳೆಂದು ಭಾವಿಸಿ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಜಲಜೀವನ್​ನಲ್ಲಿ ದರ್ಬಾರ್:ಜಲಜೀವನ್ ಮಿಷನ್ ಜನರ ಸಹಭಾಗಿತ್ವದಲ್ಲಿ ದೇಶದ ಪ್ರತಿ ಮನೆಗೂ ನಳ ನೀರಿನ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿಗಳ ಕನಸಿನ ಯೋಜನೆ. ಈ ಯೋಜನೆಯನ್ನು ಗ್ರಾಮ ಪಂಚಾಯಿತಿ ಹಾಗೂ ಗ್ರಾಮದ ಜನರ ಗಮನಕ್ಕೂ ತಾರದೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ, ಫಲಾನುಭವಿಗಳ ವಂತಿಗೆ ಸಂಗ್ರಹಿಸಿಕೊಡುವಂತೆ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರ ಮೇಲೆ ಕ್ರಮ ಜರುಗಿಸುವುದಾಗಿ ಹೆದರಿಸುವ ಪ್ರಕರಣಗಳೂ ಮೇಲಧಿಕಾರಿಗಳ ಗಮನದಲ್ಲಿವೆ.
ಸ್ಬಚ್ಛಭಾರತ, ಅಧಿಕಾರಿಗಳಿಂದ ಕಲುಷಿತ:ಸ್ವಚ್ಛ ಭಾರತ ಅಭಿಯಾನವೂ ಪ್ರಧಾನ ಮಂತ್ರಿಗಳ ಕನಸಿನ ಯೋಜನೆ. ಈ ಯೋಜನೆಯನ್ನೂ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲೇ ಪಿಡಿಒಗಳ ಸಭೆ ನಡೆಸಿ ಯಾವುದೇ ಕ್ಷೇತ್ರ ಸಮೀಕ್ಷೆ ನಡೆಸದೆ ಜಿಲ್ಲಾ ಪಂಚಾಯಿತಿ ಸಭೆಯಲ್ಲೇ ವಿಸõತ ಯೋಜನಾ ವರದಿ ತಯಾರಿಸಿ ಅದರಂತೆ ಅನುಷ್ಠಾನ ಮಾಡುವಂತೆ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕಸ ಸಂಗ್ರಣೆಗೆ ಬೇಕಾದ ವಾಹನ, ಡಸ್ಟ್ ಬಿನ್​ಗಳು ಹಾಗೂ ಇತರೆ ಉಪಕರಣಗಳ ಖರೀದಿಗೆ ತಾವೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಏಜೆನ್ಸಿಗಳನ್ನು ಗುರುತು ಮಾಡಿ, ಹೆಚ್ಚಿನ ಬೆಲೆಗೆ ಅವುಗಳನ್ನು ಕೊಳ್ಳುವಂತೆ ಮಾಡಿದ್ದಾರೆ.
ಆರ್ಥಿಕ ಸ್ವಾತಂತ್ರ್ಯಹರಣ:ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ವಾತಂತ್ರ್ಯದಲ್ಲೂ ಹಸ್ತಕ್ಷೇಪ ನಡೆಯುತ್ತಿದೆ. ಅವರು ಗುರುತಿಸಿದವರಿಂದ ಖರೀದಿ ಮಾಡದಿದ್ದಲ್ಲಿ ಪಿಡಿಒಗಳನ್ನು ಹೆದರಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ.
ಅವಶ್ಯವಿಲ್ಲದಿದ್ದರೂ ಅನುಮೋದನೆ ನೆಪ:15ನೇ ಹಣಕಾಸು ಅನುದಾನ ವಿನಿಯೋಗದಲ್ಲಿ ಯಾವುದೇ ಮೇಲಿನ ಹಂತದ ಅಧಿಕಾರಿಗಳ ಅಥವಾ ಸಂಸ್ಥೆಗಳ ಅನುಮೋದನೆಯ ಅವ್ಯಕತೆಯಿಲ್ಲ ಎಂದು ಆದೇಶವಿದ್ದರೂ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪರಿಶೀಲನೆಗಾಗಿ ಕಳಿಸಿ ಎಂದು ಅದೇಶಗಳನ್ನು ಹೊರಡಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಆಡಳಿತ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಶಾಖಾ ಕಚೇರಿಗಳಂತೆ ಕಾರ್ಯನಿರ್ವಹಣೆ?:ರಾಜ್ಯ ಸರ್ಕಾರದ ಮಟ್ಟದಲ್ಲೂ ಸೋಲಾರ್ ಪ್ಲಾಂಟ್ ಮುಂತಾದ ಯೋಜನೆಗಳನ್ನು ರೂಪಿಸಿ, ಸರಬರಾಜು ಏಜೆನ್ಸಿಗಳನ್ನು ನೇಮಿಸಿ ಗ್ರಾಮ ಪಂಚಾಯಿತಿಗಳು ಆ ಯೋಜನೆಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಅನುಷ್ಠಾನಗೊಳಿಸುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮ ಪಂಚಾಯತಿಗಳು ಯಾವುದೇ ಸ್ವಾತಂತ್ರವಿಲ್ಲದೆ, ಒಂದು ರೀತಿಯ ಗ್ರಾಮೀಣಾಭಿವೃದ್ಧಿ ಇಲ್ಲಾಖೆಯ ಶಾಖಾ ಕಚೇರಿಗಳಂತೆ ಕಾರ್ಯನಿರ್ವಹಿಸುವಂತಾಗಿದೆ. ಮತ ನೀಡಿ ಆಯ್ಕೆ ಮಾಡಿದ ಜನರ ಆಸೆ ಆಕಾಂಕ್ಷೆಗಳಿಗನುಗುಣವಾಗಿ ಯೋಜನೆ ರೂಪಿಸಿ ಜನರಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಪರ ಆಡಳಿತ ನೀಡುವ ಅವಕಾಶವೇ ಗ್ರಾಮ ಪಂಚಾಯತಿಗಳಿಗೆ ಇಲ್ಲವಾಗಿದೆ.
ಸುಮ್ಮನಾದ ಸರ್ಕಾರ!:ಹಣಕಾಸು ನಿರ್ವಹಣೆ ಹೊಣೆಯಿಂದ ಗ್ರಾಪಂ ಅಧ್ಯಕ್ಷರನ್ನು ಹೊರಗಿಟ್ಟು ಮತ್ತು ಎಲ್ಲ ಚೆಕ್​ಗಳಿಗೆ ಸಹಿ ಮಾಡುವ ಅಧಿಕಾರವನ್ನು ಪಿಡಿಒಗೆ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡಲು ರೂಪಿಸಲಾದ ನಡಾವಳಿ ಜಾರಿಗೊಳಿಸಲು ಇತ್ತೀಚೆಗೆ ಸರ್ಕಾರ ಮುಂದಾಗಿತ್ತು. ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾದ್ದರಿಂದ ಸರ್ಕಾರ ಜಾಣ ಮೌನಕ್ಕೆ ಜಾರಿದೆ.
ಹಣ ಸುಡುವ ಇನ್ಸುನೇಟರ್!:ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಇನ್ಸುನೇಟರ್ (ಸ್ಯಾನಿಟರಿ ನ್ಯಾಪ್ಕಿನ್ ಸುಡುವ ಯಂತ್ರ) ಕೊಳ್ಳಲು ಕೇಂದ್ರ ಸರ್ಕಾರದಿಂದ ಹಣ ಬಂದ ಸಂದರ್ಭದಲ್ಲೂ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿ ಅಧಿಕಾರಿಗಳೇ ಏಜೆನ್ಸಿಗಳನ್ನು ಗುರುತಿಸಿ ಅವರಿಂದಲೇ ಹೆಚ್ಚಿನ ಬೆಲೆಗೆ ಖರೀದಿಸುವಂತೆ ಮಾಡಿರುವ ಉದಾಹರಣೆಗಳೂ ಚುನಾಯಿತ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿವೆ.
ರೂಪಾಯಿ ಕುಸಿತವಾಗುತ್ತಿಲ್ಲ, ಡಾಲರ್ ಸಶಕ್ತವಾಗುತ್ತಿದೆ: ಹಣದುಬ್ಬರವನ್ನು ಹೀಗೆ ಸಮರ್ಥಿಸಿಕೊಂಡ ವಿತ್ತಸಚಿವೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
