ರಮೇಶ ದೊಡ್ಡಪುರಬೆಂಗಳೂರು
ಕೇಂದ್ರ ಸರ್ಕಾರ ಶನಿವಾರ ಘೋಷಿಸಿರುವ ಬಿಜಿನೆಸ್ ರಿಫಾರ್ಮ್ಸ್​ ಆಕ್ಷನ್ ಪ್ಲಾನ್ (ಬಿಎಆರ್​ಪಿ) ರ್ಯಾಂಕಿಂಗ್​ನಲ್ಲಿ ಕರ್ನಾಟಕ 17ನೇ ಸ್ಥಾನಕ್ಕೆ ಕುಸಿತ ಕಂಡಿರುವುದು ರಾಜ್ಯದ ಕೈಗಾರಿಕಾ ವಲಯದಲ್ಲಿ ಅಚ್ಚರಿ ಮೂಡಿಸಿದ್ದು, ಮುಖ್ಯವಾಗಿ ಸರ್ಕಾರಿ ಯಂತ್ರದ ನಿರುತ್ಸಾಹ ದಿಂದಲೇ ಈ ಸ್ಥಿತಿ ತಲುಪಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕದಲ್ಲಿರುವ ಈಗಿನ ಸೌಲಭ್ಯವೇ ಕೈಗಾರಿಕೆಗಳಿಗೆ ಸಾಕಷ್ಟಿದೆ. ಇದರಲ್ಲೇ ಉದ್ಯಮ ಮಾಡಬೇಕು ಎನ್ನುವ ಧೋರಣೆ ಅಧಿಕಾರಿ ವಲಯದಲ್ಲಿದೆ. ಕೃಷಿ ನಂತರ ದೇಶದಲ್ಲೇ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಎಂಎಸ್​ಎಂಇ ಬಗ್ಗೆ ಕನಿಷ್ಠ ಕಾಳಜಿ ತೋರಲಾ ಗುತ್ತದೆ ಎಂಬುದು ಕೈಗಾರಿಕಾ ವಲಯಗಳ ಪ್ರತಿನಿಧಿಗಳ ಆರೋಪ.
ಬೆಂಗಳೂರಿನಲ್ಲಿ ಸಕಾಲ ಹಿಂದೆ!:ವಿಶ್ವ ಬ್ಯಾಂಕ್ ರ್ಯಾಂಕಿಂಗ್​ನಲ್ಲಿ ಬೆಂಗಳೂರನ್ನು ಪರಿಗಣಿಸುತ್ತಿರುವ ಕಾರಣ, ಬಿಬಿಎಂಪಿ ವ್ಯಾಪ್ತಿಯಲ್ಲಿ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಜಾರಿ ಮಾಡುವ ಪ್ರಯತ್ನಗಳು ನಡೆದಿವೆ. ಸಕಾಲ ಯೋಜನೆ ಜಾರಿಯಲ್ಲಿ ಬೆಂಗಳೂರು 30ನೇ ರ್ಯಾಂಕ್​ನಲ್ಲಿದೆ. ಬೆಂಗಳೂರನ್ನು ಸರಿಪಡಿಸದೆ ರಾಜ್ಯದ ರ‍್ಯಾಂಕಿಂಗ್ ಉತ್ತಮಗೊಳ್ಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜಾರಿಯಿಂದಷ್ಟೆ ಲಾಭ:ರಾಜ್ಯ ಸರ್ಕಾರ ಕೈಗೊಂಡ ಭೂ ಸುಧಾರಣಾ ಕಾಯ್ದೆ ಕೈಗಾರಿಕೆಯಲ್ಲಿ ಸಾಕಷ್ಟು ವಿಶ್ವಾಸ ಮೂಡಿಸಿದೆ ಎಂದು ಅಖಿಲ ಭಾರತ ಉತ್ಪಾದಕರ ಸಂಘಟನೆಯ ಕರ್ನಾಟಕ ಘಟಕದ ಅಧ್ಯಕ್ಷ ಸಂಪತ್ ರಾಮನ್ ಹೇಳಿದ್ದಾರೆ. ಇದರ ಲಾಭ ಮುಂದಿನ ರ‍್ಯಾಂಕಿಂಗ್ ವೇಳೆಗೆ ದೊರಕಲಿದೆ ಎಂದಿದ್ದಾರೆ.
ಹೂಡಿಕೆಗೆ ಸಂಬಂಧವಿಲ್ಲ:ಈಸ್ ಆಫ್ ಡೂಯಿಂಗ್ ಬಿಸಿನೆಸ್ ಎಂದ ಕೂಡಲೆ ರಾಜ್ಯಗಳಲ್ಲಿ ಆಗಿರುವ ಹೂಡಿಕೆಯ ಲೆಕ್ಕ ತೋರಿಸುವುದು ಸರಿಯಲ್ಲ. ಇದು ಮುಖ್ಯವಾಗಿ ಹೊಸ ಕಂಪನಿಗಳ ಆರಂಭಕ್ಕೆ ಇರುವ ಅಡೆತಡೆ, ಎಂಎಸ್​ಎಂಇಗಳ ವಹಿವಾಟಿಗೆ ಉಂಟಾಗುವ ತೊಂದರೆಗಳನ್ನು ಒಳಗೊಂಡಿರುತ್ತದೆ.
ಪ್ರಮುಖ ಸಮಸ್ಯೆಗಳು:
ಸರ್ಕಾರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್:ಉದ್ಯಮಸ್ನೇಹಿ ರ್ಯಾಂಕ್​ನಲ್ಲಿ ಕರ್ನಾಟಕ ಹಿನ್ನಡೆ ಅನುಭವಿಸಿರುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆದಿದೆ. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂಬಂತೆ ಅನೈತಿಕವಾಗಿ ಅಧಿಕಾರಕ್ಕೆ ಬಂದಿರುವ ನೀವು ರಾಜ್ಯವನ್ನು ಎಷ್ಟು ಉದ್ಧಾರ ಮಾಡುತಿ್ತೕರಿ ಎಂಬುದು ಇದರಿಂದಲೇ ಸಾಬೀತಾಗುತ್ತಿದೆ ಎಂದು ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಅವರನ್ನು ಟೀಕಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರದ ಕಡೆಯಿಂದಲೂ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ. ಹಿಂದಿನ ವರ್ಷಗಳ ಆಧಾರದಲ್ಲಿ ಬಂದ ರ್ಯಾಂಕ್ ಇದಾಗಿದ್ದು, ಮುಂದಿನ ಸಾಲಿನಲ್ಲಿ ಕರ್ನಾಟಕ ಟಾಪ್ 10 ಪಟ್ಟಿಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿ, 2018-19ನೇ ಸಾಲಿನ ವರದಿ ಆಧಾರದ ಮೇಲೆ ಉದ್ಯಮಸ್ನೇಹಿ ರಾಜ್ಯಗಳ ಶ್ರೇಯಾಂಕದಲ್ಲಿ ಕರ್ನಾಟಕದ ಸ್ಥಾನ ಕುಗ್ಗಲು ಹಿಂದೆ ಆಡಳಿತ ನಡೆಸಿದವರ ವೈಫಲ್ಯದ ಫಲ ಎಂಬುದನ್ನು ಅಂಕಿ-ಅಂಶಗಳೇ ಸಾಕ್ಷೀಕರಿಸುತ್ತಿವೆ. ನೆರೆ, ಕರೋನಾ ಹಾವಳಿ ನಡುವೆಯೂ ರಾಜ್ಯದಲ್ಲಿ ಸರ್ಕಾರ, ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣಲು ಅವಕಾಶ ನೀಡಿಲ್ಲ ಎಂದಿದ್ದಾರೆ.
ಕರೊನಾ ಕಾರಣಕ್ಕೆ ಸಾಲದ ಮೇಲೆ ನೀಡಿದ್ದ ಮಾರಟೋರಿಯಂ ಆಗಸ್ಟ್​ಗೆ ಮುಕ್ತಾಯವಾಗಿದೆ. 2021ರ ಮಾರ್ಚ್​ವರೆಗೆ ವಿಸ್ತರಿಸುವಂತೆ ಮಾಡಿದ ಮನವಿಗೆ ಸ್ಪಂದನೆಯಿಲ್ಲ. ಹೀಗೇ ಮುಂದುವರಿದರೆ, ಸಾಲ ತೀರಿಸುವ ಸಲುವಾಗಿ ಅನೇಕ ಎಂಎಸ್​ಎಂಇಗಳು ಬಾಗಿಲು ಮುಚ್ಚುವುದರಲ್ಲಿ ಅನುಮಾನವಿಲ್ಲ.
| ಕೆ.ಬಿ. ಅರಸಪ್ಪಕಾಸಿಯಾ ಅಧ್ಯಕ್ಷ
https://www.vijayavani.net/russias-covid-19-vaccine-may-be-released-for-public-use-this-week/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
