ಬೆಂಗಳೂರು:ಬೈಕ್ ಸಂಚಾರಕ್ಕೆ ಅವಕಾಶ ಸಹಿತ ಸೋಮವಾರದಿಂದ ಕೆಲವು ಹಂತಗಳಲ್ಲಿ ಲಾಕ್​ಡೌನ್ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಮಧ್ಯಾಹ್ನ ಘೋಷಣೆ ಮಾಡಿದ್ದಕ್ಕೆ ಅಧಿಕಾರಿಗಳ ಒತ್ತಡ ಕಾರಣ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಕೊನೆಗೂ ಸಂಜೆಯ ವೇಳೆಗೆ ನಿರ್ಧಾರವನ್ನು ಹಿಂಪಡೆದಿದ್ದರಿಂದಾಗಿ ಕರೊನಾ ಸಮುದಾಯದಲ್ಲಿ ಹಬ್ಬಬಹುದೆಂಬ ಆತಂಕ ತಗ್ಗಿದೆ. ಇಷ್ಟು ದಿನ ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಲಾಕ್​ಡೌನ್ ನಿರ್ಬಂಧಗಳನ್ನು ಈ ಹಂತದಲ್ಲಿ ಸಡಿಲಿಸಿದರೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಹಾಗಾಗಿ ಹಂತಹಂತವಾಗಿ ಸಡಿಲ ಮಾಡೋಣ ಎಂಬ ಅಭಿಪ್ರಾಯ ಮುಖ್ಯಮಂತ್ರಿ ಹಾಗೂ ಸಂಪುಟದ ಕೆಲವು ಸಹೋದ್ಯೋಗಿಗಳದ್ದಾಗಿತ್ತು ಎನ್ನಲಾಗಿದೆ. ಆದರೆ, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯಬೇಕಾಗಿದೆ. ಇಲ್ಲದಿದ್ದರೆ ನೌಕರರಿಗೆ ಸಂಬಳ ನೀಡುವುದಕ್ಕೂ ಸಾಧ್ಯವಾಗುವುದಿಲ್ಲ, ಕೇಂದ್ರದ ಮಾರ್ಗಸೂಚಿ ಪ್ರಕಾರವೇ ಸಡಿಲ ಮಾಡೋಣವೆಂದು ಮುಖ್ಯ ಕಾರ್ಯದರ್ಶಿ ಹಾಗೂ ಕೆಲ ಅಧಿಕಾರಿಗಳು ಒತ್ತಡ ಹೇರಿದ್ದರು ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ.
ಸರ್ಕಾರದ ಬಿಗಿ ಕ್ರಮಗಳ ಹೊರತಾಗಿಯೂ ಜನರ ಸಂಚಾರವನ್ನು ಸಂಪೂರ್ಣವಾಗಿ ತಡೆಗಟ್ಟುವುದು ಸಾಧ್ಯವಾಗಿಲ್ಲ. ಹೀಗಾಗಿ ಬೈಕ್​ಗಳಲ್ಲಿ ಓಡಾಟಕ್ಕೆ ಅವಕಾಶ ನೀಡಿದರೆ ಪೊಲೀಸರಿಗೆ ನಿಯಂತ್ರಣ ತಪು್ಪತ್ತದೆ. ಲಾಕ್​ಡೌನ್​ನ ಮೊದಲ ನಾಲ್ಕು ದಿನ ಲಾಠಿ ಬೀಸಿದ್ದರಿಂದ ನಿಯಂತ್ರಣ ಇತ್ತು. ಆದರೆ ಆ ನಂತರ ನಿಯಂತ್ರಣ ತಪ್ಪಿತು. ಈಗ ಇನ್ನಷ್ಟು ಕಷ್ಟವಾಗುತ್ತದೆ. ನಮ್ಮಲ್ಲಿ ವೈದ್ಯಕೀಯ ಸೌಲಭ್ಯವೂ ಸೀಮಿತವಾಗಿದ್ದು, ಸಮುದಾಯದಲ್ಲಿ ಸೋಂಕು ಹರಡಿದರೆ ಗತಿ ಏನು ಎಂಬ ಆತಂಕ ತಜ್ಞರು ಹಾಗೂ ಸಚಿವರಿಂದ ಕೇಳಿ ಬಂದಿದೆ.
ಆದರೂ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಸಡಿಲ ಮಾಡಬಹುದೆಂದೇ ಅಧಿಕಾರಿಗಳು ವಾದಿಸಿದ್ದರು ಎನ್ನಲಾಗಿದೆ.
ಬೈಕ್​ಗಳ ಓಡಾಟಕ್ಕೆ ಅವಕಾಶ ನೀಡಿದರೆ ಮೆಕ್ಯಾನಿಕ್ ಶಾಪ್​ಗಳು, ಆಟೋಮೊಬೈಲ್ ಅಂಗಡಿ ತೆರೆಯಲು ಅವಕಾಶ ನೀಡಲಾಗುವುದೇ? ಕೈಗಾರಿಕೆ ತೆರೆದರೆ ಸುತ್ತಮುತ್ತ ಕ್ಯಾಂಟೀನ್ ನಡೆಸಲು ಅವಕಾಶ ನೀಡುವಿರಾ ಎಂಬ ಪ್ರಶ್ನೆಯೂ ಎದುರಾಗಿತ್ತು. ಒಮ್ಮೆಗೆ ಎಲ್ಲವನ್ನೂ ಸಡಿಲ ಮಾಡುವುದು ಬೇಡ, ಮೊದಲು ಐಟಿಬಿಟಿ ಕಂಪನಿಗಳು, ಆ ನಂತರ ನಾಲ್ಕು ದಿನ ಬಿಟ್ಟು ಸಣ್ಣ ಕೈಗಾರಿಕೆ, ಮತ್ತೆ ನಾಲ್ಕು ದಿನಗಳ ನಂತರ ನಿರ್ಮಾಣ ಕಾಮಗಾರಿ ಹೀಗೆ ಹಂತಹಂತವಾಗಿ ಮಾಡಿದರೆ ಮೇ 3 ಬಂದೇ ಬಿಡುತ್ತದೆ. ಸೋಂಕು ನಿಯಂತ್ರಣವೂ ಸಾಧ್ಯವಾಗುತ್ತದೆ. ಕೇರಳ ಹಾಗೂ ಒಡಿಶಾದಲ್ಲಿ ಲಾಕ್​ಡೌನ್ ಬಿಗಿ ಮಾಡಿದ್ದರಿಂದಲೇ ಸೋಂಕು ನಿಯಂತ್ರಣಕ್ಕೆ ಬಂದಿದೆ ಎನ್ನುವುದು ತಜ್ಞರ ಸಲಹೆಯಾಗಿತ್ತು.
ಆದರೆ ಆ ಮಾತು ಒಪ್ಪದ ಅಧಿಕಾರಿಗಳು ಒಡಿಶಾದಲ್ಲಿ ವಲಸೆ ಕಾರ್ವಿುಕರು ಇಲ್ಲ. ಹಾಗಾಗಿ ಸೋಂಕಿನ ಪ್ರಕರಣ ಕಡಿಮೆ ಎಂದು ಸಮಜಾಯಿಷಿ ನೀಡಿದ್ದಾರೆನ್ನಲಾಗಿದೆ. ಆದರೆ, ನಮ್ಮಲ್ಲೂ ಸೋಂಕು ಪ್ರಕರಣ ಹೆಚ್ಚುವುದಕ್ಕೆ ವಲಸೆ ಕಾರ್ವಿುಕರು ಕಾರಣವಲ್ಲ. ವಿದೇಶದಿಂದ ಬಂದವರು, ತಬ್ಲಿಘಿಗಳು ಹಾಗೂ ನಂಜನಗೂಡು ಕಾರ್ಖಾನೆ ಮೂರೇ ಸೋಂಕಿನ ಮೂಲಗಳು ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆಂದು ಹೇಳಲಾಗಿದೆ. ಒಟ್ಟಿನಲ್ಲಿ ಲಾಕ್​ಡೌನ್ ಸಡಿಲಿಕೆಯಿಂದ ಪೊಲೀಸರು ನಿಸ್ಸಹಾಯಕರಾಲಿದ್ದಾರೆ ಎಂದು ಆತಂಕಿತರಾಗಿದ್ದ ಗೃಹ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರ ನಿರ್ಧಾರ ವಾಪಸ್ ಪಡೆದಿದ್ದರಿಂದ ನಿರಾಳಗೊಂಡಿದ್ದಾರೆ.
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತದೆಯೇ ಕೇಂದ್ರ ಸರ್ಕಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 1 =
Remember me
