ಬೆಂಗಳೂರುಕಳೆದ 40-50 ವರ್ಷಗಳ ಹಿಂದಿನ ಶಾಲಾ ಕಟ್ಟಡಳಿಗೆ ನಕ್ಷೆ ತೋರಿಸಿ ಎಂದು ಕೇಳುವ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳಿಗೆ ಕನಿಷ್ಠ ಕಾಮನ್‌ಸೆನ್ಸ್ ಬೇಡವೇ? ಇವರೇನು ಐಎಎಸ್ ಮಾಡಿಕೊಂಡು ಬಂದಿದ್ದಾರೋ ಅಥವಾ ಬೋಗಸ್ ಪ್ರಮಾಣಪತ್ರ ತೆಗೆದುಕೊಂಡು ಕೆಲಸಕ್ಕೆ ಸೇರಿದ್ದಾರಾ? ಇಂತಹ ಅವೈಜ್ಞಾನಿಕ ನಿಯಮಗಳನ್ನು ಪ್ರಶ್ನಿಸದ ಶಿಕ್ಷಣ ಸಚಿವರು ಅತ್ಯಂತ ದುರ್ಬಲ ಮಂತ್ರಿಯಾಗಿದ್ದಾರೆಂದು ಖಾಸಗಿ ಶಾಲೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಖಾಸಗಿ ಶಾಲೆಗಳಿಗೆ ಅಗ್ನಿ ಅವಘಡ ಸುರಕ್ಷತೆ ಪ್ರಮಾಣಪತ್ರ, ಲೋಕೋಪಯೋಗಿ, ಭೂ ಪರಿವರ್ತನೆ, ಯೋಜನೆ ಮಂಜೂರಾತಿ ಮತ್ತು ಶುಲ್ಕ ನಿಗದಿ ತಂತ್ರಾಂಶ ಸೇರಿ ಪ್ರಮುಖವಾಗಿ ಐದು ವಿಷಯದಲ್ಲಿ ಸರ್ಕಾರಿ ಅಧಿಕಾರಿಗಳ ಕಿರುಕುಳ, ದೌರ್ಜನ್ಯ ಮತ್ತು ಭ್ರಷ್ಟಾಚಾರದಿಂದ ಸ್ವತಂತ್ರವಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ರದ್ದು ಮಾಡಿರುವ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಇಲಾಖೆ ನಿಯಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗದಂತೆ ಮಾಡಿ ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಕರಾಳ ಸ್ವಾತಂತ್ರ್ಯ ದಿನಾಚರಣೆ:
ನಗರದಲ್ಲಿ ಮಂಗಳವಾರ ಕ್ಯಾಮ್ಸ್, ಕುಸುಮ, ಎಬಿಇ ಸೇರಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು (ಕೆಪಿಎಂಟಿಸಿಸಿ) ಸುದ್ದಿಗೋಷ್ಟಿ ನಡೆಸಿ ಆ.15ರಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರಾಳ ಸ್ವಾತಂತ್ರ್ಯ ದಿನಾಚರಣೆ ನಡೆಸಲು ನಿರ್ಧರಿಸುವುದಾಗಿ ೋಷಿಸಿದವು.
2017-18ರ ನಂತರ ಆರಂಭವಾದ ಶಾಲೆಗಳಿಗೆ ಇದು ಅನ್ವಯಿಸುವುದಿಲ್ಲವೆಂದು ನ್ಯಾಯಾಲಯವು ಹೇಳಿದ್ದರೂ ಭೂ ಪರಿವರ್ತನೆ ಅಗತ್ಯವಿಲ್ಲದಿದ್ದರೂ ಬಿಬಿಎಂಪಿ/ನಗರ ಪಟ್ಟಣ ವ್ಯಾಪ್ತಿಯಲ್ಲಿ ಬರುವಂತಹ ಶಾಲೆಗಳಿಗೆ ಕಡ್ಡಾಯಗೊಳಿಸಿರುವುದು, ಶುಲ್ಕ ನಿಗದಿ ಅಧಿಕಾರವಿಲ್ಲದಿದ್ದರೂ ನ್ಯಾಯಾಲಯದ ತೀರ್ಪಿನ ಮೊದಲಿದ್ದ ನಿಯಮಗಳನ್ನೇ ಜಾರಿಗೊಳಿಸಿ ಯಾವುದೇ ಶಿಕ್ಷಣ ಸಂಸ್ಥೆಗಳು ತಾವು ತೆಗೆದುಕೊಳ್ಳುವ ಶುಲ್ಕವನ್ನು ಅಪ್‌ಲೋಡ್ ಮಾಡದಂತೆ ಮಾಡಿದ್ದಾರೆ. ಪ್ರತಿ ವರ್ಷ ಮಾನ್ಯತೆ, ನವೀಕರಣದ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ, ದಾಖಲೆಗಳ ನೆಪವೊಡ್ಡಿ ನವೀಕರಣ ತಿರಸ್ಕರಿಸಲಾಗುತ್ತಿದೆ. ಇದರಿಂದ ಅನಿವಾರ್ಯವಾಗಿ ಲಂಚ ಕೊಡುವ ಅನಿವಾರ್ಯತೆ ಸೃಷ್ಟಿಸಿದ್ದಾರೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ, ಶಶಿಕುಮಾರ್ ಆರೋಪ ಮಾಡಿದರು.
ವರ್ಗಾವಣೆಯಲ್ಲಿ ಲಂಚ ಆರೋಪ:
ಶಿಕ್ಷಣ ಸಚಿವರು ಮತ್ತು ಇಲಾಖೆ ಮೇಲಧಿಕಾರಿಗಳು ಡಿಡಿಪಿಐ ಮತ್ತು ಬಿಇಒಗಳ ವರ್ಗಾವಣೆ ನಡೆಸಿ 25ರಿಂದ 30 ಲಕ್ಷ ರೂ.ಗಳ ವಸೂಲಿ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಖರ್ಚು ಮಾಡಿರುವುದನ್ನು ವಸೂಲಿ ಮಾಡಲು ಖಾಸಗಿ ಶಾಲೆಗಳ ಮಾನ್ಯತೆ, ನವೀಕರಣದಲ್ಲಿ ಲಂಚ ನೀಡುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಿಕ್ಸಾದಿಂದ ಎಂ.ಎ.ಆನಂದ್, ಕುಸುಮಾ ಅಧ್ಯಕ್ಷ ಸತ್ಯಮೂರ್ತಿ, ಡಾ. ಅ್ತದ್ ಅಹಮದ್, ಪಿಯು ಕಾಲೇಜುಗಳ ಪ್ರತಿನಿಧಿ ಡಾ. ಸುಪ್ರೀತ್ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
