ಕಲಬುರಗಿ:ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಗೆ ಸಿಐಡಿಯ ಉತ್ತಮ ಅಧಿಕಾರಿಗಳನ್ನೇ ನೇಮಕ ಮಾಡಿದ್ದೇನೆ,ಪ್ರಕರಣದಲ್ಲಿ ಯಾರನ್ನೂ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಈಗಾಗಲೇ 47 ಜನರನ್ನು ಬಂಧಿಸಲಾಗಿದೆ.ಈ ಭಾಗದ ಕೆಲವು ಅಭ್ಯರ್ಥಿಗಳು ಓಎಂಆರ್ ಶೀಟ್​ ನನ್ನ ಗಮನಕ್ಕೆ ಬಂದ ಕೂಡಲೇ ಖುದ್ದಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದಿದ್ದಾರೆ.
ದೈಹಿಕ ಪರೀಕ್ಷೆ ಯಲ್ಲಿ ಅಕ್ರಮ ನಡೆದಿಲ್ಲ.ಸಂಪೂರ್ಣ ತನಿಖೆ ‌ಮುಗಿದ ಬಳಿಕವೇ ಪಿಎಸ್ ಐ ನೇಮಕಾತಿ ಮರು‌ಪರೀಕ್ಷೆ ನಡೆಸಲಾಗುವುದು ಎಂದರು.
ನಮ್ಮ ಉದ್ದೇಶ ನಾನು ಒಬ್ಬ ಹೋಮ್ ಮಿನಿಸ್ಟರ್ ಆದರೂ ನನ್ನ ಅಕ್ಕನ ಮಗಳಿಗೆ ಏನೂ ಸಹಾಯ ಮಾಡಿಲ್ಲ, ನಾನು ಪ್ರಾಮಾಣಿಕವಾಗಿ ಬದುಕಿದ್ದೇನೆ. ನಮ್ಮ ಸಂಬಂಧಿಕರಿಗೂ ಸಹಕಾರ ಮಾಡಿಲ್ಲ ಎಂದು ಹೇಳಿದರು.
ಈ ಹಿಂದೆ ಪಿಎಸ್ ಐ ನೇಮಕಾತಿ ಯಲ್ಲಿ ಅಕ್ರಮ ಆಗಿರಬಹುದು ಆದರೆ ಯಾರು ತನಿಖೆ ನಡೆಸಿಲ್ಲ ಕ್ರಮ ಕೈಗೊಂಡಿಲ್ಲ ನಾವು ಮಾತ್ರ ಸಂಪೂರ್ಣ ಅಕ್ರಮದ ತನಿಖೆ ಮಾಡುತ್ತಿದ್ದೇವೆ ಎಂದರು.
ವಿಶ್ವದ 3ನೇ ಎತ್ತರದ ಪರ್ವತ ಕಾಂಚನ ಜುಂಗಾ ಏರುವಾಗಲೇ ಪ್ರಾಣಬಿಟ್ಟ ಪರ್ವತಾರೋಹಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
