ಬೆಂಗಳೂರು:ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದೀಕ್ಷಾ ದಿನದ ಪ್ರಯುಕ್ತ ಒಕ್ಕಲಿಗ ಯುವ ಬ್ರಿಗೇಡ್ ‘ನಿರ್ಮಲ ಸಹಾಯ ಹಸ್ತ’ ಎಂಬ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು, ಬಡ ಮಕ್ಕಳಿಗೆ ಪಠ್ಯ ಮತ್ತು ಪಠ್ಯೇತರ ಪರಿಕರಗಳನ್ನು ವಿತರಣೆ ಮಾಡುತ್ತಿದೆ.
ಒಕ್ಕಲಿಗ ಯುವ ಬ್ರಿಗೇಡ್ ಒಂದು ಸೇವಾ ಸಂಸ್ಥೆಯಾಗಿದ್ದು, ಸುಮಾರು 23 ದೇಶಗಳ ಸಮುದಾಯದ ಮಕ್ಕಳ ಶಿಕ್ಷಣಾಭಿವೃದ್ಧಿಗೆ ಆರ್ಥಿಕ ಸಹಾಯ ಹಾಗೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದೆ.
ಪ್ರತಿವರ್ಷ ಆದಿಚುಂಚನಗಿರಿ ಜಗದ್ಗುರುಗಳ ದೀಕ್ಷಾ ದಿನದ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದು, ಈ ವರ್ಷವೂ ಕೂಡ ಆಯ್ದ ಶಾಲೆಗಳಿಗೆ ಅಗತ್ಯ ಸೌಲಭಗಳನ್ನು ಒದಗಿಸುವ ಹಾಗೂ ಶಾಲೆಯನ್ನು ದತ್ತು ಸ್ವೀಕಾರ ಮಾಡಲು ಬ್ರಿಗೇಡ್ ಮುಂದಾಗಿದೆ.
ಸೋಮವಾರ ಒಡೆಯರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 100 ವಿದ್ಯಾರ್ಥಿಗಳಿಗೆ ಊಟದ ತಟ್ಟೆ, ಲೋಟ ಮತ್ತಿತರ ಪರಿಕರಗಳನ್ನು ವಿತರಿಸಿರುವ ಒಕ್ಕಲಿಗ ಯುವ ಬ್ರಿಗೇಡ್, ಚಪ್ಪರದಹಳ್ಳಿ ಮತ್ತು ಗಂಗನಕುಪ್ಪೆ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಹಾಗೂ ಇನ್ನಿತರ ಅಧ್ಯಯನ
ಸಾಮಗ್ರಿಗಳನ್ನ ವಿತರಿಸಲಿದ್ದು, ಸರಗೂರು ಆದಿವಾಸಿಗಳ ಶಾಲೆ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಅಧ್ಯಯನ ಸಾಮಗ್ರಿಗಳನ್ನ ವಿತರಿಸುವುದಾಗಿ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
