
|ಶಿವಾನಂದ ತಗಡೂರು ಬೆಂಗಳೂರು
ಕೋವಿಡ್ ಸಂಕಷ್ಟ ಕಾಲಕ್ಕೆ ಮನ ಮಿಡಿದಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಇಲಾಖೆ, ಗ್ರಾಮಗಳಲ್ಲಿರುವ ಕೂಲಿ ಕಾರ್ವಿುಕರು ಮತ್ತು ಬಡವರಿಗೆ ಉಚಿತವಾಗಿ ಎರಡು ಹೊತ್ತು ಊಟ ನೀಡಲು ಮುಂದಾಗಿದೆ. ಈ ಯೋಜನೆಗೆ ‘ಒಲವಿನ ಬುತ್ತಿ’ ಎಂದು ನಾಮಕರಣ ಮಾಡಲು ಮುಂದಾಗಿದ್ದು, ಕರೊನಾ ಮುಗಿಯುವ ತನಕ ಮುಂದುವರಿಸಲು ನಿರ್ಧರಿಸಲಾಗಿದೆ. ಕನಿಷ್ಠ 3 ತಿಂಗಳು ಉಚಿತ ಊಟ ಯೋಜನೆಗಾಗಿ 150 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಕೇರಳ ರಾಜ್ಯದಲ್ಲಿ ಈಗಾಗಲೆ ಗ್ರಾಮಮಟ್ಟದಲ್ಲಿ ಎರಡು ಹೊತ್ತು ಊಟ ನೀಡಲಾಗುತ್ತಿದ್ದು, ಪ್ರತಿ ಊಟಕ್ಕೆ 20 ರೂ. ನಿಗದಿ ಮಾಡಲಾಗಿದೆ. 10 ರೂ. ಸರ್ಕಾರ ನೀಡಿದರೆ, ಇನ್ನುಳಿದ 10 ರೂ. ಫಲಾನುಭವಿ ನೀಡಬೇಕೆಂಬ ನಿಯಮವಿದೆ. ಹಲವು ಸಂಘ-ಸಂಸ್ಥೆಗಳು ಸಾಥ್ ನೀಡಿವೆ.
ರಾಜ್ಯದಲ್ಲಿ ಉಚಿತ: ರಾಜ್ಯದಲ್ಲೂ ಕೇರಳ ಮಾದರಿಯಲ್ಲಿಯೇ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿತ್ತು. ಪ್ರತಿ ಊಟಕ್ಕೆ 20 ರೂ. ನಿಗದಿ ಮಾಡಲಾಗಿದೆ. ಸರ್ಕಾರ ಪ್ರತಿ ಊಟಕ್ಕೆ 10 ರೂ. ನೀಡಲು ಒಪ್ಪಿದೆ. ಇನ್ನುಳಿದ 10 ರೂ.ಗಳನ್ನು ಫಲಾನುಭವಿಗಳ ಬದಲು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೇ ಭರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಯಾರೂ ಹಸಿವಿನಿಂದ ಸಾಯಬಾರದು ಎಂಬ ಹಿನ್ನೆಲೆಯಲ್ಲಿ ಉಚಿತವಾಗಿ ಊಟ ನೀಡಬೇಕೆನ್ನುವ ಉದ್ದೇಶ ಹೊಂದಲಾಗಿದೆ.
ಅನುಷ್ಠಾನ ಹೇಗೆ?: ಕೋವಿಡ್ ನಿರ್ವಹಣೆಗಾಗಿ ಈಗಾಗಲೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳು ರಚನೆಯಾಗಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ. ಈ ಯೋಜನೆಯನ್ನು ಗ್ರಾಪಂ ಉಸ್ತುವಾರಿಯಲ್ಲಿಯೇ ಅನುಷ್ಠಾನ ಮಾಡಲು ನಿರ್ಣಯಿಸಲಾಗಿದೆ. ಗ್ರಾಪಂಗಳಲ್ಲಿ ಎಷ್ಟು ಜನ ಕೂಲಿ ಕಾರ್ವಿುಕರು, ಬಡವರು ಇದ್ದಾರೆ ಎನ್ನುವ ಮಾಹಿತಿ ಇದೆ. ಜತೆಗೆ ಕೋವಿಡ್ ಸಂಧರ್ಭ ಎಷ್ಟು ಜನರಿಗೆ ನಿತ್ಯ ಊಟ ಬೇಕು ಎನ್ನುವುದನ್ನು ಪಟ್ಟಿ ಮಾಡಿ ಒಪ್ಪಿಗೆ ಪಡೆದು ಊಟ ಸರಬರಾಜು ಮಾಡಲು ನಿರ್ಧರಿಸಲಾಗಿದೆ.
ಸ್ವಯಂ ಸೇವಾ ಸಂಸ್ಥೆ ನೆರವು: ಗ್ರಾಮ ಮಟ್ಟದಲ್ಲಿ ಸೇವೆ ಸಲ್ಲಿಸಲು ಹಲವು ಸಂಸ್ಥೆಗಳು ಉತ್ಸುಕವಾಗಿವೆ. ಸ್ವಯಂ ಸೇವಾ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳಿಗೆ ಜವಾಬ್ದಾರಿ ನೀಡಿ ಯೋಜನೆ ಅನುಷ್ಠಾನಕ್ಕೆ ಯೋಜಿಸಲಾಗಿದೆ. ಎಲ್ಲಿ ಯಾವ ಸಂಸ್ಥೆಗಳು ಮುಂದೆ ಬರುವುದಿಲ್ಲವೋ ಅಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕವೇ ಅಡುಗೆ ಮಾಡಿಸಿ, ಎರಡು ಹೊತ್ತು ಊಟ ತಲುಪಿಸಲು ತೀರ್ವನಿಸಲಾಗಿದೆ. ಅಡುಗೆ ಮಾಡಿದ ಸ್ಥಳದಲ್ಲಿಯೇ ಊಟ ನೀಡಲು ಮುಂದಾದರೆ, ತುಂಬಾ ಜನಜಂಗುಳಿ ಆಗಬಹುದು ಎನ್ನುವ ಕಾರಣದಿಂದ ಹಲವು ಪಾಯಿಂಟ್​ಗಳನ್ನು ಮಾಡಿ ಅಲ್ಲಿಗೇ ಹೋಗಿ ವಿತರಿಸಲು ನಿರ್ಧರಿಸಲಾಗಿದೆ.
ಸಮಸ್ಯೆಯಾಗುವ ಕಡೆ ಸಮಿತಿ ರಚನೆ: ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿದ್ದು, ಎಲ್ಲೆಡೆ ಹೊಸ ಸದಸ್ಯರು ಆಯ್ಕೆಯಾಗಿ ಬಂದಿದ್ದು ಉತ್ಸಾಹದಲ್ಲಿದ್ದಾರೆ. ಕೋವಿಡ್ ವೇಳೆ ಅವರು ಇನ್ನೂ ಹೆಚ್ಚು ಕ್ರೀಯಾಶೀಲವಾಗಿ ಕೆಲಸ ಮಾಡಬಹುದು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜಿಸಿದೆ. ಅಷ್ಟಾಗಿಯೂ ಸಮಸ್ಯೆಯಾಗುವ ಕಡೆ ನಿಗಾ ಇಡಲು ಮೇಲುಸ್ತುವಾರಿ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ.
ಗ್ರಾಪಂಗಳಲ್ಲಿ ಕೇರ್ ಸೆಂಟರ್
ಬೆಂಗಳೂರು: ನಗರಗಳಿಂದ ವಲಸೆ ಬಂದ ಜನರಿಂದ ಗ್ರಾಮೀಣ ಭಾಗಕ್ಕೂ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಯೋನ್ಮುಖವಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದೆ. ಈಗಾಗಲೆ ಗ್ರಾಪಂ ಮಟ್ಟದಲ್ಲಿ ರಚನೆ ಮಾಡಲಾಗಿರುವ ಕೋವಿಡ್ ನಿರ್ವಹಣಾ ಸಮಿತಿಗಳೇ ಇದರ ಜವಬ್ದಾರಿ ನಿಭಾಯಿಸಲಿದ್ದು, ಹಾಸ್ಟೆಲ್ ಅಥವಾ ಸುಸಜ್ಜಿತ ಸರ್ಕಾರಿ ಕಟ್ಟಡಗಳಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಬೇಕು ಎಂದು ತಿಳಿಸಲಾಗಿದೆ. ಸ್ವಯಂ ಸೇವಾ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಗಳ ನೆರವು ಪಡೆಯಲು ಸೂಚಿಸಲಾಗಿದೆ. ಗ್ರಾಪಂ ಪಿಡಿಒ ಸೇರಿ ಎಲ್ಲ ಅಧಿಕಾರಿಗಳು, ಹಳ್ಳಿಗಳಲ್ಲಿಯೇ ಕೆಲಸ ಮಾಡುವ ಗ್ರಾಮ ಲೆಕ್ಕಿಗರು, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯ ಕರ್ತೆಯರು, ಬಿಲ್ ಕಲೆಕ್ಟರ್​ಗಳನ್ನು ಕೋವಿಡ್ ನಿರ್ವ ಹಣೆಗೆ ನಿಯೋಜನೆ ಮಾಡಿಕೊಂಡು ತಂಡವಾಗಿ ಕೆಲಸ ಮಾಡಬೇಕು ಎಂದು ಎಲ್ಲ ಗ್ರಾಪಂಗಳಿಗೆ ಸೂಚಿಸಲಾಗಿದೆ.
ಒಂದು ಗ್ರಾಮದಲ್ಲಿ 150 ಊಟ ನೀಡಬೇಕು ಎನ್ನುವುದು ಸದ್ಯದ ಚಿಂತನೆ. ಬೇಡಿಕೆ ಆದರಿಸಿ ಕ್ರಮ ಕೈಗೊಳ್ಳಲಾಗುವುದು. ಶೇ.75 ನೆರವು ಅಥವಾ ಪೂರ್ಣ ಪ್ರಮಾಣದಲ್ಲಿ ಉಚಿತವಾಗಿ ನೀಡಬೇಕೇ ಎನ್ನುವುದನ್ನು ಸರ್ಕಾರ ತೀರ್ವನಿಸಲಿದೆ.
| ಎಲ್.ಕೆ.ಅತೀಕ್ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
