ಬೆಂಗಳೂರು:ಕರೊನಾ ಹಿನ್ನೆಲೆಯಲ್ಲಿ ಕಳೆದ 5 ತಿಂಗಳಿಂದ ಸ್ಥಗಿತಗೊಂಡಿದ್ದ ವಿವಿಧ ಸಾಮಾಜಿಕ ಸುರಕ್ಷಾ ಯೋಜನೆಗಳಿಗೆ ರಾಜ್ಯ ಸರ್ಕಾರ 3,500 ಕೋಟಿ ರೂ. ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಲಕ್ಷಾಂತರ ಫಲಾನುಭವಿಗಳ ಕೈಗೆ ಹಣ ತಲುಪಲಿದೆ.
ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಗಳ 66,28,341 ಲಾನುಭವಿಗಳ ಹೆಸರಿನಲ್ಲಿ ಈ ಹಿಂದೆಯೇ ಬ್ಯಾಂಕ್ ಅಕೌಂಟ್ ತೆರೆದು, ಅವರ ಖಾತೆಗೆ ಪಿಂಚಣಿ ಹಣ ಜಮಾ ಮಾಡಲಾಗಿದೆ. ಬಾಕಿ ಇರುವ 1.30 ಲಕ್ಷ ಲಾನುಭವಿಗಳ ಬ್ಯಾಂಕ್ ಅಕೌಂಟ್ ತೆರೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಈ ಕೆಲಸ ಮುಗಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮುಂಜಾನೆ 4ಗಂಟೆಗೆ ಮನೆಯೊಳಗೆ ನುಗ್ಗಿದ…; ಮುಂದೆ ಆಗಿದ್ದೆಲ್ಲ ದುರಂತ
ಈ ಮಧ್ಯೆ, ಆಧಾರ್ ಲಿಂಕ್ ಮೂಲಕ ಬಯಲಿಗೆ ಬಂದ ವೃದ್ಧಾಪ್ಯ ವೇತನ ಗೋಲ್‌ಮಾಲ್ ಪ್ರಕರಣದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಲಾನುಭವಿಗಳ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಹಣ ಕಳುಹಿಸಿಕೊಡುವ ವ್ಯವಸ್ಥೆ ಜಾರಿಗೆ ತಂದಿರುವ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಬಿಎಸ್‌ವೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹಿರಿಯ ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ
ಬೆಂಗಳೂರಿನಲ್ಲಿ ಹೆಚ್ಚು: ನಾನಾ ಯೋಜನೆಯಲ್ಲಿ ಸುಮಾರು 3.50 ಲಕ್ಷ ಲಾನುಭವಿಗಳು ರಾಜಧಾನಿಯಲ್ಲಿದ್ದು, ಅತಿ ಹೆಚ್ಚು ಗೋಲ್‌ಮಾಲ್ ಪ್ರಕರಣಗಳು ಇಲ್ಲಿಯೇ ವರದಿಯಾಗಿದ್ದವು. ಪದೇಪದೆ ವಾಸ್ತವ್ಯ ಬದಲಾವಣೆ ಮಾಡುವ ಕಾರಣ ಯೋಜನೆಯಲ್ಲಿ ನಕಲಿ, ಅಸಲಿ ಪತ್ತೆ ಹಚ್ಚುವುದು ಸಮಸ್ಯೆಯಾಗಿತ್ತು. ಆಧಾರ್ ಲಿಂಕ್ ಮೂಲಕ ನಕಲಿ ಪ್ರಕರಣ ಬೆಳಕಿಗೆ ಬರುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಡೆದಿರುವ ಗೋಲ್‌ಮಾಲ್ ಪ್ರಕರಣದಲ್ಲಿ ಪೋಸ್ಟ್‌ಮ್ಯಾನ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸೇರಿ 9 ಜನರನ್ನು ಅಮಾನತು ಮಾಡಲಾಗಿದ್ದು, ತನಿಖೆ ಇನ್ನೂ ನಡೆಯುತ್ತಲೇ ಇದೆ ಎಂದು ತಿಳಿದುಬಂದಿದೆ.
50 ಕೋಟಿ ರೂಪಾಯಿ ಪಿಡಿಎಸ್ ಹಗರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + two =
Remember me
