| ರಮಾನಂದ ಶರ್ಮಾ
ನಿವೃತ್ತಿಯ ನಂತರ ನೌಕರರಿಗೆ ಆರ್ಥಿಕವಾಗಿ ಸಾಮಾಜಿಕ ಭದ್ರತೆ ಒದಗಿಸಲು ಉದ್ಯೋಗದಾತರು (ಸರ್ಕಾರಗಳು) ತಮ್ಮ ನೌಕರರಿಗೆ ಗ್ರಾಚುಯಿಟಿ (ಉಚಿತ ವೇತನ), ಎಕ್ಸ್​ಗ್ರೇಷಿಯಾ, ಪಾ›ವಿಡೆಂಟ್ ಫಂಡ್ (ಕ್ಷೇಮ ನಿಧಿ), ರಜಾ ನಗದೀಕರಣ (ಲೀವ್ ಎನ್​ಕ್ಯಾಷ್​ವೆುಂಟ್) ಮುಂತಾದ ಸವಲತ್ತು-ಸೌಲಭ್ಯಗಳನ್ನು ನೀಡುತ್ತವೆ.
ರಾಯಲ್ ಕಮಿಷನ್ ಆನ್ ಸಿವಿಲ್ ಎಸ್ಟಾಬ್ಲಿಶ್​ವೆುಂಟ್ ನಿವೃತ್ತರಿಗೆ ಅರ್ಥಿಕವಾಗಿ ಸಾಮಾಜಿಕ ಭದ್ರತೆ ನೀಡಲು 1881ರಲ್ಲಿಯೇ ಪಿಂಚಣಿ ವ್ಯವಸ್ಥೆಯನ್ನು ಆರಂಭಿಸಿತ್ತು. ಈ ವ್ಯವಸ್ಥೆ 1919 ಮತ್ತು 1935ರಲ್ಲಿ ಹಲವು ಮಾರ್ಪಾಡುಗಳನ್ನು ಹೊಂದಿತು.
ಈ ವ್ಯವಸ್ಥೆಯಲ್ಲಿ ನೌಕರರ ಮೂಲ ವೇತನದ ಶೇಕಡಾ 10 ಕಡಿತ ಮಾಡಿ, ಅದನ್ನು ಕ್ಷೇಮನಿಧಿಗೆ ಸೇರಿಸಲಾಗುತ್ತದೆ. ಅಲ್ಲದೆ, ಉದ್ಯೋಗದಾತರು ಇಷ್ಟೇ ಮೊತ್ತವನ್ನು ಕ್ಷೇಮನಿಧಿಗೆ ಜಮಾ ಮಾಡುತ್ತಾರೆ. ಇದನ್ನು ಪಿಂಚಣಿ ಫಂಡ್ ಎನ್ನಲಾಗುತ್ತದೆ. ನೌಕರರ ದೇಣಿಗೆಯು ಬಡ್ಡಿ ಸಹಿತ ಅವರಿಗೆ ನಿವೃತ್ತಿಯಾದಾಗ ದೊರಕುತ್ತಿದ್ದು, ಉದ್ಯೋಗದಾತರ ದೇಣಿಗೆ ಪಿಂಚಣಿ ಫಂಡ್ ಅಗಿ ಮುಂದೆ ನಿವೃತ್ತಿಯ ನಂತರ ನೌಕರರಿಗೆ ಪಿಂಚಣಿ ನೀಡಲು ಬಳಕೆಯಾಗುತ್ತದೆ. ನೌಕರರು ತಮ್ಮಕೊನೆಯ ಮೂಲ ವೇತನದ ಶೇಕಡಾ 50 ಮತ್ತು ಅದಕ್ಕೆ ಸರಿಯಾಗಿ ಕಾಲಕಾಲಕ್ಕೆ ನಿಗದಿಪಡಿಸುವ ತುಟ್ಟಿ ಭತ್ಯೆ ಸೇರಿ ಪಿಂಚಣಿ ಪಡೆಯುತ್ತಾರೆ. ಒಬ್ಬನೌಕರ ನಿವೃತ್ತಿಯಾದಾಗ ಆತನ ಮೂಲವೇತನಕ್ಕೆ ನೀಡುವ ತುಟ್ಟಿ ಭತ್ಯೆ ಕಾಲಕಾಲಕ್ಕೆ ಏರಿಳಿತವಾಗುತ್ತಿರುತ್ತದೆ. ಈ ಪಿಂಚಣಿ ನೌಕರರ ಸಂಬಳ ಪರಿಷ್ಕರಣೆಯಾದಾಗ ಉನ್ನತೀಕರಣ ಆಗುತ್ತದೆ. ನೌಕರ ಅಕಾಲಿಕ ಮರಣಕ್ಕೆ ತುತ್ತಾದರೆ, ಪಿಂಚಣಿದಾರನ ಮರಣದ ನಂತರ ಆತನ ಅವಲಂಬಿತರಿಗೆ ಕೆಲವು ಕಟ್ಟುಪಾಡುಗಳೊಂದಿಗೆ ಪಿಂಚಣಿಯ ಶೇಕಡಾ 30ರವರೆಗೂ ಕುಟುಂಬ ಪಿಂಚಣಿ ದೊರೆಯುತ್ತದೆ. ಇಂತಹ ಸೌಲಭ್ಯದ ಕಾರಣಕ್ಕಾಗಿಯೋ ಏನೋ ಬೇರೆ ವಲಯಗಳಿಗೆ ಹೋಲಿಸಿದರೆ ಸ್ವಲ್ಪ ಸಂಬಳ ಸೌಲಭ್ಯ ಕಡಿಮೆ ಇದ್ದರೂ ಜನರು ಸರ್ಕಾರಿ ನೌಕರಿ ಇಷ್ಟಪಡುತ್ತಾರೆ ಎನ್ನಬಹುದಾಗಿದೆ.
ಕೆಲವು ಇಲಾಖೆಗಳಲ್ಲಿ ಸಂಬಳದ ಬಿಲ್​ಗಿಂತ ಪಿಂಚಣಿ ಬಿಲ್ ಹೆಚ್ಚಾಗುತ್ತಿರುವುದನ್ನು ನೋಡಿ (ರೈಲ್ವೆ ಇಲಾಖೆಯಲ್ಲಿ ಪಿಂಚಣಿ 60,000 ಕೋಟಿ ರೂಪಾಯಿ ಮೀರಿದೆಯಂತೆ) ಮತ್ತು ದೇಶದ ಒಟ್ಟು ಆದಾಯದಲ್ಲಿ ಬಹುಪಾಲು (ಅಂದಾಜು ಶೇಕಡಾ 37) ನೌಕರರ ವೇತನ ಮತ್ತು ಪಿಂಚಣಿಗೆ ಹೋಗುವುದನ್ನು ನೋಡಿ ಸರ್ಕಾರ 2004ರಿಂದ ಈ ಪಿಂಚಣಿ ವ್ಯವಸ್ಥೆಯ ಬದಲಿಗೆ ಹೊಸ ಪಿಂಚಣಿ ವ್ಯವಸ್ಥೆಯನ್ನು (ಎನ್​ಪಿಎಸ್) ಜಾರಿಗೊಳಿಸಿತು. ಈ ಸ್ಕೀಮ್ ದೇಶದ ಖಜಾನೆಯ ಭಾರವನ್ನು ಇಳಿಸುವುದರೊಂದಿಗೆ ಹಲವು ಮಾರ್ಪಾಡುಗಳನ್ನು ಮಾಡಿದೆ. 2006ರ ಏಪ್ರಿಲ್ 1ರ ನಂತರ ಸರ್ಕಾರಿ ಹುದ್ದೆಗಳಿಗೆ ನೇಮಕವಾದವರೆಲ್ಲ ಈ ಹೊಸ ಪಿಂಚಣಿ ವ್ಯವಸ್ಥೆಗೆ ಕಡ್ಡಾಯವಾಗಿ ಒಳಪಡುತ್ತಾರೆ.
ಹೊಸ ವ್ಯವಸ್ಥೆಯಡಿಯಲ್ಲಿ ನೌಕರನ ಮೂಲ ವೇತನದಲ್ಲಿ ಶೇ. 10 ಕಡಿತವಾಗುತ್ತಿದ್ದು, ಸರ್ಕಾರ ನೀಡುವ ಶೇ. 14 ವಂತಿಗೆಯನ್ನು ಇದಕ್ಕೆ ಸೇರಿಸಿ ಪಿಂಚಣಿ ಫಂಡ್​ಗೆ ಜಮಾ ಮಾಡಲಾಗುತ್ತದೆ. ನಿವೃತ್ತಿ ಸಮಯದಲ್ಲಿ ನೌಕರನು ಈ ಎರಡೂ (10%+14%) ಕೊಡುಗೆಗಳನ್ನು ಪಡೆಯುತ್ತಿದ್ದು, ಇದು ಕೂಡ ಕೆಲವು ಕಟ್ಟುಪಾಡುಗಳಿಗೆ ಒಳಪಟ್ಟಿರುತ್ತದೆ. ಒಬ್ಬ ನೌಕರನ ಕೊಡುಗೆ 10 ಲಕ್ಷ ರೂಪಾಯಿ ಇದ್ದು, ಸರ್ಕಾರದ ಕೊಡುಗೆ 14 ಲಕ್ಷ ರೂಪಾಯಿ ಇದ್ದರೆ, ನೌಕರನು ನಿವೃತ್ತಿ ತಕ್ಷಣ ಈ ಮೊತ್ತದ ಶೇ. 60 ಹಣವನ್ನು ಪಡೆಯುತ್ತಾನೆ. ಇದಕ್ಕೆ ತೆರಿಗೆ ಬೇರೆ ನೀಡಬೇಕಾಗುತ್ತದೆ. ಬಾಕಿ ಉಳಿದ ಶೇಕಡಾ 40 ಅನ್ನು ಬದುಕಿರುವವರೆಗೆ ಪ್ರತಿ ತಿಂಗಳು ಪಡೆಯುತ್ತಾ ಹೋಗುತ್ತಾನೆ. ಇದಕ್ಕೆ ತುಟ್ಟಿಭತ್ಯೆಯನ್ನು ನೀಡುವುದಿಲ್ಲ. ನೌಕರನು ಅಕಾಲಿಕ ಮರಣಕ್ಕೆ ತುತ್ತಾದರೆ ಅತನಿಗೆ ಪೂರ್ಣ ಮೊತ್ತ ದೊರಕುವುದಿಲ್ಲ. ಸರ್ಕಾರದ ಕೊಡುಗೆಯಾದ ಶೇ. 14 ಕೂಡ ದೊರಕುವುದಿಲ್ಲ. ಅವರ ಅವಲಂಬಿತರಿಗೂ ಯಾವುದೇ ರೀತಿಯ ಹಣಕಾಸು ನೆರವು ದೊರಕುವುದಿಲ್ಲ. ಈ ಯೋಜನೆ ಅಡಿಯಲ್ಲಿ ಶೇ. 10 ಮತ್ತು ಶೇ. 14 ಈ ಎರಡೂ ಕೊಡುಗೆಗಳನ್ನು ಷೇರು ಮಾರುಕಟ್ಟೆಯ ಇಕ್ವಿಟಿ ಷೇರುಗಳಲ್ಲಿ ಮತ್ತು ಸರ್ಕಾರಿ ಬಾಂಡ್​ಗಳಲ್ಲಿ ಹೂಡಿಕೆ ಮಾಡಲಾಗುವುದು. ಈ ಹೂಡಿಕೆಯಲ್ಲಿ ಲಾಭವಾದರೆ ನೌಕರನಿಗೆ ಅದರ ಲಾಭ ದೊರಕುತ್ತದೆ. ಮಾರುಕಟ್ಟೆ ಬಿದ್ದು ನಷ್ಟವಾದರೆ ನೌಕರನಿಗೆ ಏನೂ ದೊರಕುವುದಿಲ್ಲ. ಹರ್ಷದ ಮೆಹ್ತಾನಂಥ ಒಂದು ಹಗರಣವು ಷೇರು ಮಾರುಕಟ್ಟೆಯನ್ನು ಹೇಗೆ ಅಲುಗಾಡಿಸುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಹಳೆಯ ಪಿಂಚಣಿ ಸ್ಕೀಮ್ಲ್ಲಿ ನೌಕರರಿಗೆ ಒಂದು ಗೊತ್ತಾದ ಮೊತ್ತ ಗ್ಯಾರಂಟಿಯಾಗಿ ದೊರಕುತ್ತಿತ್ತು. ಅಲ್ಲದೆ, ಅದಕ್ಕೆ ತುಟ್ಟಿಭತ್ಯೆಯಲ್ಲಿನ ಹೆಚ್ಚಳವೂ ಇರುತ್ತಿತ್ತು. ಅಂತೆಯೇ ಸ್ವಲ್ಪ ಕಷ್ಟಪಟ್ಟಾದರೂ ತಿಂಗಳ ಕೊನೆಯನ್ನು ಕಾಣಬಹುದಿತ್ತು ಎಂದು ನಿವೃತ್ತರು ಹೇಳುತ್ತಾರೆ. ಈ ಹೊಸ ಪಿಂಚಣಿ ಸ್ಕೀಮ್ಲ್ಲಿ ಎಲ್ಲವೂ ಅನಿಶ್ಚಿತತೆಯಲ್ಲಿದ್ದು, ಕುಟುಂಬ ನಿರ್ವಹಣೆ ಡೋಲಾಯಮಾನವಾಗಿರುತ್ತದೆ ಎಂಬ ತಕರಾರು ಕೇಳಿಬರುತ್ತಿದೆ.
ಕಾರ್ವಿುಕ ಸಂಘಟನೆಗಳ ಆಕ್ಷೇಪ:ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ, ನೌಕರರ ವೇತನ ಪರಿಷ್ಕರಣೆಯಾದಾಗ ಇದರ ಲಾಭ ಪಿಂಚಣಿದಾರರಿಗೂ ಅಗುತ್ತದೆ. ಹೊಸ ಯೋಜನೆಯಲ್ಲಿ ಈ ಅವಕಾಶ ಇರುವುದಿಲ್ಲ. ಅಲ್ಲದೆ, 60 ವರ್ಷ ಮೊದಲು ಪೂರ್ಣ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಅಂದಾಜು 35,000 ರೂ. ಮೂಲ ವೇತನ ಇದ್ದವರಿಗೆ 15 ವರ್ಷಗಳ ಸೇವೆಯ ನಂತರ ಹೊಸ ಸ್ಕೀಮ್ ಅಡಿಯಲ್ಲಿ 2,600 ರೂ. ಪಿಂಚಣಿ ದೊರಕಿದರೆ, ಹಳೆಯ ಸ್ಕೀಮ್ ಅಡಿಯಲ್ಲಿ 17,500 ರೂ. ಮತ್ತು ಅದಕ್ಕೆ ತುಟ್ಟಿಭತ್ಯೆ ಬೇರೆ. ಸಂಪೂರ್ಣ ಸೇವಾವಧಿ ಪೂರ್ಣಗೊಳಿಸಿ ನಿವೃತ್ತಿಯಾದರೂ, ಅಕಾಲಿಕ ಮರಣ ಹೊಂದಿದರೂ ಕುಟುಂಬ ಅವಲಂಬಿತರಿಗೆ ಸಿಗುವ ಪಿಂಚಣಿ ಮೊತ್ತ ತೀರಾ ಕಡಿಮೆಯಾಗಿದ್ದು, ಕಾರ್ವಿುಕ ಸಂಘಗಳು ಈ ಹೊಸ ಸ್ಕೀಂ ಅನ್ನು ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂದು ಜರಿಯುತ್ತಿವೆ. ಒಂದು ಕಡೆ ಪಿಂಚಣಿಯು ಹಣದುಬ್ಬರಕ್ಕೆ ಸ್ಪಂದಿಸುತ್ತಿಲ್ಲ, ಪಿಂಚಣಿ ಉನ್ನತೀಕರಣವಾಗುತ್ತಿಲ್ಲ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆ ದೊರಕುವ ಪಿಂಚಣಿಯೂ ಕಡಿಮೆಯಾಗುತ್ತಿದೆ ಎನ್ನುವ ಹತಾಶೆಯ ಮಾತು ಕೇಳಿಬರುತ್ತಿದೆ.
ಆಶಾಭಾವನೆ:ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಪಿಂಚಣಿ ಸ್ಕೀಮ್ೆ ಮರಳುವುದನ್ನು ಪರೋಕ್ಷವಾಗಿ ತಳ್ಳಿ ಹಾಕಿದ್ದಾರೆ. ದೇಶದ ಅರ್ಥಿಕತೆ ಮತ್ತು ಮುಂದಿನ ಯುವಜನಾಂಗವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಹಳೆಯ ಪಿಂಚಣಿ ಸ್ಕೀಮ್ ಮುಂದುವರಿಸುವುದು ಕಷ್ಟಸಾಧ್ಯ ಎನ್ನುವ ಆಭಿಪ್ರಾಯ ವ್ಯಕ್ತ ಮಾಡಿದ್ದಾರೆ. ಆದರೆ, ಹಣಕಾಸು ಸಚಿವರು ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಉದ್ಯೋಗಿಗಳ ಹಿತದೃಷ್ಟಿ ಮತ್ತು ಸರ್ಕಾರದ ಹಣಕಾಸು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪಿಂಚಣಿ ವ್ಯವಸ್ಥೆಯನ್ನು ಪುನರ್ ವಿಮಶಿಸುವಂತೆ ನಿರ್ದೇಶಿಸಿದ್ದಾರೆ. ಹಳೆಯ ಪಿಂಚಣಿ ಸ್ಕೀಮ್ ಪೂರ್ಣವಾಗಿ ಮರಳದಿದ್ದರೂ, ಹೊಸ ಸ್ಕೀಮ್ ಅನ್ನು ಸರ್ಕಾರ ಅಕರ್ಷಕ ಮಾಡಬಹುದು ಎನ್ನುವ ಆಶಾಭಾವನೆ ನಿವೃತ್ತರಲ್ಲಿ ಕಾಣುತ್ತಿದೆ. ಇದು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವಷ್ಟರ ಮಟ್ಟಿಗೆ ಗಂಭೀರ ಸ್ವರೂಪ ಪಡೆದಿದೆ. ರಾಜಸ್ತಾನ, ಛತ್ತೀಸ್​ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳು ಹೊಸ ಸ್ಕೀಂ ರದ್ದುಗೊಳಿಸಿ ಹಳೆಯ ಸ್ಕೀಮ್ೆ ಮರಳಿವೆ.
ಕೆಲ ರಾಜ್ಯಗಳಲ್ಲಿ ವಾಪಸಾತಿ:ಹಿಮಾಚಲ ಪ್ರದೇಶ, ರಾಜಸ್ತಾನ, ಛತ್ತೀಸ್​ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಕೆಲವು ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳು ಒಪಿಎಸ್​ಗೆ ಮರಳಲು ನಿರ್ಧರಿಸಿದ್ದರೆ, ಇನ್ನೂ ಕೆಲವು ಈ ನಿಟ್ಟಿನಲ್ಲಿ ಪರಿಗಣಿಸುತ್ತಿವೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿಯೂ ಒಪಿಎಸ್ ಜಾರಿಗೊಳಿಸುವುದಾಗಿ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದೆ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ರಾಜ್ಯದಲ್ಲೂ ಒಪಿಎಸ್ ಜಾರಿಯಾಗುವ ನಿರೀಕ್ಷೆ ಇದೆ.
31.04 ಲಕ್ಷ ಕೋಟಿ ರೂ. ಬೇಕು:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಕ್ಟೋಬರ್ 2022ರ ಇಕೊರ್ಯಾಪ್ ವರದಿ ಪ್ರಕಾರ, ಎಲ್ಲಾ ರಾಜ್ಯಗಳು ಹಳೆಯ ಯೋಜನೆಗೆ ಮರಳಿದರೆ ಒಟ್ಟು ಪಿಂಚಣಿ ಹೊಣೆಗಾರಿಕೆಗಳ ಪ್ರಸ್ತುತ ಮೌಲ್ಯವು ಅಂದಾಜು 31.04 ಲಕ್ಷ ಕೋಟಿ ರೂ. ಆಗಲಿದೆ. ಒಪಿಎಸ್​ಗೆ ಮರಳಿರುವ ಛತ್ತೀಸ್​ಗಢ, ಜಾರ್ಖಂಡ್ ಮತ್ತು ರಾಜಸ್ಥಾನದ ಈ ಮೂರು ರಾಜ್ಯಗಳಿಗೆ ಒಟ್ಟು ಪಿಂಚಣಿ ಹೊಣೆಗಾರಿಕೆಯು ಅಂದಾಜು 3 ಲಕ್ಷ ಕೋಟಿ ರೂ. ಆಗುತ್ತದೆ.
(ಲೇಖಕರು ನಿವೃತ್ತ ಬ್ಯಾಂಕರ್)
ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + five =
Remember me
