ಈಗ ಎಲೆಕ್ಷನ್ ಬಂದರೆ ಹಣದ ಹರಿವು ಸಿಕ್ಕಾಪಟ್ಟೆ ಜಾಸ್ತಿಯಾಗುತ್ತದೆ. ಪ್ರತಿಯೊಂದಕ್ಕೂ ಪಕ್ಷದ ಮತ್ತು ಅಭ್ಯರ್ಥಿಯ ಹಣ ನೀರಿನಂತೆ ಖರ್ಚಾಗುತ್ತದೆ. ಆದರೆ ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ. ರಾಜಕಾರಣಿಗಳು ಅತಿ ಕಡಿಮೆ ಖರ್ಚಿನಲ್ಲಿ ಚುನಾವಣೆ ಮುಗಿಸಿಕೊಳ್ಳುತ್ತಿದ್ದರು. ಈ ಬಗ್ಗೆ ನಾಡಿನ ಹಿರಿಯ ರಾಜಕಾರಣಿ, ಗುಳೇದಗುಡ್ಡದ ಮಾಜಿ ಶಾಸಕ,  ಹಾಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ನೆನಪಿನ ಸುರುಳಿ ಬಿಚ್ಚಿಟ್ಟಿದ್ದಾರೆ.
‘‘ಚುನಾವಣೆ ಗೆಲ್ಲಬೇಕಿದ್ದರೆ ದುಡ್ಡು ಬೇಕೇ ಬೇಕು ಎನ್ನುವ ವಾತಾವರಣ ನಮ್ಮ ಕಾಲದಲ್ಲಿ ಇರಲೇ ಇಲ್ಲ. ಸ್ಪರ್ಧಾಳು ಒಳ್ಳೆಯವರು ಅಂತ ಗೊತ್ತಾದರೆ ಜನರೇ ದುಡ್ಡು ಕೊಟ್ಟು ಗೆಲ್ಲಿಸುತ್ತಿದ್ದರು. 1985ರಲ್ಲಿ ರಾಜ್ಯದಲ್ಲಿ ಜನತಾ ಪಕ್ಷದ ಅಲೆ ಇತ್ತು. ಆಗ ನನಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತು. ಜನರು ಸಂಗ್ರಹಿಸಿ ಕೊಟ್ಟ ದುಡ್ಡಿನಲ್ಲಿಯೇ ನಾನು ಚುನಾವಣೆ ಎದುರಿಸಿ ಗೆಲುವು ಕಂಡಿದ್ದೆ. ಕಾಂಗ್ರೆಸ್ ಟಿಕೆಟ್ ನನಗೆ ಸಿಕ್ಕ ಸುದ್ದಿ ತಿಳಿದು ನನ್ನ ಹುಟ್ಟೂರಾದ ಸೂಳೆಭಾವಿ ಗ್ರಾಮದ ಹಿರಿಯರು ಸಭೆ ಸೇರಿ 97 ಸಾವಿರ ರೂ. ಸಂಗ್ರಹಿಸಿದ್ದರು. ಪಕ್ಕದ ಕಮತಗಿ ಜನರು 2800 ರೂ. ಸಂಗ್ರಹಿಸಿ ಕೊಡಲು ಬಂದಾಗ ಆ ಹಣವನ್ನು ನಿಮ್ಮೂರಿನಲ್ಲಿ ಚುನಾವಣೆ ಖರ್ಚಿಗೆ ಬಳಸಿ ಅಂತ ನಾನೇ ಸೂಚಿಸಿದ್ದೆ.
ನನ್ನ ಸ್ನೇಹಿತರು 30 ಸಾವಿರ ರೂ. ಕೊಟ್ಟಿದ್ದರು. ವೀರೇಂದ್ರ ಪಾಟೀಲರು ವೈಯಕ್ತಿಕವಾಗಿ 25 ಸಾವಿರ ರೂ. ಕೊಟ್ಟಿದ್ದರು. 10 ಸಾವಿರ ರೂ. ಪಾರ್ಟಿ ಫಂಡ್ ಬಂದಿತ್ತು. ಇದೇ ಹಣದಲ್ಲಿ ಚುನಾವಣೆ ಮುಗಿದು ಕೊನೆಗೆ ನನ್ನ ಜೇಬಿನಲ್ಲಿ 35 ಸಾವಿರ ರೂ. ಉಳಿದಿತ್ತು! 2004ರಲ್ಲಿ ಎದುರಿಸಿದ ನನ್ನ ಕೊನೆಯ ಚುನಾವಣೆ ಹೊತ್ತಿಗಾಗಲೇ ರಾಜಕೀಯದಲ್ಲಿ ದುಡ್ಡಿನ ಹರಿವು ವಿಪರೀತ ಜಾಸ್ತಿಯಾಗಿತ್ತು. ಸರ್ಕಾರ ಬೆಂಗಳೂರಿನಲ್ಲಿ ಕೊಟ್ಟಿದ್ದ ಶಾಸಕರ ನಿವೇಶನವನ್ನು ನಾನು ಎಲೆಕ್ಷನ್‌ಗೋಸ್ಕರ ಮಾರಾಟ ಮಾಡಿದೆ. ಆ ಹಣದಲ್ಲಿ ಚುನಾವಣೆ ಎದುರಿಸಿ ಸೋಲು ಅನುಭವಿಸಿದೆ. ಈಗಂತೂ ವಾತಾವರಣ ಇನ್ನೂ ಹದಗೆಟ್ಟಿದೆ. ನನಗೆ ಈಗ ಚುನಾವಣೆ ಎದುರಿಸಲು ಆರ್ಥಿಕ ಶಕ್ತಿ ಇಲ್ಲ. ಆದ್ದರಿಂದ ನಾನು ಟಿಕೆಟ್‌ಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ!’’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + fifteen =
Remember me
