ವಿಜಯನಗರ:ಹಳೆಯ ವಿದ್ಯಾರ್ಥಿಯೊಬ್ಬನ ದುರ್ವರ್ತನೆಗೆ ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರುವ ಶ್ರೀಮತಿ ಕಟ್ಟಾ ಕೃಷ್ಣ ವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.
ವಿದ್ಯಾರ್ಥಿಗಳ ಮಧ್ಯೆ ಬಂದು, ಮದ್ಯ ಮಿಶ್ರಿತ ಜ್ಯೂಸ್ ಸೇವಿಸುತ್ತಾನೆ. ಇಷ್ಟೇ ಅಲ್ಲದೆ, ಶಾಲೆಯಲ್ಲೇ ಗಾಂಜಾ ಹೊಡೆಯುತ್ತಾ ನನಗೂ ಪಾಠ ಮಾಡಿ ಅಂತಾ ಶಿಕ್ಷಕರನ್ನು ಕಾಡುತ್ತಿದ್ದಾನೆ.
ಆರೋಪಿಯನ್ನು ರಾಮು ಅಲಿಯಾಸ್ ಹೆಗ್ಗಣ ಎಂದು ಗುರುತಿಸಲಾಗಿದೆ. ಈತ ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾನೆ. ಗಾಂಜಾ, ಅಫೀಮ್ ಸೇವನೆ ಮಾಡುವ ಈತ ತರಗತಿ ನಡೆಯುವಾಗ ದಿಢೀರನೇ ಒಳಗಡೆ ನುಗ್ಗುತ್ತಾನೆ. ವಿದ್ಯಾರ್ಥಿಗಳ ಮಧ್ಯೆ ಬಂದು ಕುಳಿತುಕೊಳ್ಳುತ್ತಾನೆ. ಬಳಿಕ ಜ್ಯೂಸ್ ಒಳಗೆ ಮದ್ಯ ಹಾಕಿಕೊಂಡು ಕುಡಿಯುತ್ತಾನೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಾನು ಜ್ಯೂಸ್ ಕುಡಿಯುತ್ತಿದ್ದೇನೆ ಎಂದು ಹೇಳುತ್ತಾನೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಬೆಳಗಿದ ಪೂರ್ಣಿಮಾ ಕಾಂಗ್ರೆಸ್‌ನತ್ತ ಪಯಣ? ಕಮಲ ಬಿಟ್ಟು ಕೈ ಹಿಡಿಯಲು ಶಾಸಕಿ ಸಜ್ಜು!
1 ರಿಂದ 10 ತರಗತಿಯವರೆಗೆ 300 ಮಕ್ಕಳಿರುವ ಶಾಲೆಯಲ್ಲಿ ಈತ ನಿತ್ಯವೂ ಕಿರಿಕ್ ಮಾಡುತ್ತಿದ್ದಾನೆ. ಹೊಸಪೇಟೆಯ ಈ ಶಾಲೆಯಲ್ಲಿ ಭದ್ರತೆ ಇಲ್ಲದಿರುವುದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗುತ್ತಿದೆ. ಯಾರೂ ಇಲ್ಲದಾಗ ಶಾಲೆಯ ಆವರಣದಲ್ಲೂ ಕುಡಿಯುತ್ತಾನೆ. ಶಾಲೆ ಇದ್ದಾಗಲೂ ತರಗತಿಗಳಿಗೆ ನುಗ್ಗಿ ಪಾಠ ಮಾಡುವ ಮೇಷ್ಟ್ರುಗಳಿಗೂ ಅವಾಜ್​ ಹಾಕಿ ಕಾಟ ಕೊಡುತ್ತಾನೆ.‘ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಿಲ್ಲ ಎಂದು ಸಿಬ್ಬಂದಿ ಹೇಳ್ತಿದ್ದಾರೆ. ಪೊಲೀಸರಿಗೂ ಈತ ತಲೆಬ್ಯಾನಿ ಆಗಿದ್ದಾನಂತೆ. ಒಟ್ಟಾರೆ ಹಳೆಯ ವಿದ್ಯಾರ್ಥಿಯ ಕಿರಿಕ್​ಗೆ ಶಾಲೆಯ ಎಲ್ಲರು ಹೈರಾಗಿದ್ದಾರೆ.(ದಿಗ್ವಿಜಯ ನ್ಯೂಸ್​)
ಆ ಕ್ಷಣ ಅಂಕಣ… ತ್ರಿಕೋನಪ್ರೇಮದ ದುರಂತ

ಧರ್ಮದರ್ಶನ ಅಂಕಣ | ಮನ-ಮನೆಗೆ ಚೈತನ್ಯಶಕ್ತಿಯಾಗುವ ಉದ್ಯಾನ…

ಕಗ್ಗದ ಬೆಳಕು | ಬದುಕು ಬಂದಂತೆ ಎದುರುಗೊಂಡರೆ ಹಗುರ ಬಾಳು ಸಾಧ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
