ಬೆಂಗಳೂರು:ವಿವಿಧ ವಾಹನಗಳ ಸಂಘಗಳ ಕೋರಿಕೆಯಂತೆ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂಬ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಹಿಂದಿನ ರೀತಿಯಲ್ಲೇ ತೆರಿಗೆ ವ್ಯವಸ್ಥೆ ಮುಂದುವರಿಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಶನಿವಾರ ನಡೆದ ಬಳಿಕ ಸುದ್ದಿಗಾರರೊಂದಿಗೆ ರಾಮಲಿಂಗರೆಡ್ಡಿ ಮಾತನಾಡಿದರು.
ವಿವಿಧ ಶ್ರೇಣಿಯ ವಾಹನಗಳ ತೆರಿಗೆ ಪರಿಷ್ಕರಣೆಯಿಂದ ಹೊರೆಯಾಗುತ್ತದೆ ಎಂದು ಸಂಘಗಳು ವಿನಂತಿಸಿ, ವಸ್ತುಸ್ಥಿತಿ ವಿವರಿಸಿದ್ದವು. ವಾಹನಗಳಿಗೆ ಐದರಿಂದ 15 ಲಕ್ಷ ರೂ.ವರೆಗೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. ಹಳದಿ ಲಕವುಳ್ಳ ವಾಹನಗಳ ಮಾಲೀಕರು ಸಾಲ ಪಡೆಯುವುದು ಅಥವಾ ಹಳೇ ವಾಹನಗಳನ್ನು ಖರೀದಿಸುವುದು ಸಾಮಾನ್ಯ.
ರಾಜ್ಯದಲ್ಲಿ ಹೆಚ್ಚಿನ ತೆರಿಗೆ ಹೊರೆಯಿದೆ ಎಂದು ಬೇರೆ ಜೀವಿತಾವಧಿ ತೆರಿಗೆ ಕಡಿಮೆಯಿರುವ ರಾಜ್ಯಗಳಲ್ಲಿ ಖರೀದಿಸಿ ನೋಂದಣಿ ಮಾಡಿಕೊಂಡು ಇಲ್ಲಿ ಓಡಿಸುತ್ತಾರೆ. ಇದರಿಂದಾಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಕೈತಪ್ಪಿ ಹೋಗುತ್ತದೆ ಎಂದು ಸಿಎಂಗೆ ವಿವರಿಸಿದ್ದು, ಹಿಂದಿನ ತೆರಿಗೆ ಪದ್ಧತಿಯೇ ಮುಂದುವರಿಸಲು ಸಮ್ಮತಿಸಿದ್ದಾರೆ ಎಂದು ರಾಮಲಿಂಗರೆಡ್ಡಿ ತಿಳಿಸಿದರು.
ಶಕ್ತಿ ಯೋಜನೆಯಡಿ ಈವರೆಗೆ 80 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಯೋಜನೆಗೆ ಎಲ್ಲೆಡೆ ಮೆಚ್ಚುಗೆ ಬಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ನಾಲ್ಕು ವರ್ಷಗಳಿಂದ ಹೊಸ ಬಸ್‌ಗಳು ಖರೀದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಐದೂವರೆ ಸಾವಿರ ಹೊಸ ಬಸ್‌ಗಳನ್ನು ಶೀಘ್ರವೇ ಖರೀದಿಸಲು ಸಿಎಂ ಸಮ್ಮತಿಸಿದ್ದಾರೆ.
ಡೀಸೆಲ್, ಎಲೆಕ್ಟ್ರಿಕ್, ಸ್ಲೀಪರ್ ಇತ್ಯಾದಿ ಬಸ್‌ಗಳಿರಲಿವೆ. ಇದಕ್ಕಾಗಿ ಎರಡು ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಮೈಸೂರು ಸಾರಿಗೆ ವಿಭಾಗವನ್ನು ವಿಭಜಿಸಿ ಎರಡು ವಿಭಾಗಗಳನ್ನಾಗಿ ಮಾಡಲು ಸೂಚಿಸಿದ್ದು, ಎಂಟು ಸಾವಿರ ಹುದ್ದೆಗಳ ಭರ್ತಿಗೂ ಕ್ರಮವಹಿಸಲಾಗುತ್ತಿದೆ ಎಂದು ರಾಮಲಿಂಗರೆಡ್ಡಿ ವಿವರಿಸಿದರು.
ಮಳೆ ವೈಲ್ಯದಿಂದ ಜಲ ವಿದ್ಯುದಾಗರಗಳಲ್ಲಿ ಜಲ ಸಂಗ್ರಹ ಕುಸಿದಿದೆ. ಬೇರೆ ಮೂಲದ ವಿದ್ಯುತ್ ಉತ್ಪಾದನೆಯಲ್ಲಿ ಏರುಪೇರಾಗುತ್ತಿದ್ದರೆ, ಬೇಡಿಕೆ ಹೆಚ್ಚಾಗುತ್ತಿದೆ. ಉತ್ಪಾದನೆ ಹಾಗೂ ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಸ್ವಲ್ಪಮಟ್ಟಿಗೆ ಲೋಡ್‌ಶೆಡ್ಡಿಂಗ್ ಮಾಡುತ್ತಿರುವುದು ನಿಜವೆಂದು ರಾಮಲಿಂಗರೆಡ್ಡಿ ಹೇಳಿದರು.
ಮಳೆ ಚೆನ್ನಾಗಿ ಬಂದರೆ ಅಥವಾ ಬೇರೆ ರಾಜ್ಯಗಳಿಂದ ವಿದ್ಯುತ್ ಲಭಿಸಿದರೆ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಸಿಎಂ ಸೂಚನೆಯಂತೆ ಇಂಧನ ಮಂತ್ರಿ ಕೆ.ಜೆ.ಜಾರ್ಜ್ ಪ್ರಯತ್ನ ಮುಂದುವರಿಸಿದ್ದಾರೆ ಎಂದರು.
ಕಮಿಷನ್ ಕಲೆಕ್ಷನ್‌ಗೆ ವಿದ್ಯುತ್ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಆದರೆ ಜಲಾಶಯಗಳಲ್ಲಿ ನೀರಿಲ್ಲ, ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆಯಲ್ಲ ಎಂದು ರಾಮಲಿಂಗರೆಡ್ಡಿ ಉತ್ತರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
