| ಕೀರ್ತಿನಾರಾಯಣ ಸಿ. ಬೆಂಗಳೂರುಹದಿನೈದು ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರಗಳ ಸ್ಥಾಪನೆ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರಾಥಮಿಕವಾಗಿ 3 ಕಡೆ ಗುಜರಿ ಕೇಂದ್ರಗಳ ಸ್ಥಾಪಿಸಲು 3 ಕಂಪನಿಗಳು ಮುಂದೆ ಬಂದಿವೆ. ಇದರಲ್ಲಿ ನಿಯಮಾನುಸಾರ ಆಯ್ಕೆಯಾಗಿರುವ ಎರಡು ಕಂಪನಿಗಳ ಜತೆಗಿನ ಮಾತುಕತೆ ಅಂತಿಮಗೊಂಡಿದ್ದು, ಎರಡ್ಮೂರು ದಿನದಲ್ಲಿ ಸರ್ಕಾರ ಅನುಮತಿ ನೀಡಲಿದೆ.
ರಾಜ್ಯದಲ್ಲಿ 14.3 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿ ಯಲ್ಲಿವೆ ಎಂದು ಅಂದಾಜಿ ಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಗುಜರಿ ಕೇಂದ್ರ ಸ್ಥಾಪನೆಗೆ ಮಹೀಂದ್ರಾ ಕಂಪನಿ, ತುಮಕೂರಿನ ಕೊರಟಗೆರೆ ಬಳಿ ಸುಹಾಸ್ ಆಟೋ ಮೊಬೈಲ್ಸ್ ಕಂಪನಿ ಹಾಗೂ ಕೊಪ್ಪಳ ಬಳಿ ಗುಜರಿ ಕೇಂದ್ರ ತೆರೆಯಲು ಲಕ್ಷ್ಮೀ ಮಿಲ್ಸ್ ಆಸಕ್ತಿ ತೋರಿವೆ. ಮಹಿಂದ್ರಾ ಕಂಪನಿ ಹಾಗೂ ಸುಹಾಸ್ ಆಟೋ ಮೊಬೈಲ್ಸ್ ಜತೆಗೆ ಮಾತುಕತೆ ಪೂರ್ಣಗೊಂಡಿದ್ದು, ಅಧಿಕೃತ ಒಪ್ಪಂದ ಮಾತ್ರ ಬಾಕಿ ಉಳಿದಿದೆ.
ಮಹಿಂದ್ರಾ ಕಂಪನಿ ಪೂರ್ಣ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಒಪ್ಪಿದೆ. ಕೇಂದ್ರಗಳ ಸ್ಥಾಪನೆಗೆ ಮುಂದೆ ಬರುವ ಕಂಪನಿಗಳಿಗೆ ಸರ್ಕಾರ ಎರಡು ರೀತಿಯಲ್ಲಿ ಅವಕಾಶ ಕಲ್ಪಿಸಿದೆ. ಆರಂಭದಲ್ಲೇ ಬಂಡವಾಳ ಹೂಡಿಕೆ ಸಾಧ್ಯವಾಗದಿದ್ದರೆ ತಕ್ಷಣವೇ ಕಂಪನಿಗೆ ಸರ್ಕಾರದಿಂದ ಅನುಮತಿ ಕೊಟ್ಟು, ನಂತರ ಬಂಡವಾಳ ಹೂಡಿಕೆ ಮಾಡಲು 3 ತಿಂಗಳು ಕಾಲಾವಕಾಶ ಕೊಡಲಾಗುತ್ತದೆ. ಸುಹಾಸ್ ಕಂಪನಿಗೆ ಇದೇ ರೀತಿ ಮೊದಲಿಗೆ ಅನುಮತಿ ಪತ್ರ ಕೊಟ್ಟ ನಂತರ ಬಂಡವಾಳ ಹೂಡಿಕೆ ಮಾಡಲು 3 ತಿಂಗಳು ಅವಕಾಶ ಕೊಡಲು ತೀರ್ವನವಾಗಿದೆ. ಕೊಪ್ಪಳ ಬಳಿ ತೆರೆಯಲು ಲಕ್ಷಿ್ಮೕಮಿಲ್ಸ್ ಮುಂದೆ ಬಂದಿದೆ. ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ. ನಿಯಮಗಳಿಗೆ ಪೂರಕವಾಗಿ ಎಲ್ಲವೂ ಸರಿಯಾಗಿದ್ದರೆ ಅನುಮತಿ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
6 ಘಟಕ ಸ್ಥಾಪನೆಗೆ ಕೇಂದ್ರ ಸೂಚನೆ:ರಾಜ್ಯದಲ್ಲಿ ಕನಿಷ್ಠ 6 ಘಟಕಗಳನ್ನು ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸುತ್ತಮುತ್ತಲ ಒಂದಷ್ಟು ಜಿಲ್ಲೆಗಳನ್ನು ಸೇರಿಸಿಕೊಂಡು ಒಂದು ಘಟಕದಂತೆ ಸ್ಥಾಪನೆ ಮಾಡಲಾಗುತ್ತದೆ. ಉದಾಹರಣೆಗೆ ವಿಜಯಪುರದ ಬಳಿ ಒಂದು ಘಟಕ ಸ್ಥಾಪನೆಯಾದರೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳ ಜನ ಹಳೇ ಗಾಡಿಗಳನ್ನು ಅಲ್ಲಿಗೆ ಹಾಕಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ವಾಹನ ಖರೀದಿಗೆ ತೆರಿಗೆ ವಿನಾಯ್ತಿ: ಹಳೇ ವಾಹನಗಳನ್ನು ಗುಜರಿಗೆ ಹಾಕಿದರೆ ತೂಕದ ಲೆಕ್ಕದಲ್ಲಿ ಹಣ ನೀಡಲಾಗುತ್ತದೆ. ಜತೆಗೆ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣ ಪತ್ರವನ್ನು (ಸಿಒಡಿ) ವಿತರಿಸಲಾಗುತ್ತದೆ. ಹೊಸ ವಾಹನ ಖರೀದಿಸುವಾಗ ಆ ಪ್ರಮಾಣಪತ್ರ ತೋರಿಸಿದರೆ ಸಾರಿಗೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15 ತೆರಿಗೆ ವಿನಾಯಿತಿ ಸಿಗಲಿದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ ಹಾಗೂ ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ತೆರಿಗೆ ವಿನಾಯಿತಿ ಪಡೆಯಬಹುದಾಗಿರುತ್ತದೆ.
ತುಮಕೂರಿನ ಕೊರಟಗೆರೆ ಹಾಗೂ ದೇವನಹಳ್ಳಿ ಬಳಿ ಗುಜರಿ ಕೇಂದ್ರಗಳ ಸ್ಥಾಪನೆಗೆ ಎರಡು ಕಂಪನಿಗಳ ಜತೆ ಮಾತುಕತೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅನುಮತಿ ನೀಡಲಾಗುತ್ತಿದೆ. ಕೊಪ್ಪಳ ಬಳಿ ಘಟಕ ಸ್ಥಾಪನೆಗೆ ಒಂದು ಕಂಪನಿ ಮುಂದೆ ಬಂದಿದ್ದು, ದಾಖಲೆ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರ 6 ಘಟಕ ಸ್ಥಾಪಿಸಲು ಹೇಳಿದ್ದು, ಅದರಂತೆ ಪ್ರಕ್ರಿಯೆ ಮುಂದುವರಿಯುತ್ತಿದೆ.
| ಸಿ.ಮಲ್ಲಿಕಾರ್ಜುನ್, ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ
ಯಾವ ವಾಹನ ಗುಜರಿಗೆ?:ಗುಜರಿಗೆ ಹಾಕಲು ವಾಹನಗಳನ್ನು ಕೊಡುವ ಮುನ್ನ ವಾಹನದ ಮೇಲೆ ಯಾವುದೇ ಕ್ರಿಮಿನಲ್ ಹಿನ್ನೆಲೆ, ಕೇಸ್ ಹಾಗೂ ದಂಡ ಶುಲ್ಕ ಪಾವತಿ ಬಾಕಿ ಉಳಿಸಿಕೊಂಡಿಲ್ಲ ಎಂದು ಮಾಲೀಕ ಮುಚ್ಚಳಿಕೆ ಪತ್ರ ಬರೆದುಕೊಡಬೇಕು. ಕೇಂದ್ರದ ಮಾಲೀಕರು, ಗುಜರಿಗೆ ಹಾಕಿದ ವಾಹನ ಚಾಸ್ಸಿ ನಂಬರನ್ನು ಜೋಪಾನವಾಗಿ 6 ತಿಂಗಳು ಇಟ್ಟಿರಬೇಕು. ವಾಹನದ ಎಲ್ಲ ಭೌತಿಕ ದಾಖಲೆಗಳನ್ನು 2 ವರ್ಷದವರೆಗೆ ಹಾಗೂ ಸ್ಕಾ್ಯನ್ ದಾಖಲಾತಿಗಳನ್ನು 10 ವರ್ಷಗಳವರೆಗೆ ಸುರಕ್ಷಿತವಾಗಿ ಇಟ್ಟಿರಬೇಕು. ಅಧಿಕಾರಿಗಳು ಪರಿಶೀಲನೆ ಬಂದ ಸಂದರ್ಭದಲ್ಲಿ ದಾಖಲಾತಿಗಳನ್ನು ತೋರಿಸಬೇಕಾಗುತ್ತದೆ ಎಂದು ಷರತ್ತುಗಳನ್ನು ವಿಧಿಸಲಾಗಿದೆ.
ಘಟಕ ಸ್ಥಾಪನೆಗೆ ಬೇಕು 10 ಕೋಟಿ ರೂ.!:ಗುಜರಿ ಕೇಂದ್ರದ ಸ್ಥಾಪನೆಗೆ ಕೋಟ್ಯಂತರ ರೂ. ಬಂಡ ವಾಳ ಹೂಡಿಕೆ ಮಾಡಬೇಕಾಗುತ್ತದೆ. ಸಾರಿಗೆ ಅಧಿಕಾರಿಗಳ ಅಂದಾಜಿನ ಪ್ರಕಾರ ಒಂದು ಘಟಕ ಸ್ಥಾಪನೆಗೆ ಕನಿಷ್ಠ 10 ಕೋಟಿ ರೂ. ಬೇಕಾಗುತ್ತದೆ. ಘಟಕಕ್ಕೆ ಕನಿಷ್ಠ 5 ಎಕರೆ ಜಾಗ ಬೇಕು. 1 ಲಕ್ಷ ರೂ. ಪ್ರೊಸೆಸಿಂಗ್ ಶುಲ್ಕ ಹಾಗೂ 10 ಲಕ್ಷ ರೂ. ಠೇವಣಿ ಇಡಬೇಕು. ಯಂತ್ರಗಳ ಖರೀದಿ, ಮಾನವ ಸಂಪನ್ಮೂಲ ಎಲ್ಲದಕ್ಕೂ ಹಣ ಖರ್ಚು ಮಾಡಬೇಕು.
ಮುಂದಿನ ಜನವರಿಯಲ್ಲೇ ಅಯೋಧ್ಯೆ ರಾಮಮಂದಿರ ಉದ್ಘಾಟನೆ; ದಿನಾಂಕವೂ ನಿಗದಿ, ಇಲ್ಲಿದೆ ವಿವರ..

‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × 5 =
Remember me
