ಬೆಂಗಳೂರು:ಕೆಎಸ್​ಆರ್​ಟಿಸಿ ಬಸ್​ ಉಚಿತವಾದ ನಂತರ ನಾನಾ ರೀತಿಯ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ಕಡೆ ನಿರ್ವಾಹಕರಿಗೂ ಪ್ರಯಾಣಿಕರಿಗೂ ಜಗಳವಾದಲ್ಲಿ ಇನ್ನೂ ಕೆಲವು ಕಡೆ ನೂಕು ನುಗ್ಗಲು ಉಂಟಾಗುತ್ತಿದೆ. ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್​ ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.
ಇಡೀ ಬಸ್ಸಿನ 48 ಸೀಟುಗಳನ್ನು ರಿಸರ್ವ್ ಮಾಡಲು ವಿಚಾರಣಾ ವಿಭಾಗಕ್ಕೆ ಬಂದು ವಿಚಾರಿಸಿದ ಅಜ್ಜಿಯಎಕ್ಸ್​ಕ್ಲೂಸಿವ್​ದೃಶ್ಯಗಳುದಿಗ್ವಿಜಯ ನ್ಯೂಸ್​ಗೆ ಲಭಿಸಿವೆ.
ಇದನ್ನೂ ಓದಿ:ಶಕ್ತಿ ಯೋಜನೆಯಿಂದ ಖಾಸಗಿ ವಾಹನ ಮಾಲೀಕರಿಗೆ ಪೆಟ್ಟು.
ಮೆಜೆಸ್ಟಿಕ್​ನ KSRTC enquiry ಕೌಂಟರ್​ಗೆ ಬಂದ ಅಜ್ಜಿ ಸುನಂದಾ, ಯಾವ್ಯಾವ ಮಾರ್ಗಗಳಿಗೆ ಎಷ್ಟು ಘಂಟೆಗೆ ಬಸ್​ಗಳ ವ್ಯವಸ್ಥೆಯಿದೆ ಎಂಬ ಮಾಹಿತಿ ಪಡೆದು ಪೇಪರ್​ನಲ್ಲಿ ಬರೆದುಕೊಂಡಿದ್ದಾರೆ.
ಸುನಂದಾ ಬೆಂಗಳೂರಿನ ಬ್ಯಾಡರಹಳ್ಳಿಯ ನಿವಾಸಿಯಾಗಿದ್ದು ತಮ್ಮ ಇಡೀ ತಂಡದೊಂದಿಗೆ 4-5 ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳ ವಿಸಿಟ್​ಗೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರು ಸದ್ಯ 20 ಜನರ ತಂಡ ಮಾಡಿಕೊಂಡಿದ್ದು, ಇನ್ನೂ 20 ಜನರನ್ನು ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:KSRTC ಬಸ್​ ಸಿಬ್ಬಂದಿಯ ಸಾಹಸಕ್ಕೆ ಕಳ್ಳ ಸೆರೆ! ಪ್ರಯಾಣಿಕನ 5 ಲಕ್ಷ ರೂ. ಸೇಫ್​…
ಅಜ್ಜಿಯ ಹಂಚಿಕೆ ಪ್ರಕಾರ ಮನೆಯ ಮಹಿಳಾ ಕುಟುಂಬಸ್ಥರು ಹಾಗೂ ಮಹಿಳಾ ಸಂಘ ಸಂಸ್ಥೆಯವರು ಸೇರಿ ಒಟ್ಟು 48 ಜನ್ರ ಸೀಟ್ ರಿಸರ್ವ್ ಮಾಡಿಕೊಳ್ಳಲಾಗುತ್ತದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − four =
Remember me
