ಕಲಬುರಗಿ:ಇಂಥ ಸಾವು ಯಾರಿಗೂ ಬರಬಾರದು ಎಂಬಂಥ ಸಾವೊಂದು ಸಂಭವಿಸಿದೆ. ಇಲ್ಲೊಬ್ಬರು ವೃದ್ಧೆಯನ್ನು ಜೀವಂತ ಇರುವಾಗಲೇ ಬೀದಿನಾಯಿಗಳು ತಿಂದು ಹಾಕಿವೆ. ಕಲಬುರಗಿ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲಗಾಣಗಾಪುರದಲ್ಲಿ ಈ ಘಟನೆ ನಡೆದಿದೆ. ದೇವಲಗಾಣಗಾಪುರದ ಗಾಂಧಿನಗರದ ಬಳಿ ನಿನ್ನೆ ರಾತ್ರಿ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ಕಚ್ಚಿ ಕಚ್ಚಿ ತಿಂದು ಹಾಕಿವೆ.
ಈ ವೃದ್ಧೆಗೆ ಮೂರು ನಾಲ್ಕು ದಿನಗಳ ಹಿಂದೆ ಟಂಟಂ ಗೂಡ್ಸ್ ವಾಹನ ಡಿಕ್ಕಿ ಹೊಡೆದಿತ್ತು. ಆಗ ಈಕೆಯ ಕಾಲಿಗೆ ಗಾಯವಾಗಿತ್ತು. ಆಸ್ಪತ್ರೆಗೆ ತೋರಿಸಿದ್ದ ಟಂಟಂ ಚಾಲಕ, ಬಳಿಕ ದೇವಲಗಾಣಗಾಪುರದ ಗಾಂಧಿನಗರದ ರಸ್ತೆ ಪಕ್ಕದಲ್ಲಿ ಹಾಕಿ ಹೋಗಿದ್ದ.
ಹೀಗಾಗಿ ಅಲ್ಲೇ ಮಲಗಿದ್ದ ವೃದ್ಧೆಯನ್ನು ಬೀದಿನಾಯಿಗಳು ತಿಂದು ಹಾಕಿದ್ದು, ಸಾವಿಗೀಡಾದ ವೃದ್ಧೆಗೆ ದೇವಲಗಾಣಗಾಪುರ ಗ್ರಾಮಸ್ಥರು ಹಾಗೂ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ. ಈಕೆಯ ಹೆಸರು ಇತ್ಯಾದಿ ವಿವರ ಇನ್ನೂ ತಿಳಿದುಬಂದಿಲ್ಲ. ದೇವಲಗಾಣಗಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!
ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸು: ನಾಳೆ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
