ಬೆಂಗಳೂರು:ಬಾಣಸವಾಡಿಯಲ್ಲಿ ಸೆ.2ರಂದು ನಡೆದಿದ್ದ ಹಾಡಹಗಲೇ ವೃದ್ಧೆಯೊಬ್ಬರ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಅವರು ಬಾಯ್ಬಿಟ್ಟ ಸತ್ಯ ಬೆಚ್ಚಿಬೀಳಿಸುವಂತಿದೆ.
ವೃದ್ಧೆ ಕಾಂತಮ್ಮ (70) ಕೊಲೆಯಾದವರು. ರಾಮಸ್ವಾಮಿಪಾಳ್ಯ ನಿವಾಸಿ ಜಾನ್​ ಜೋಸೆಫ್​​ (75) ಮತ್ತು ಈತನ ಪುತ್ರಿ ಮಲಿರ್ನ್​ (48) ಬಂಧಿತರು. ತಂದೆ-ಮಗಳು ಇಬ್ಬರೂ ಸೇರಿಕೊಂಡು ವೃದ್ಧೆಯನ್ನು ಹಾಡಹಗಲೇ ಹತ್ಯೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಇದನ್ನೂ ಓದಿರಿಅಕ್ರಮವಾಗಿ ಮರಳು ತೆಗೆಯಲು ಅಪ್ಪನ ಜತೆ ಹೋಗಿದ್ದ ಯುವತಿ ಅಲ್ಲೇ ಪ್ರಾಣಬಿಟ್ಟಳು!
ತಮಿಳುನಾಡು ಮೂಲದ ಜಾನ್​ ಜೋಸೆಫ್​ ಬೆಂಗಳೂರಿನಲ್ಲಿ ಪೇಂಟಿಂಗ್​ ಕೆಲಸ ಮಾಡಿಕೊಂಡಿದ್ದ. ಈತನ ಪುತ್ರಿ ಮಲಿರ್ನ್​ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಮಸ್ವಾಮಿಪಾಳ್ಯದ ಕಾಂತಮ್ಮ ಅವರ ಮನೆಯಲ್ಲಿ ಇವರಿಬ್ಬರೂ ಬಾಡಿಗೆಗೆ ಇದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಜೋಸೆಫ್​​ ಚಿಕಿತ್ಸೆಗಾಗಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಅಲ್ಲದೆ, ಲಾಕ್​ಡೌನ್​ ವೇಳೆ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಸಾಲ ತೀರಿಸುಂವತೆ ಸಾಲಗಾರರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು.
ವೃದ್ಧೆ ಕಾಂತಮ್ಮನ ಪುತ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಎಚ್​ಎಸ್​ಆರ್​ ಲೇಔಟ್​ನಲ್ಲಿ ವಾಸವಿದ್ದ. ಮಾನಸಿಕ ಅಸ್ವಸ್ಥ ಪುತ್ರಿ ಕಾಂತಮ್ಮ ಜತೆ ನೆಲೆಸಿದ್ದಳು. ಕಾಂತಮ್ಮ ಮನೆ ಬಾಡಿಗೆ ಹಣವನ್ನು ತಾನೇ ಸಂಗ್ರಹಿಸುತ್ತಿದ್ದಳು. ಆಕೆ ಬಳಿ ಹಣ ಮತ್ತು ಚಿನ್ನಾಭರಣ ಇರುವ ಬಗ್ಗೆ ಜೋಸೆಫ್​​ಗೆ ಗೊತ್ತಾಗಿತ್ತು. ಮನೆಯಲ್ಲಿ ದರೋಡೆ ಮಾಡುವ ಬಗ್ಗೆ ಸೆ.1ರ ರಾತ್ರಿ ಪುತ್ರಿ ಮಲಿರ್ನ್​ ಜತೆ ಸಂಚು ರೂಪಿಸಿದ್ದ.
ಇದನ್ನೂ ಓದಿರಿಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳು!
ಕಾಂತಮ್ಮ ಸೆ.2ರ ಬೆಳಗ್ಗೆ 10 ಗಂಟೆಯಲ್ಲಿ ಪುತ್ರಿ ಮಂಜುಳಾ ಜತೆ ಮನೆಯಲ್ಲಿದ್ದರು. ಮಂಜುಳಾಗೆ ಆಧಾರ್​ಕಾರ್ಡ್​ ಮಾಡಿಸಿಕೊಡುವುದಾಗಿ ಹೇಳಿದ್ದ ಮಲಿರ್ನ್​, ಮನೆಯಿಂದ ಆಕೆಯನ್ನು ಹೊರಗೆ ಕರೆದೊಯ್ದಿದ್ದಳು. ಇದೇ ವೇಳೆ ಮನೆಗೆ ನುಗ್ಗಿದ್ದ ಜೋಸೆಫ್​, ಕಾಂತಮ್ಮರ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಬಳಿಕ ಮರ್ಲಿನ್​ಳನ್ನು ಕರೆಸಿಕೊಂಡು ವೃದ್ಧೆಯ ಮೈಮೇಲಿದ್ದ 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ತನಿಖೆ ಕೈಗೊಂಡ ಪೊಲೀಸರು ಕೃತ್ಯ ನಡೆದ ಮನೆಯ ಸುತ್ತಮುತ್ತಲಿನ ರಸ್ತೆಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ವೃದ್ಧೆಯ ಪುತ್ರಿಯನ್ನು ಮಲಿರ್ನ್​ ಹೊರಗೆ ಕರೆದೊಯ್ದಿರುವುದು ಹಾಗೂ ಜೋಸೆಫ್​ ಅನುಮಾನಾಸ್ಪದವಾಗಿ ಹೋಗಿರುವ ದೃಶ್ಯ ಕಂಡು ಬಂದಿತ್ತು. ಅವರಿಬ್ಬರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್​.ಡಿ. ಶರಣಪ್ಪ ತಿಳಿಸಿದ್ದಾರೆ. ತಪ್ಪೊಪ್ಪಿಕೊಂಡಿದ್ದಾರೆ. ದರೋಡೆ ಮಾಡಿದ್ದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
