ಧಾರವಾಡ:ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾದ ಮಹಿಳೆಯರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ ಇಂದು ಜಾರಿಗೆ ಬಂದಿದೆ. ರಾಜ್ಯದ ವಿವಿಧೆಡೆಗಳಲ್ಲಿ ಮಹಿಳೆಯರು ಬಸ್​ ಏರಿ ಉಚಿತ ಪ್ರಯಾಣವನ್ನು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ:ಉಚಿತ ಪ್ರಯಾಣಕ್ಕೆ ಚಾಲನೆ ನೀಡಿ ತಾವೇ ಬಸ್ ಚಲಾಯಿಸಿದ ಸ್ವಾಮೀಜಿ; ಸುಮಾರು 5 ಕಿ.ಮೀ. ಸಂಚಾರ!
ಧಾರವಾಡದಲ್ಲೂ ವೃದ್ಧೆಯೊಬ್ಬರು ಈ ಯೋಜನೆಯ ಪ್ರಯೋಜನ ಪಡೆದಿದ್ದು, ಅವರು ಬಸ್ ಏರಿದ ಪರಿ ಗಮನ ಸೆಳೆದಿದೆ. ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ನಿಂಗವ್ವ ಸಂಗಾಡಿ ಎಂಬಾಕೆ ಧಾರವಾಡದಲ್ಲಿ ಬಸ್​​ಗೆ ತಲೆ ಬಾಗಿ ನಮಿಸಿ ಪ್ರವೇಶ ಮಾಡಿದ್ದಾರೆ. ಅವರು ಹೀಗೆ ಬಸ್ಸನ್ನೇರಿದ ಫೋಟೋ ವೈರಲ್ ಆಗಿದ್ದು, ಮೆಚ್ಚುಗೆಗೂ ಪಾತ್ರವಾಗುತ್ತಿದೆ.
ಇದನ್ನೂ ಓದಿ:ಅವನನ್ನು ಸೋಲಿಸಿ ಎಂದು ದೇವೇಗೌಡ್ರು ಎದೆ ಬಡ್ಕಂಡ್ರು, ಆದ್ರೂ ನಾನು ಹೆಚ್ಚಿನ ಅಂತರದಲ್ಲಿ ಗೆದ್ದೆ: ಸಚಿವ ಕೆ.ಎನ್.ರಾಜಣ್ಣ
ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದಿದ್ದ ಇವರು ಅಲ್ಲಿಂದ ಮೊಮ್ಮಗನ ಗೃಹಪ್ರವೇಶಕ್ಕಾಗಿ ಸವದತ್ತಿಗೆ ಹೊರಟಿದ್ದರು. ಧಾರವಾಡಕ್ಕೆ ಬಂದಾಗ ಶಕ್ತಿ ಯೋಜನೆಯ ಉದ್ಘಾಟನೆಗಾಗಿ ಶೃಂಗಾರಗೊಂಡಿದ್ದ ಬಸ್ ಸಿಕ್ಕಿತ್ತು. ಇದೇ ಬಸ್​ಗೆ ಹೊರಟ ಅಜ್ಜಿ ಬಸ್​ನ ಮೆಟ್ಟಿಲುಗಳಿಗ ತಲೆಬಾಗಿ ನಮಸ್ಕರಿಸಿ ಪ್ರವೇಶ ಮಾಡಿದ್ದರು. ಬಸ್​ ಹೊರಡುವಾಗಲೂ ‘ಉಧೋ ಉಧೋ’ ಎಂದು ಜಯಘೋಷ ಕೂಗಿ ನಿಂಗವ್ವ ಸಂಭ್ರಮಿಸಿದ್ದಾರೆ.
ಮತ್ತೊಂದು ಲವ್ ಜಿಹಾದ್: ಹಿಂದೂ ಯುವತಿಗೆ ಸುಳ್ಳು ಹೇಳಿ ಪ್ರೀತಿಯ ಸೋಗಲ್ಲಿ ಮೋಸ; ಬಳಿಕ ಕಿರುಕುಳ, ಕೊಲೆ ಬೆದರಿಕೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
