ಹಾವೇರಿ:ಸಣ್ಣ ವಯಸ್ಸಲ್ಲೇ ಇಂಟರ್‌ನೆಟ್, ಮೊಬೈಲ್ ಗೇಮ್, ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಮುಳುಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಯುವ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾರೆ ಈ ಅಜ್ಜಿ. 88ರ ಹರೆಯದಲ್ಲೂ 18ರ ಉತ್ಸಾಹ ತೋರುವ ಈ ಅಜ್ಜಿ ಆಟಕ್ಕೂ ಸೈ, ಊಟಕ್ಕೂ ಸೈ, ಓಟಕ್ಕೂ ಸೈ ಅಂತಾರೆ. ಹಿರಿಯ ನಾಗರಿಕರ ಸ್ಪರ್ಧೆಯಲ್ಲಿ ಬರೋಬ್ಬರಿ 20 ಮೆಡಲ್ ಗೆಲ್ಲುವ ಮೂಲಕ ಯುವಜನತೆಗೆ ಮಾದರಿ ಎನಿಸಿದ್ದಾರೆ.
ಹಾವೇರಿಯ ಜಯದೇವ ನಗರ ಈಶ್ವರ ಗುಡಿ ಪಕ್ಕದ ನಿವಾಸಿ ಸಿದ್ದಮತಿ ಮಹಾಲಿಂಗಪ್ಪ ನೆಲವಗಿ ಇಳಿ ವಯಸ್ಸಲ್ಲೂ ಉತ್ಸಾಹದ ಗಣಿಯಂತೆ ಸದಾ ಚಟುವಟಿಕೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಹಿರಿಯ ನಾಗರಿಕರ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸಿದ್ಧಮತಿ ಅವರು 16 ಚಿನ್ನದ ಪದಕ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
100 ಮೀಟರ್ ವೇಗದ ನಡಿಗೆ, ಜಾನಪದ ಗಾಯನ, ಚಿತ್ರಕಲೆ ಸ್ಪರ್ಧೆ, ಕವಿತೆ, ಕಾವ್ಯ ರಚನೆ, ನಾಟಕ ರಚನೆ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಈ ಅಜ್ಜಿ ಮಿಂಚಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಮತ್ತು ಹಿಂದಿ ವಿಷಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿರುವ ಸಿದ್ದಮತಿ ಹಿಂದುಸ್ತಾನಿ ಸಂಗೀತವನ್ನೂ ಬಲ್ಲರು. ತಬಲ, ಸಿತಾರ ಸೇರಿದಂತೆ ಐದು ವಾದ್ಯಗಳನ್ನು ನುಡಿಸಬಲ್ಲರು. ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ 81ರಿಂದ 90 ವರ್ಷದವರ ಸ್ಪರ್ಧೆಯಲ್ಲಿ 100 ಮೀಟರ್ ವೇಗದ ನಡಿಗೆಯನ್ನು ಕೇವಲ 2.30 ನಿಮಿಷದಲ್ಲಿ ತಲುಪಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಹಮಾಸ್​ ರೀತಿಯಲ್ಲಿ ದಾಳಿ ಮಾಡಬೇಕಾಗುತ್ತೆ… ಭಾರತಕ್ಕೆ ಖಲಿಸ್ತಾನಿ ಉಗ್ರನ ಬೆದರಿಕೆ!
35 ನಾಟಕ ರಚನೆಈವರೆಗೆ ಸುಮಾರು 35 ನಾಟಕಗಳನ್ನು ರಚಿಸಿದ್ದೇನೆ. ರೇಡಿಯೋ, ಮಠ, ಮಂದಿರಗಳಲ್ಲಿ ಕೆಲ ನಾಟಕಗಳು ಪ್ರದರ್ಶನಗೊಂಡಿವೆ. ಪಂಚಾಕ್ಷರಿ ಮಂತ್ರ ಮಹಿಮೆ, ಅತಿವೃಷ್ಠಿ- ಅನಾವೃಷ್ಠಿ, ಉಡುತಡಿಯ ಉಡುಗೊರೆ ಎಂಬ ನಾಟಕಗಳು ಧಾರವಾಡ ಆಕಾಶವಾಣಿಯಲ್ಲಿ ಪ್ರದರ್ಶನಗೊಂಡಿವೆ. ಕೈಬರಹದಲ್ಲಿ ನಾಟಕಗಳನ್ನು ಬರೆದು ಇಟ್ಟಿದ್ದೇನೆ. ಇವುಗಳನ್ನು ಪ್ರಕಟಿಸಬೇಕು. ಪ್ರಚಾರ ಪಡೆಯಬೇಕು ಎಂಬ ಹಂಬಲ ನನ್ನಲ್ಲಿಲ್ಲ. ಯಾರಾದರೂ ಪ್ರಕಾಶಕರು ಮುಂದೆ ಬಂದರೆ ನೋಡೋಣ ಎಂದು ಸಿದ್ದಮತಿ ಅಮಾಯಕ ನುಡಿಗಳನ್ನಾಡಿದರು.
ಸ್ವತಂತ್ರ ಹೋರಾಟಕ್ಕೆ ಸಹಕಾರಮೂಲತಃ ಕಿತ್ತೂರಿನವರಾದ ಸಿದ್ದಮತಿ ಧಾರವಾಡದಲ್ಲಿ ಹುಟ್ಟಿ ಬೆಳೆದರು. ಬಾಲ್ಯದಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ನಡೆದಿದ್ದ ಸ್ವಾತಂತ್ರೃ ಚಳವಳಿಯಲ್ಲಿ ನೇರವಾಗಿ ಧುಮುಕದಿದ್ದರೂ, ಪರೋಕ್ಷವಾಗಿ ಸಹಕಾರ ನೀಡಿದ್ದರು. ಕಾರ್ಯಕ್ರಮಗಳಲ್ಲಿ ಹಾಡು ಹಾಡುವುದು, ಪತ್ರಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಸ್ನೇಹಿತರೊಡನೆ ಮಾಡುತ್ತಿದ್ದೆ ಎಂದು ಸಿದ್ದಮತಿ ನೆನೆದರು.
ಸುಮ್ಮನೆ ಕುಳಿತು ನನಗೆ ಅಭ್ಯಾಸವಿಲ್ಲ. ಮನೆಯಲ್ಲಿ ಏನಾದರೊಂದು ಕೆಲಸ ಮಾಡುತ್ತಿರುತ್ತೇನೆ. ಈಗಲೂ ರೊಟ್ಟಿ, ಚಪಾತಿ ಮಾಡುತ್ತೇನೆ. ನಿತ್ಯವೂ ವಾಕಿಂಗ್, ಅಕ್ಕಪಕ್ಕದ ಮಕ್ಕಳಿಗೆ ಹಾಡು, ಚಿತ್ರಕಲೆ, ನಾಟಕ, ಸಂಗೀತ ಹೇಳಿಕೊಡುತ್ತೇನೆ. ಈ ಹವ್ಯಾಸದಿಂದಲೇ ಇಳಿ ವಯಸ್ಸಲ್ಲೂ ನಾನು ಆರೋಗ್ಯವಾಗಿದ್ದೇನೆ.
– ಸಿದ್ದಮತಿ ನೆಲವಗಿ, ಹಾವೇರಿಯ ಸಾಧಕಿ ಅಜ್ಜಿ
ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

ಕಾಡಂಚಿನ ಸಮುದಾಯಗಳ ಸಮಸ್ಯೆ ಸಿಎಂ ಸಿದ್ದರಾಮಯ್ಯ ಸ್ಪಂದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + two =
Remember me
