ಸಿಂಧನೂರು:ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈ ಬಾರಿ ಎಂಬತ್ತಕ್ಕೂ ಅಧಿಕ ವರ್ಷದ ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡಲು ಆಯೋಗ ಅವಕಾಶ ನೀಡಲಾಗಿದೆ. ಈಗಾಗಲೇ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಅಶಕ್ತರ ಮನೆಗೆ ತೆರಳಿ ಚುನಾವಣಾ ಅಧಿಕಾರಿಗಳು ಮತದಾನ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ:ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಪ್ರಸ್ತಾಪ | ‘ಕೈ’ ನಾಯಕರಲ್ಲೇ ಗೊಂದಲ; ನಿಷೇಧ ಕೈಬಿಡುವಂತೆ ಹಲವರಿಂದ ಒತ್ತಾಯ
ಇದೀಗ ಅಜ್ಜಿಯೊಬ್ಬರು ಮನೆಯಲ್ಲಿ ಮತದಾನ ಮಾಡಿದ ಅರ್ಧಗಂಟೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಲೂಕಿನ ಅಲಬನೂರು ಗ್ರಾಮದ ಮಂಗಮ್ಮ ರಾಜಪ್ಪ ಅಗಸರ(82) ಮೃತಪಟ್ಟ ಅಜ್ಜಿ. ಈ ವಿಷಯವನ್ನು ಸಹಾಯಕ ಚುನಾವಣಾಧಿಕಾರಿ ಅರುಣ ಎಚ್.ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:‘ಗಂಭೀರ’ ಸಮಸ್ಯೆಯಿದ್ದರೆ ಕರೆ ಮಾಡಿ… ‘ವಿರಾಟ’ ರೂಪದಲ್ಲಿ ಸಹಾಯ ಮಾಡುತ್ತೇವೆ; ವೈರಲ್ ಆಯ್ತು ಹು-ಧಾ ಪೊಲೀಸರ ಟ್ವೀಟ್
ಪಿಆರ್‌ಓ ದಿನೇಶ ಕೆ.ಪಿ ಹಾಗೂ ಎಪಿಆರ್‌ಓ ಬಸಪ್ಪ ಹೆಚ್. ಹಾಗೂ ಸಿಬ್ಬಂದಿ ಮಂಗಮ್ಮ ಅವರ ಮನೆಗೆ ತೆರಳಿದ್ದರು. ಮತಪತ್ರ ಸಂಖ್ಯೆ 349 ಪಡೆದು ಮಧ್ಯಾಹ್ನ 12.20ರ ಸುಮಾರಿಗೆ ಮತದಾನ ಮಾಡಿದ್ದರು. ಇದಾಗಿ 12.50 ಸುಮಾರಿಗೆ ಅಜ್ಜಿ ನಿಧನರಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
