ಬೆಂಗಳೂರು: ಸ್ಯಾಂಡಲ್​​ವುಡ್​​ ನಟ ಪ್ರಥಮ್​​ ಗುಟ್ಟಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಸರಳವಾಗಿ ಎಂಗೇಜ್‌ ಆಗಿರುವ ವಿಚಾರವನ್ನು ಪ್ರಥಮ್​​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಉಂಗುರ ಧರಿಸಿರುವ ಕೈಗಳ ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಥಮ್ ”ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್‌ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜತೆಯಾಗಿದ್ದೇನೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ, ನನ್ನ ಎಂಗೇಜ್‌ಮೆಂಟ್‌ ಈ ದೇಶದ ದೊಡ್ಡ ಸುದ್ದಿಯಲ್ಲ‌. ಆದರೆ ನನ್ನ ಇಷ್ಟಪಡುವ ಸ್ನೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಎನ್ನೋ ಕಾರಣಕ್ಕೆ ನಿಮಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆಯಾಗಿದೆ. ನನಗೆ ಹಾಗೇ ಇರೋಕೆ ಇಷ್ಟ, ಹೀಗೇ ಇದ್ದು ಬಿಡುತ್ತೇನೆ, ಹರಸುವವರು ಅಲ್ಲಿಂದಲೇ ಹರಸಿ, ಅದೇ ಆಶೀರ್ವಾದ‌” ಎಂದು ಪ್ರಥಮ್‌ ಬರೆದುಕೊಂಡಿದ್ದಾರೆ.
ಮದುವೆ ಯಾವಾಗ? ನಿಮ್ಮದು ಲವ್‌ ಮ್ಯಾರೇಜ್‌ ಅಥವಾ ಅರೇಂಜ್‌ ಮ್ಯಾರೇಜ್?‌ ಶುಭಾಶಯಗಳು ಎಂದು ಕಾಮೆಂಟ್​ ಮಾಡುತ್ತಾ ಅಭಿಮಾನಿಗಳು ಶುಭಹಾರೈಸಿದ್ದಾರೆ.
ಇದನ್ನೂ ಓದಿ:ನಟ ವಿಜಯ್ ಜತೆಗಿನ ಪ್ರೇಮ ಪುರಾಣವನ್ನು ಬಿಚ್ಚಿಟ್ಟ ನಟಿ ತಮನ್ನಾ ಭಾಟಿಯಾ: ಇವರಿಬ್ಬರ ನಡುವ ಪ್ರೀತಿ ಅರಳಿದ್ದು ಯಾವಾಗ..?
ನನಗೆ ಹುಡುಗಿ ಗೊತ್ತಾಗಿದೆ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಹುಡುಗಿ ಯಾರು ಎನ್ನುವದನ್ನು ಬಹಿರಂಗ ಪಡಿಸಿರಲಿಲ್ಲ. ಈಗಲೇ ಆಕೆಯ ಹೆಸರು, ಮಾಹಿತಿ ಆಕೆಗೆ ಅದು ಕಿರಿಕಿರಿ ಎನಿಸಬಹುದು ಎಂದು ಹೇಳಿದ್ದರು.
ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ ಬಾಸ್‌ ಕಾರ್ಯಕ್ರಮದ ಮೂಲಕ ಪ್ರಥಮ್‌ ಪರಿಚಯ.  ಎಂಎಲ್‌ಎ, ದೇವರಂಥಾ ಮನುಷ್ಯ, ರಾಜು ಕನ್ನಡ ಮೀಡಿಯಂ, ನಟ ಭಯಂಕರ ಸಿನಿಮಾಗಳಲ್ಲಿ ಪ್ರಥಮ್‌ ನಾಯಕನಾಗಿ ನಟಿಸಿದ್ದಾರೆ.
ಟೋಲ್ ದರ ಏರಿಕೆ: ಬೆಂ-ಮೈ ಹೆದ್ದಾರಿಗೆ ಇಳಿಯಲು ವಾಹನ ಸವಾರರು ಹಿಂದೇಟು, ಸರ್ವೀಸ್ ರಸ್ತೆ ಕಡೆ ಮುಖ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
