ಮಂಗಳೂರು:ಹಿಜಾಬ್​ ವಿವಾದದಿಂದ ಶುರುವಾದ ಕೋಮುಸಂಘರ್ಷ ಶಾಲೆಯ ವಾತಾವರಣದಿಂದ ಮಸೀದಿ-ಮಂದಿರದ ಆವರಣದವರೆಗೂ ಬಂದಿದ್ದು, ಇದೀಗ ಆಜಾನ್​ಗೆ ಓಂಕಾರದ ಸವಾಲು ಕೇಳಿಬಂದಿದೆ. ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಇಂಥದ್ದೊಂದು ಸವಾಲೆಸೆದಿದ್ದಾರೆ.
ಮಸೀದಿಗಳಲ್ಲಿ ಲೌಡ್​ಸ್ಪೀಕರ್​ ಮೂಲಕ ಆಜಾನ್​ ಕೂಗುವ ವಿಚಾರವಾಗಿ ಮಾತನಾಡಿರುವ ಮುತಾಲಿಕ್, ಆಜಾನ್ ಮೈಕ್ ತೆಗೆಸಲು ಗಡುವು ನೀಡಿದ್ದರೂ ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಹೀಗಾಗಿ ನಾವು ರಾಜ್ಯದ 1 ಸಾವಿರ ದೇವಸ್ಥಾನ-ಮಠಗಳಲ್ಲಿ ಮೇ 9ರಂದು ಮೈಕ್ ಮೂಲಕ ಓಂಕಾರ-ಸುಪ್ರಭಾತ ಹಾಕಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.
ಆಜಾನ್​ಗೆ ಪ್ರತಿಯಾಗಿ ಕೈಗೊಳ್ಳಲಿರುವ ನಮ್ಮ ಈ ಚಳವಳಿ ತಡೆಯಲು ಮುಂದಾದರೆ ಸಂಘರ್ಷ ನಡೆಯುತ್ತದೆ. ಮೈಕ್​ನಲ್ಲಿ ಆಜಾನ್​ ಹೊಮ್ಮುವುದು ನಿಲ್ಲದೇ ಇದ್ದರೆ ನಾವೂ ಮೈಕ್​ನಲ್ಲಿ ನಮ್ಮ ಸುಪ್ರಭಾತ, ಓಂಕಾರ ನಿಲ್ಲಿಸುವುದಿಲ್ಲ. ಈ ಹೋರಾಟಕ್ಕೆ ಎಲ್ಲ ಹಿಂದೂ ಸಂಘಟನೆಗಳು, ಸ್ವಾಮೀಜಿಗಳು, ಧರ್ಮದರ್ಶಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಆಜಾನ್​ ಮೈಕ್ ಇಳಿಸಿದಂತೆ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕು. ಬರೀ ನೋಟಿಸ್ ನೀಡುವ ನಾಟಕ ಮಾಡಬೇಡಿ, ಸರ್ಕಾರ ಇನ್ನಾದರೂ ಧೈರ್ಯ ತೋರಲಿ ಎಂದು ಮಂಗಳೂರಿನಲ್ಲಿ ಇಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಒಂದು ಫೋಟೋ ಪೋಸ್ಟ್ ಮಾಡಿ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ನಿರ್ದೇಶಕ!

ಕುಟುಂಬ ರಾಜಕಾರಣ ಏಯ್ಡ್ಸ್​ ಥರ, ಎಲ್ಲ ಪಕ್ಷದಲ್ಲೂ ಇದೆ: ಯತ್ನಾಳ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + eighteen =
Remember me
